ಜೆರುಸಲೆಂ (ಇಸ್ರೇಲ್):ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಇಸ್ರೇಲ್ ತನ್ನ ನಾಗರಿಕರನ್ನು ಭಾರತ ಮತ್ತು ಇತರ ಆರು ದೇಶಗಳಿಗೆ ಪ್ರಯಾಣಿಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಭಾರತ ಸೇರಿ 7 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಇಸ್ರೇಲ್ - ಜೆರುಸಲೆಂ
ಉಕ್ರೇನ್, ಬ್ರೆಜಿಲ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಭಾರತ, ಮೆಕ್ಸಿಕೊ ಮತ್ತು ಟರ್ಕಿಗೆ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯ ತಿಳಿಸಿದೆ.
![ಭಾರತ ಸೇರಿ 7 ದೇಶಗಳಿಗೆ ಪ್ರಯಾಣ ನಿಷೇಧಿಸಿದ ಇಸ್ರೇಲ್ Israel](https://etvbharatimages.akamaized.net/etvbharat/prod-images/768-512-11612629-676-11612629-1619943377235.jpg)
ಇಸ್ರೇಲ್
ಉಕ್ರೇನ್, ಬ್ರೆಜಿಲ್, ಇಥಿಯೋಪಿಯಾ, ದಕ್ಷಿಣ ಆಫ್ರಿಕಾ, ಭಾರತ, ಮೆಕ್ಸಿಕೊ ಮತ್ತು ಟರ್ಕಿಗೆ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ಕಚೇರಿ ಮತ್ತು ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಜಂಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಈ ನಿರ್ಬಂಧ ಮೇ 3 ರಿಂದ ಜಾರಿಗೆ ಬರಲಿದ್ದು, ಮೇ 16ರವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇನ್ನು ಏಳು ದೇಶಗಳಿಂದ ಆಗಮಿಸುವವರು ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ, ನೆಗೆಟಿವ್ ವರದಿ ಪಡೆದಿದ್ದರೂ ಸಹ ಅವರು 10 ದಿನಗಳ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ಸೂಚಿಸಲಾಗಿದೆ.