ನವದೆಹಲಿ: ಕೋವಿಡ್ ಪರಿಣಾಮ ಉಲ್ಲೇಖಿಸಿ ಲುಫ್ಥಾನ್ಸ್ ವಿಮಾನಯಾನ ಸಂಸ್ಥೆ 103 ಭಾರತೀಯ ಕ್ಯಾಬಿನ್ ಸಿಬ್ಬಂದಿಯನ್ನು ವಜಾಗೊಳಿಸಿದೆ. ಜರ್ಮನಿಯ ವಾಹಕ ಲುಫ್ಥಾನ್ಸಾ ನೌಕರರು ದೆಹಲಿ ವಿಮಾನ ನಿಲ್ದಾಣದ ಏರೋಸಿಟಿಯಲ್ಲಿ ಈ ಸಂಬಂಧ ಪ್ರತಿಭಟನೆ ನಡೆಸಿದ್ದಾರೆ.
ಲುಫ್ಥಾನ್ಸಾ ವಿಮಾನದಿಂದ 100 ಕ್ಕೂ ಹೆಚ್ಚು ಭಾರತೀಯ ಕ್ಯಾಬಿನ್ ಸಿಬ್ಬಂದಿ ವಜಾ - ಲುಫ್ಥಾನ್ಸ ವಿಮಾನಯಾನ ಸಂಸ್ಥೆ
ಎರಡು ವರ್ಷಗಳ ನಂತರ ಭಾರತದಲ್ಲಿ ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕೆಂದು ವಿಮಾನಯಾನ ಸಂಸ್ಥೆಯಿಂದ ಭರವಸೆ ಕೇಳಿದ್ದೆವು. ಆದರೆ, ನಮಗೆ ಯಾವುದೇ ಭರವಸೆ ಸಿಗಲಿಲ್ಲ. ಇದ್ದಕ್ಕಿದ್ದಂತೆ ನಮ್ಮನ್ನು ವಜಾ ಮಾಡಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿಮಾನಯಾನ ಅಧಿಕಾರಿಯೊಬ್ಬರ ಪ್ರಕಾರ, ಲುಫ್ಥಾನ್ಸವು ಭಾರತದಲ್ಲಿ ಸುಮಾರು 140 ಕ್ಯಾಬಿನ್ ಸಿಬ್ಬಂದಿಯನ್ನು ಹೊಂದಿತ್ತು. ಲಾಕ್ಡೌನ್ ಮೊದಲು ಭಾರತಕ್ಕೆ ವಾರಕ್ಕೆ 42 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ ಈಗ, ಏರ್ ಬಬಲ್ ವ್ಯವಸ್ಥೆಯಲ್ಲಿ ವಿಮಾನಯಾನವು ವಾರಕ್ಕೆ 10 ವಿಮಾನಗಳನ್ನು ನಿರ್ವಹಿಸುತ್ತಿದೆ. ನಾವು ಎರಡು ವರ್ಷಗಳ ವೇತನವಿಲ್ಲದೇ ರಜೆ ತೆಗೆದುಕೊಳ್ಳುತ್ತೇವೆ . ಹಾಗೆ ಎರಡು ವರ್ಷಗಳ ನಂತರ ಭಾರತದಲ್ಲಿ ಸಿಬ್ಬಂದಿಯನ್ನು ಉಳಿಸಿಕೊಳ್ಳಬೇಕೆಂದು ವಿಮಾನಯಾನ ಸಂಸ್ಥೆಯಿಂದ ಭರವಸೆ ಕೇಳಿದ್ದೆವು. ಆದರೆ, ನಮಗೆ ಯಾವುದೇ ಭರವಸೆ ಸಿಗಲಿಲ್ಲ. ಇದ್ದಕ್ಕಿದ್ದಂತೆ ನಮ್ಮನ್ನು ವಜಾ ಮಾಡಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ತೀವ್ರ ಆರ್ಥಿಕ ಪರಿಣಾಮವು ಲುಫ್ಥಾನ್ಸಾಗೆ ವಿಮಾನಯಾನವನ್ನು ಪುನರ್ ರಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಇದು ಜರ್ಮನಿ ಮತ್ತು ಯುರೋಪಿನಲ್ಲಿ ಮತ್ತು ಭಾರತದಂತಹ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಿಬ್ಬಂದಿ ಸಂಬಂಧಿತ ಕ್ರಮಗಳನ್ನು ಒಳಗೊಂಡಿದೆ. ಲುಫ್ಥಾನ್ಸಾ ವಿಶ್ವದಾದ್ಯಂತದ ಎಲ್ಲ ವಿಮಾನಯಾನ ಸಂಸ್ಥೆಗಳಂತೆ ತನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.