ಕರ್ನಾಟಕ

karnataka

LIVE UPDATES.. ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ವಿಸ್ತರಣೆ ಪ್ರಸ್ತಾಪವಿಲ್ಲ

By

Published : Apr 25, 2021, 6:52 AM IST

Published : Apr 25, 2021, 6:52 AM IST

Updated : Apr 25, 2021, 2:13 PM IST

Covid 2.0- Live Update
ಕೋವಿಡ್ ಎರಡನೇ ಅಲೆ

14:03 April 25

ಇಂದಿರಾ ಕ್ಯಾಂಟೀನ್​ನಲ್ಲಿ ಪಾರ್ಸೆಲ್ ವ್ಯವಸ್ಥೆ

ಸುರೇಶ್, ಇಂದಿರಾ ಕ್ಯಾಂಟೀನ್ ನಿರ್ದೇಶಕ
  • ಚಾಮರಾಜನಗರದಲ್ಲಿ ಕರ್ಫ್ಯೂ ಎಫೆಕ್ಟ್
  • ಇದೇ ಮೊದಲ ಬಾರಿಗೆ ಇಂದಿರಾ ಕ್ಯಾಂಟೀನ್​ನಲ್ಲಿ ಪಾರ್ಸೆಲ್ ವ್ಯವಸ್ಥೆ
  • ಸೋಂಕು ಹರಡುವಿಕೆ ತಡೆಗಟ್ಟಲು ಪರ್ಯಾಯ ಉಪಾಯ
  • ಆಹಾರ ಕೆಡದಂತೆ ಪ್ಯಾಕ್ ಮಾಡಿ ವಿತರಣೆ 

13:25 April 25

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

ಗೃಹ ಸಚಿವ ಬಸವರಾಜ ಬೊಮ್ಮಾಯಿ
  • ವೀಕೆಂಡ್ ಕರ್ಫ್ಯೂ ವಿಸ್ತರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ
  • ಜನರು ಸ್ವಯಂ ಪ್ರೇರಣೆಯಿಂದ ಓಡಾಟ ಕಡಿಮೆ ಮಾಡಬೇಕು
  • ಇದರಿಂದ ಕೊರೊನಾ ನಿಯಂತ್ರಣ ಸಾಧ್ಯವಾಗಲಿದೆ
  • ಕೇಂದ್ರ ಸರ್ಕಾರ ಆಮ್ಲಜನಕ ಹಂಚಿಕೆ ಹೆಚ್ಚಿಸಿದೆ
  • ಇಂದು ಸಂಜೆಯ ವೇಳೆಗೆ ಹೆಚ್ಚುವರಿ ಆಕ್ಸಿಜನ್ ಬರಲಿದೆ
  • ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

13:06 April 25

ದಕ್ಷಿಣ ಕನ್ನಡದಲ್ಲಿ ವೀಕೆಂಡ್​ ಕರ್ಫ್ಯೂಗೆ ಉತ್ತಮ ಪ್ರತಿಕ್ರಿಯೆ

ಪುತ್ತೂರಿನಲ್ಲಿ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು
  • ವೀಕೆಂಡ್ ಕರ್ಫ್ಯೂಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ
  • ಪುತ್ತೂರು ನಗರ ಸಂಪೂರ್ಣ ಬಂದ್
  • ಅಲ್ಲಲ್ಲಿ ತಪಾಸಣೆ ಮಾಡುತ್ತಿರುವ ಪೊಲೀಸರು
  • ಅನಗತ್ಯ ಓಡಾಡ ಮಾಡಿದರೆ ವಾಹನ ಸೀಜ್
  • ಪ್ರಯಾಣಿಕರಿಲ್ಲದ ಕಾರಣ ಬಸ್​ ಸಂಚಾರ ಸ್ಥಗಿತ

13:03 April 25

ಸಾಂಸ್ಕೃತಿಕ ನಗರಿ ಸಂಪೂರ್ಣ ಬಂದ್

  • ವೀಕೆಂಡ್​ ಕರ್ಫ್ಯೂನಿಂದ ಮೈಸೂರು ನಗರ ಸಂಪೂರ್ಣ ಬಂದ್
  • ಪ್ರಯಾಣಿಕರಿಲ್ಲದ ಕಾರಣ ಬಸ್​ ಸೇವೆ ಸ್ಥಗಿತ
  • ಬೀಕೋ ಎನ್ನುತ್ತಿರುವ ಬಸ್​ ನಿಲ್ದಾಣಗಳು
  • ವಾಹನಗಳನ್ನು ತಪಾಸಣೆ ಮಾಡಿ ಬಿಡುತ್ತಿರುವ ಪೊಲೀಸರು

