ನವದೆಹಲಿ:ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 2,71,202 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಹೊಸದಾಗಿ 2.7 ಲಕ್ಷ ಕೋವಿಡ್ ಕೇಸ್ ಪತ್ತೆ; ಸಕ್ರಿಯ ಪ್ರಕರಣಗಳು 225 ದಿನಗಳಲ್ಲೇ ಹೆಚ್ಚು - ಒಮಿಕ್ರಾನ್ ಪ್ರಕರಣಗಳು
ಭಾರತದಲ್ಲಿ ಇಂದು 2,71,202 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
India Covid Report
ಒಂದು ದಿನದಲ್ಲಿ 1,38,331ಸೋಂಕಿತರು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು 15,50,377 ಸಕ್ರಿಯ ಪ್ರಕರಣಗಳು ಇವೆ. ದಿನವೊಂದಕ್ಕೆ ಸೋಂಕು ಕಾಣಿಸಿಕೊಳ್ಳುವವರ ಪ್ರಮಾಣ ಶೇಕಡಾ 16.28ರಷ್ಟಿದೆ.
ಕಳೆದ 24 ಗಂಟೆಯಲ್ಲಿ 314 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಸುಮಾರು 4,48,549 ಮಂದಿ ಮೃತಪಟ್ಟಿದ್ದಾರೆ. ಇನ್ನು ಇಂದು 7,743 ಒಮಿಕ್ರಾನ್ ಕೇಸ್ಗಳು ದೃಢಪಟ್ಟಿವೆ.