12:51 April 25

ಅನಗತ್ಯವಾಗಿ ರಸ್ತೆಗಿಳಿದವರ ವಾಹನ ಜಪ್ತಿ

  • ಚಾಮರಾಜನಗರದಲ್ಲಿ ವೀಕೆಂಡ್ ಕರ್ಫ್ಯೂ
  • ಆಸ್ಪತ್ರೆ, ಮೆಡಿಕಲ್ ಶಾಪ್ ಬಿಟ್ಟು ಎಲ್ಲವೂ ಬಂದ್
  • ಅನಗತ್ಯವಾಗಿ ರಸ್ತೆಗಿಳಿದವರ ವಾಹನ ಜಪ್ತಿ ಮಾಡಿದ ಪೊಲೀಸರು
  • ಸರಕು ಸಾಗಣೆ ವಾಹನ ಮತ್ತು ಸಾರಿಗೆ ಬಸ್​ಗಳ ಓಡಾಟಕ್ಕೆ ಅವಕಾಶ
  • ನಗರದಾದ್ಯಂತ ಪೊಲೀಸ್ ಸರ್ಪಗಾವಲು

12:42 April 25

ವಾರಾಂತ್ಯದ ಕರ್ಫ್ಯೂಗೆ ಸಿಲಿಕಾನ್ ಸಿಟಿ ಸ್ತಬ್ಧ

  • ವೀಕೆಂಡ್​ ಕರ್ಫ್ಯೂಗೆ ಸ್ತಬ್ಧವಾದ ಬೆಂಗಳೂರು
  • ಔಷಧಿ ಮಳಿಗೆ ಹೊರತುಪಡಿಸಿ ಎಲ್ಲವೂ ಬಂದ್
  • ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
  • ಮೇ 4 ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ
  • ಮೇ 5 ರಂದು ಸಹಜ ಸ್ಥಿತಿಗೆ ಬರುವ ಸಾಧ್ಯತೆ

12:06 April 25

ಮುಂದಿನ ಸೋಮವಾರದವರೆಗೆ ಲಾಕ್​ಡೌನ್

ಲಾಕ್​ಡೌನ್ ವಿಸ್ತರಿಸಿ ದೆಹಲಿ ಸಿಎಂ ಘೋಷಣೆ
  • ದೆಹಲಿಯಲ್ಲಿ ಲಾಕ್​ಡೌನ್ ವಿಸ್ತರಣೆ
  • ಒಂದು ವಾರ ಕಾಲ ಲಾಕ್​ ಡೌನ್​ ವಿಸ್ತರಿಸಿರುವುದಾಗಿ ಸಿಎಂ ಹೇಳಿಕೆ
  • ಸಿಎಂ ಅರವಿಂದ್ ಕೇಜ್ರಿವಾಲ್ ಘೋಷಣೆ
  • ಕಳೆದ ವಾರ ವಿಧಿಸಿದ್ದ ಲಾಕ್​ಡೌನ್​ ನಾಳೆ ಬೆಳಗ್ಗೆ ಕೊನೆಗೊಳ್ಳಲಿದೆ
  • ಹೀಗಾಗಿ, ಇಂದು ಮತ್ತೆ ಒಂದು ವಾರ ಲಾಕ್​ಡೌನ್​ ವಿಸ್ತರಿಸಲಾಗಿದೆ.
  • ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ರಾಜಧಾನಿಯಲ್ಲಿ ಲಾಕ್​ಡೌನ್

11:53 April 25

ಮೈಸೂರಿನಲ್ಲಿ ಮಟನ್ ಮಾರ್ಕೆಟ್ ಬಂದ್

  • ವೀಕೆಂಡ್ ಕರ್ಫ್ಯೂಗೆ ಮೈಸೂರು ನಗರ ಸಂಪೂರ್ಣ ಸ್ತಬ್ಧ
  • ಗ್ರಾಹಕರು ಬಾರದ ಹಿನ್ನೆಲೆ ಮಟನ್ ಮಾರ್ಕೆಟ್ ಬಂದ್
  • ಬೆಳಗ್ಗೆ 10 ಗಂಟೆಯವರೆಗೆ ಅವಕಾಶವಿದ್ದರೂ ರಸ್ತೆಗಿಳಿಯದ ಜನ
  • ದೇವರಾಜ ಮಾರುಕಟ್ಟೆಯಲ್ಲಿ ನಿಗದಿತ ಅವಧಿವರೆಗೆ ವ್ಯಾಪಾರ-ವಹಿವಾಟು
  • ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದ ಜನ

11:36 April 25

ಪ್ರಧಾನಿ ಮೋದಿಯವರಿಂದ ಮನ್​ ಕಿ ಬಾತ್

  • ಕೋವಿಡ್ ವಿರುದ್ಧದ ಹೋರಾಟದಲ್ಲಿ ಅ್ಯಂಬುಲೆನ್ಸ್​ ಚಾಲಕರ ದೊಡ್ದ ಕೊಡುಗೆಯಿದೆ
  • ನಾನು ಅವರಿಗೆ ಧನ್ಯವಾದ ಹೇಳುತ್ತೇನೆ
  • ಕೋವಿಡ್ ಲಸಿಕೆ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ
  • ಭಾರತ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಉಚಿತ ಲಸಿಕೆ ಕಳುಹಿಸಿದೆ
  • 45 ವರ್ಷ ಮೇಲ್ಪಟ್ಟ ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಿ
  • ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ದೊರೆಯಲಿದೆ

11:25 April 25

ಪ್ರಧಾನಿ ಮೋದಿಯವರಿಂದ ಮನ್​ ಕಿ ಬಾತ್

  • ನಮ್ಮ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕೋವಿಡ್ ವಿರುದ್ಧ ಈಗಲೂ ಹೋರಾಡುತ್ತಿದ್ದಾರೆ
  • ಕಳೆದ ಒಂದು ವರ್ಷದಲ್ಲಿ ಅವರಿಗೆ ಸೋಂಕಿನ ಕುರಿತು ಅರಿವಾಗಿದೆ
  • ಕೊರೊನಾ ನಮ್ಮ ತಾಳ್ಮೆ ಮತ್ತು ನೋವು ಸಹಿಸುವ ಸಾಮಾರ್ಥ್ಯ ಪರೀಕ್ಷಿಸುತ್ತಿದೆ.
  • ಇಂತಹ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ
  • ನಮ್ಮ ಪ್ರೀತಿ ಪಾತ್ರರಲ್ಲಿ ಅನೇಕರನ್ನು ನಾವು ಕಳೆದುಕೊಂಡಿದ್ದೇವೆ
  • ಕೋವಿಡ್ ಒಂದನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಿದ ನಂತರ ರಾಷ್ಟ್ರದ ಮನೋಸ್ಥೈರ್ಯ ಹೆಚ್ಚಿತ್ತು
  • ಆದರೆ, ಎರಡನೇ ಅಲೆ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದೆ
  • ಮನ್​ ಕಿ ಬಾತ್ ಕಾರ್ಯಕ್ರಮಲ್ಲಿ ಪ್ರಧಾನಿ ಮೋದಿ ಹೇಳಿಕೆ

10:59 April 25

ಪ್ರಧಾನಿ ಮೋದಿಯವರಿಂದ ಮನ್​ ಕಿ ಬಾತ್

  • ಕೋವಿಡ್ ವಿರುದ್ಧ ಹೋರಾಡಲು ಕೇಂದ್ರದಿಂದ ರಾಜ್ಯಗಳಿಗೆ ಎಲ್ಲಾ ರೀತಿಯ ಸಹಕಾರ
  • ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿಕೆ
  • ಕೋವಿಡ್ ಪರಿಸ್ಥಿತಿ ಕುರಿತು ಆಯ್ದ ವೈದ್ಯರೊಂದಿಗೆ ಪ್ರಧಾನಿ ಚರ್ಚೆ

10:56 April 25

ಕರ್ಫ್ಯೂ ನಡುವೆ ಶಿವಮೊಗ್ಗದಲ್ಲಿ ಮೀನು ವ್ಯಾಪಾರ ಜೋರು

ಮೀನು ಖರೀದಿಗೆ ಮುಗಿಬಿದ್ದ ಶಿವಮೊಗ್ಗ ಮಂದಿ
  • ರಾಜ್ಯದಾದ್ಯಂತ ವೀಕೆಂಡ್ ಕರ್ಫ್ಯೂ
  • ನಿಗದಿತ ಸಮಯದಲ್ಲಿ ಮಾರುಕಟ್ಟೆಗಳಲ್ಲಿ ಜನ ಜಂಗುಳಿ
  • ಶಿವಮೊಗ್ಗದಲ್ಲಿ ಮೀನು ಖರೀದಿಗೆ ಮುಗಿಬಿದ್ದ ಜನ
  • ನಗರದ ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯಲ್ಲಿ ಜನರ ಗುಂಪು

10:42 April 25

ಭೋಪಾಲ್​​ನಲ್ಲಿ ಕೋವಿಡ್ ಕೇರ್ ರೈಲ್ವೆ ಕೋಚ್​ ರೆಡಿ

ಭೋಪಾಲ್​​ನಲ್ಲಿ ಕೋವಿಡ್ ಕೇರ್ ರೈಲ್ವೆ ಕೋಚ್​ ರೆಡಿ
  • ಕೋವಿಡ್ ರೋಗಿಗಳಿಗೆ ಬೆಡ್​ ಕೊರತೆ ನೀಗಿಸಲು ಮಧ್ಯಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ
  • ಭೋಪಾಲ್​ನಲ್ಲಿ ರೈಲ್ಬೆ ಕೋಚ್​ಗಳನ್ನು ಕೋವಿಡ್ ಕೇರ್ ಕೋಚ್​ ಆಗಿ ಪರಿವರ್ತಿಸಲಾಗಿದೆ
  • ಸದ್ಯ, 20 ಐಸೋಲೇಶನ್ ರೈಲ್ವೆ ಕೋಚ್​​ಗಳನ್ನು ರೆಡಿ ಮಾಡಲಾಗಿದೆ
  • ಈ ಕೋಚ್​ಗಳಿಗೆ ಏರ್ ಕೂಲರ್ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ

10:22 April 25

ರೆಮ್ಡೆಸಿವಿರ್ ಮಾರಾಟ ಮಾಡಿ ನೀರು ಇಂಜೆಕ್ಟ್‌ ಮಾಡಿದ ಆಸ್ಪತ್ರೆ ಸಿಬ್ಬಂದಿ

ರೆಮ್ಡೆಸಿವಿರ್ ಮಾರಾಟ ಮಾಡಿ ನೀರು ಇಂಜೆಕ್ಟ್‌ ಮಾಡಿದ ಆಸ್ಪತ್ರೆ ಸಿಬ್ಬಂದಿ
  • ಕೋವಿಡ್ ರೋಗಿಗೆ ರೆಮ್ಡೆಸಿವಿರ್ ಬದಲು ನೀರು ನೀಡಿದವರ ಬಂಧನ
  • ಸಲೈನ್​ ನೀರು ಇಂಜೆಕ್ಟ್ ಮಾಡಿದ ಮೆಡಿಕಲ್ ಕಾಲೇಜು ಸಿಬ್ಬಂದಿ
  • ರೆಮ್ಡೆಸಿವಿರ್ ಔಷಧಿ ಮಾರಿ ಬಾಟಲಿಗೆ ನೀರು ತುಂಬಿಸಿದ ಪಾಪಿಗಳು
  • ಉತ್ತರ ಪ್ರದೇಶದ ಮೀರತ್​​ ವೈದ್ಯಕೀಯ ಕಾಲೇಜಿನಲ್ಲಿ ಘಟನೆ
  • ಒಟ್ಟು ಎಂಟು ಜನ ಆರೋಪಿಗಳನ್ನು ಬಂಧಿಸಿದ ಪೊಲೀಸರು

10:20 April 25

ವಾಯುಸೇನೆಯಿಂದ 'ಆಪರೇಶನ್ ಆಕ್ಸಿಜನ್'

ವಾಯುಸೇನೆಯಿಂದ 'ಆಪರೇಶನ್ ಆಕ್ಸಿಜನ್'
  • ಆಕ್ಸಿಜನ್ ಕೊರತೆ ನೀಗಿಸಲು ವಾಯುಸೇನೆಯಿಂದ ನಿರಂತರ ಕಾರ್ಯಾಚರಣೆ
  • ದೇಶದ ವಿವಿಧ ಪ್ರದೇಶಗಳಿಗೆ ಆಕ್ಸಿಜನ್ ಟ್ಯಾಂಕರ್​ಗಳ ಏರ್​ ಲಿಫ್ಟ್
  • ವಿದೇಶಗಳಿಂದಲೂ ಆಮ್ಲಜನಕ ರವಾನೆ
  • ತಡರಾತ್ರಿ 2 ಗಂಟೆಗೆ ಸಿಂಗಾಪುರದ ಚಾಂಗಿ ಏರ್​​ಪೋರ್ಟ್​ನಿಂದ ಹಿಂಡನ್ ವಾಯುನೆಲೆಗೆ ಪ್ರಯಾಣ
  • ವಾಯುಪಡೆಯ ಒನ್ ಸಿ-17 ವಿಮಾನದಿಂದ ಕಾರ್ಯಾಚರಣೆ

09:58 April 25

ಮೂರುವರೆ ಲಕ್ಷ ತಲುಪಿದ ಕೋವಿಡ್ ಕೇಸ್

  • ದೇಶದಲ್ಲಿ 3,49,691 ಹೊಸ ಕೋವಿಡ್ ಕೇಸ್ ಪತ್ತೆ
  • ಕಳೆದ 24 ಗಂಟೆಯಲ್ಲಿ 2,767 ಜನ ಸೋಂಕಿಗೆ ಬಲಿ
  • 2,17,113 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
  • ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ : 1,69,60,172
  • ಇದುವರೆಗೆ ಒಟ್ಟು ಗುಣಮುಖರಾದವರು : 1,40,85,110
  • ಒಟ್ಟು ಮೃತಪಟ್ಟವರು : 1,92,311
  • ಸದ್ಯ, ಸಕ್ರಿಯ ಪ್ರಕರಣಗಳು : 26,82,751
  • ಇದುವರೆಗೆ ಕೋವಿಡ್ ಲಸಿಕೆ ಪಡೆದವರು : 14,09,16,417
  • ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ

09:49 April 25

ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಕಾರವಾರದಲ್ಲಿ ಅಗತ್ಯ ವಸ್ತುಗಳಿಗೆ ಮುಗಿಬಿದ್ದ ಜನ
  • ಕಾರವಾರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ
  • ನಗರದ ಮಹಾತ್ಮಗಾಂಧಿ ರಸ್ತೆ, ಮಾರುಕಟ್ಟೆಗಳಲ್ಲಿ ಜನ ಜಂಗುಳಿ
  • ಜನಸಂದಣಿ ನಿಯಂತ್ರಣಕ್ಕೆ ಪೊಲೀಸರಿಂದ ಹರಸಾಹಸ
  • ಮಾಸ್ಕ್​ ಹಾಕದವರಿಗೆ ಸ್ಥಳದಲ್ಲೇ ದಂಡ ವಿಧಿಸಿದ ನಗರಸಭೆ ಸಿಬ್ಬಂದಿ
  • ಶಿವಮೊಗ್ಗದಲ್ಲೂ ಮೈಮರೆತ ಜನ
  • ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಮರೆತು ಗುಂಪು

09:28 April 25

ಆದಿಚುಂಚನಗಿರಿ ಸಂಸ್ಥೆಗಳನ್ನು ಬಿಟ್ಟುಕೊಡಲು ಸಿದ್ದವೆಂದ ನಿರ್ಮಲಾನಂದ ಸ್ವಾಮೀಜಿ

ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದ ಅದಿಚುಂಚನಗಿರಿ ಶ್ರೀ
  • ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿದರು
  • ಸುರಕ್ಷತಾ ಕ್ರಮಗಳೊಂದಿಗೆ ಅದಿಚುಂಚನಗಿರಿ ಆಸ್ಪತ್ರೆಯಲ್ಲಿ ಸೋಂಕಿತರನ್ನು ಭೇಟಿಯಾದರು
  • ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜಿ. ನಗರದಲ್ಲಿರುವ ಆದಿಚುಂಚನಗಿರಿ ಆಸ್ಪತ್ರೆ
  • ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಹಾಯ ನೀಡುವುದಾಗಿ ಸ್ವಾಮೀಜಿ ಭರವಸೆ
  • ಆದಿಚುಂಚನಗಿರಿ ಆಸ್ಪತ್ರೆ, ಹಾಸ್ಟೆಲ್ ಬಿಟ್ಟುಕೊಡುವುದಾಗಿ ಹೇಳಿದ ಸ್ವಾಮೀಜಿ

09:04 April 25

ಕೋಲಾರದಲ್ಲಿ ವೀಕೆಂಡ್ ಕರ್ಫ್ಯೂ

ಕೋಲಾರದಲ್ಲಿ ಅಂಗಡಿ- ಮುಂಗಟ್ಟು ಮುಚ್ಚಿಸಿದ ಅಧಿಕಾರಿಗಳು
  • ಕೋಲಾರದಲ್ಲಿ ಮುಂದುವರೆದ ವೀಕೆಂಡ್ ಕರ್ಫ್ಯೂ
  • ನಿಗದಿತ ಅವಧಿಯಲ್ಲಿ ಅಂಗಡಿ-ಮುಂಗಟ್ಟುಗಳು ಓಪನ್
  • ಅಗತ್ಯ ಸಾಮಾಗ್ರಿಗಳ ಖರೀದಿಗೆ ಮುಗಿಬಿದ್ದ ಜನ
  • ತರಕಾರಿ ಮಾರುಕಟ್ಟೆ, ಮಾಂಸದಂಗಡಿಗಳಲ್ಲಿ ಜನ ಜಂಗುಳಿ
  • ಮಾಸ್ಕ್​, ಸಾಮಾಜಿಕ ಅಂತರ ಇಲ್ಲದೆ ಬೇಕಾಬಿಟ್ಟಿ ಓಡಾಟ
  • ಮಹಾವೀರ ಜಯಂತಿ ಪ್ರಯುಕ್ತ ಮಾಂಸ ಮಾರಾಟ ನಿಷೇಧಿಸಲಾಗಿದೆ
  • ಆದರೂ, ಬಾಗಿಲು ತೆರೆದ ಚಿಕನ್ , ಮಟನ್ ಶಾಪ್​ಗಳು
  • ಮಾಂಸದಂಗಡಿಗಳನ್ನು ಮುಚ್ಚಿಸಿದ ಅಧಿಕಾರಿಗಳು
  • ಕರ್ಫ್ಯೂ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸ್ ಬಂದೋ ಬಸ್ತ್

09:00 April 25

ತಮಿಳುನಾಡಿನಲ್ಲಿ ಲಾಕ್​ ಡೌನ್

ತಮಿಳುನಾಡಿನಲ್ಲಿ ಲಾಕ್​ ಡೌನ್
  • ತಮಿಳುನಾಡಿನಲ್ಲಿ ಕೋವಿಡ್ ಪ್ರಕರಣ ಹೆಚ್ಚಳ
  • ಇಂದು ಭಾನುವಾರ ರಾಜ್ಯಾದ್ಯಂತ ಲಾಕ್ ಡೌನ್
  • ಏ.26 ರಿಂದ ಬ್ಯೂಟಿ ಪಾರ್ಲರ್, ಸಲೂನ್ ಬಂದ್
  • ಹೋಟೆಲ್​, ರೆಸ್ಟೋರೆಂಟ್, ಟೀ ಶಾಪ್​ಗಳಲ್ಲಿ ಪಾರ್ಸೆಲ್​ಗೆ ಮಾತ್ರ ಅವಕಾಶ
  • ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ನಿರ್ಬಂಧ

08:47 April 25

ಕಾಳ ಸಂತೆಯಲ್ಲಿ ಆಕ್ಸಿಜನ್ ಮಾರಾಟ

ಕಾಳ ಸಂತೆಯಲ್ಲಿ ಆಕ್ಸಿಜನ್ ಮಾರುತ್ತಿದ್ದ ಆರೋಪಿಗಳು
  • ಆಕ್ಸಿಜನ್ ಸಿಲಿಂಡರ್ ಕಾಳ ಸಂತೆಯಲ್ಲಿ ಮಾರಾಟ
  • ಗಾಝಿಯಾಬಾದ್​ನ ನಂದ್​ಗ್ರಾಮದಲ್ಲಿ ಇಬ್ಬರ ಬಂಧನ
  • ಆರೋಪಿಗಳಿಂದ 101 ಆಕ್ಸಿಜನ್ ಸಿಲಿಂಡರ್ ವಶ

08:41 April 25

ಗಂಗಾ ರಾಮ್ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ

ಗಂಗಾ ರಾಮ್ ಆಸ್ಪತ್ರೆಗೆ ಆಕ್ಸಿಜನ್ ಹೊತ್ತು ತಂದ ಟ್ಯಾಂಕರ್
  • ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ
  • ಕಳೆದ ಕೆಲ ದಿನಗಳಿಂದ ಈ ಆಸ್ಪತ್ರೆ ತೀವ್ರ ಆಮ್ಲಜನಕದ ಕೊರತೆ ಎದುರಿಸುತ್ತಿತ್ತು
  • ಸದ್ಯ, 5 ಟನ್ ಆಕ್ಸಿಜನ್ ದೊರೆತಿರುವುದಾಗಿ ಆಸ್ಪತ್ರೆ ವಕ್ತಾರ ಮಾಹಿತಿ ನೀಡಿದ್ದಾರೆ
  • ಇದರಿಂದ, ತುಂಬಾ ದಿನಗಳ ನಂತರ ಆಸ್ಪತ್ರೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್ ಇದೆ

08:33 April 25

ದೆಹಲಿಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ಸ್ಥಾಪನೆ

  • ದೆಹಲಿಯಲ್ಲಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್, ಬೆಡ್ ಕೊರತೆ
  • ರೋಗಿಗಳಿಗೆ ಚಿಕಿತ್ಸೆ ನೀಡಲು ತಾತ್ಕಾಲಿಕ ಆಸ್ಪತ್ರೆಗಳ ನಿರ್ಮಾಣ
  • ಉತ್ತರ ದೆಹಲಿ ಮಹಾನಗರ ಪಾಲಿಕೆಯಿಂದ 50 ಬೆಡ್​ಗಳ ವ್ಯವಸ್ಥೆ
  • ಈ ಬೆಡ್​ಗಳಿಗೆ ಪೈಪ್​ ಮೂಲಕ ಆಕ್ಸಿಜನ್ ಪೂರೈಕೆ
  • ಜಿಟಿಬಿ ನಗರದ ಆರ್​ಬಿಐಪಿಎಂಟಿ ಸಂಸ್ಥೆಯಲ್ಲಿ ಪರ್ಯಾಯ ವ್ಯವಸ್ಥೆ

08:27 April 25

ಭಾರತಕ್ಕೆ ಜಾಗತಿಕ ಬೆಂಬಲ

  • ಸಂಕಷ್ಟದ ಸಮಯದಲ್ಲಿ ಇಡೀ ಜಗತ್ತು ಭಾರತದೊಂದಿಗೆ ನಿಂತಿದೆ
  • ಅಮೆರಿಕ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಭಾರತಕ್ಕೆ ಬೆಂಬಲ ವ್ಯಕ್ತವಾಗುತ್ತಿದೆ
  • ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕಿನ್ ಭಾರತಕ್ಕೆ ಬೆಂಬಲ ಸೂಚಿಸಿದ್ದಾರೆ
  • ಭಾರತದ ಜನರು ಮತ್ತು ಆರೋಗ್ಯ ವಲಯದ ಹೀರೋಗಳ ಜೊತೆ ನಾವಿದ್ದೇವೆ ಎಂದಿದ್ದಾರೆ

08:14 April 25

ಕೋವಿಡ್‌ ಚಿಕಿತ್ಸೆಗೆ ರೈಲ್ವೆ ಕೋಚ್‌ಗಳು

ಕೋವಿಡ್‌ ಚಿಕಿತ್ಸೆಗೆ ರೈಲ್ವೆ ಕೋಚ್‌ಗಳು
  • ಕೋವಿಡ್ ಸೋಂಕಿತರ ಚಿಕಿತ್ಸೆಗೆಂದು ರೈಲ್ವೆ ಕೋಚ್​ಗಳನ್ನು ಕೋವಿಡ್‌ ಕೇರ್‌ ಕೋಚ್‌ಗಳಾಗಿ ಮಾರ್ಪಡಿಸಲಾಗಿದೆ
  • ರಾಜ್ಯ ಸರ್ಕಾರಗಳ ಬೇಡಿಕೆಗೆ ಅನುಗುಣವಾಗಿ 3,816 ಕೋವಿಡ್‌ ಕೇರ್‌ ಕೋಚ್‌ಗಳ ತಯಾರು
  • ಸದ್ಯ, 21 ಕೋಚ್‌ಗಳನ್ನು ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ
  • ಈ ಕೋಚ್‌ಗಳಲ್ಲಿ ಈಗಾಗಲೇ 47 ಮಂದಿ ರೋಗಿಗಳು ದಾಖಲಾಗಿದ್ದಾರೆ
  • ಶಾಕೂರ್‌ ಬಸ್ತಿಯಲ್ಲಿ 25, ಆನಂದ್‌ ವಿಹಾರ್‌, ಬದೋಹಿ ಹಾಗೂ ಫೈಜಾಬಾದ್‌ನಲ್ಲಿ ತಲಾ 10 ಬೋಗಿಗಳನ್ನು ನಿಯೋಜಿಸಲಾಗಿದೆ.
  • ಈ ಕುರಿತು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ

07:34 April 25

ಭಾರತಕ್ಕೆ ಪಾಕ್ ನೆರವಿನ ಹಸ್ತ

  • ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿರುವ ಭಾರತಕ್ಕೆ ಪಾಕಿಸ್ತಾನ ಸಹಾಯ ಹಸ್ತ ಚಾಚಲು ಮುಂದಾಗಿದೆ
  • ಭಾರತಕ್ಕೆ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಪಾಕ್ ವಿದೇಶಾಂಗ ಸಚಿವ ತಿಳಿಸಿದ್ದಾರೆ
  • ವೆಂಟಿಲೇಟರ್, ಡಿಜಿಟಲ್ ಎಕ್ಸ್​ ರೇ ಮೆಶಿನ್, ಪಿಪಿಇ ಕಿಟ್ ಮತ್ತು ಇತರ ವೈದ್ಯಕೀಯ ಸಲಕರಣೆ ಒದಗಿಸುವುದಾಗಿ ಹೇಳಿದ್ದಾರೆ
  • ಈ ಬಗ್ಗೆ ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಟ್ವೀಟ್ ಮಾಡಿದ್ದಾರೆ

07:23 April 25

ಬೆಳಗ್ಗೆ 11 ಗಂಟೆಗೆ 'ಮನ್​​ ಕಿ ಬಾತ್'

ಕೋವಿಡ್ ಪರಿಸ್ಥಿತಿ ಚಿಂತಾಜನಕವಾಗಿರುವ ನಡುವೆ, ಇಂದು ದೇಶದ ಜನರನ್ನು ಉದ್ದೇಶಿಸಿ ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ 'ಮನ್​ ಕಿ ಬಾತ್'​ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

07:18 April 25

ಡಾ. ಸುಧಾಕರ್ ಧನ್ಯವಾದ

ರೆಮ್ಡಿಸಿವಿರ್ ಔಷಧಿ ಮತ್ತು ಆಮ್ಲಜನಕದ ಹಂಚಿಕೆಯನ್ನು ಹೆಚ್ಚಳ ಮಾಡಿದ್ದಕ್ಕಾಗಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿ ಅಮಿತ್ ಶಾ, ಕೇಂದ್ರ ಸಚಿವರಾದ ಸದಾನಂದ ಗೌಡ, ಪ್ರಹ್ಲಾದ್ ಜೋಶಿಯವರಿಗೆ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಧನ್ಯವಾದ ಹೇಳಿದ್ದಾರೆ. 

07:08 April 25

ಪ್ರಧಾನಿ, ಗೃಹ ಸಚಿವರಿಗೆ ಸಿಎಂ ಕೃತಜ್ಞತೆ

ಪ್ರಧಾನಮಂತ್ರಿ ಮೋದಿ ಜೊತೆ ನಡೆದ ವರ್ಚ್ಯುವಲ್ ಸಭೆಯಲ್ಲಿ ಸಿಎಂ ಬಿಎಸ್​ವೈ ಕೋರಿಕೆಯಂತೆ ರಾಜ್ಯಕ್ಕೆ ಏಪ್ರಿಲ್ 30ರವರೆಗೆ ರೆಮ್ಡಿಸಿವಿರ್ ಔಷಧವ ಹಂಚಿಕೆ 50,000 ದಿಂದ 1,22,000 ಕ್ಕೆ ಮತ್ತು ದೈನಂದಿನ ಆಮ್ಲಜನಕದ ಹಂಚಿಕೆಯನ್ನು 300 ಮೆ.ಟನ್ ನಿಂದ 800 ಮೆ.ಟನ್‌ಗೆ ಏರಿಸಲಾಗಿದೆ. 

ಇದಕ್ಕೆ, ಸಿಎಂ ಬಿ.ಎಸ್‌.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಕೋವಿಡ್ ವಿರುದ್ಧ ರಾಜ್ಯದ ಹೋರಾಟದಲ್ಲಿ ತ್ವರಿತ ಮತ್ತು ಸಮಯೋಚಿತ ನೆರವು ಒದಗಿಸಿದ್ದಕ್ಕಾಗಿ ರಾಜ್ಯದ ಜನತೆಯ ಪರವಾಗಿ, ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸದಾನಂದ ಗೌಡರಿಗೆ ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.

06:17 April 25

ಸಾಂಕ್ರಾಮಿಕ ರೋಗದ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ಓದಿ..

ಭಾರತ್ ಬಯೋಟೆಕ್ ಪ್ರಕಟನೆ

ದೇಶದಲ್ಲಿ ಕೋವಿಡ್ ಎರಡನೇ ಅಲೆ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಉಂಟು ಮಾಡಿದೆ. ಲಕ್ಷಾಂತರ ಜನ ಸೋಂಕಿತರು ಆಕ್ಸಿಜನ್, ಬೆಡ್‌ಗಳ ಕೊರತೆ, ಸೋಂಕು ನಿವಾರಕ ರೆಮ್ಡಿಸಿವಿರ್​ಗಾಗಿ ಪರದಾಡುತ್ತಿದ್ದಾರೆ. ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಪರಿಸ್ಥಿತಿ ಚಿಂತಾಜನಕವಾಗಿದೆ. ನಗರ ಪ್ರದೇಶಗಳಲ್ಲಿದ್ದ ಕೋವಿಡ್‌ ಆರ್ಭಟ ಇದೀಗ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದು ಕಳವಳವನ್ನು ಮತ್ತಷ್ಟು ಹೆಚ್ಚಿಸಿದೆ.

ಇನ್ನೊಂದೆಡೆ, ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಲಸಿಕೆ ವಿತರಿಸುವುದಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದೆ.

ಈ ನಡುವೆ, ದೇಶೀಯ ಕೋವಿಡ್ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆಗೆ ದರ ನಿಗದಿ ಮಾಡಿದೆ. ಖಾಸಗಿ ಆಸ್ಪತ್ರೆಗಳಿಗೆ 1,200 ರೂ. ಹಾಗೂ ರಾಜ್ಯ ಸರ್ಕಾರಗಳಿಗೆ 600 ರೂ.ಗೆ ಲಸಿಕೆ ನೀಡುವುದಾಗಿ ಸಂಸ್ಥೆ ತಿಳಿಸಿದೆ. 

Last Updated : Apr 25, 2021, 2:13 PM IST

ABOUT THE AUTHOR

...view details