ಕರ್ನಾಟಕ

karnataka

ETV Bharat / bharat

ಮಕ್ಕಳಿಗೂ ಕೊವ್ಯಾಕ್ಸಿನ್​: 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್​ ಲಸಿಕೆ ನೀಡಲು ಶಿಫಾರಸು

ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡುವಂತೆ ಭಾರತೀಯ ಪ್ರಧಾನ ಔಷಧ ನಿಯಂತ್ರಣಕ್ಕೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಇದೇ ವೇಳೆ ತುರ್ತು ಅಗತ್ಯ ಇರುವವರಿಗೆ ಲಸಿಕೆ ನೀಡಲು ತಜ್ಞರ ಸಮಿತಿ ಒಕೆ ಅಂದಿದ್ದು, ಡಿಸಿಜಿಐಗೆ ಶಿಫಾರಸು ಮಾಡಿದೆ.

Covid
Covid

By

Published : Oct 12, 2021, 2:52 PM IST

ನವದೆಹಲಿ: ಕೊರೊನಾ ಮಾಹಾಮಾರಿ ವಿರುದ್ಧದ ಹೋರಾಟ ದೇಶದಲ್ಲಿ ಮುಂದುವರೆದಿದ್ದು, ಈಗಾಗಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್​​ ಲಸಿಕೆ ನೀಡಲಾಗುತ್ತಿದೆ. ಆದರೆ, ಇದೇ ಮೊದಲ ಬಾರಿಗೆ 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್​​ ಲಸಿಕೆ ನೀಡಲು ತಜ್ಞರ ಸಮಿತಿಯಿಂದ ಶಿಫಾರಸು ಮಾಡಲಾಗಿದೆ.

ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​​ ಲಸಿಕೆ ಮಕ್ಕಳಿಗೆ ನೀಡಲು ವಿಷಯ ತಜ್ಞರ ಸಮಿತಿ ಸಭೆಯಲ್ಲಿ ಗ್ರೀನ್​​ ಸಿಗ್ನಲ್​ ನೀಡಿದ್ದು, ಹೀಗಾಗಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಡಿಸಿಜೆಐಗೆ ಶಿಫಾರಸು ಮಾಡಿದೆ.

ಎರಡು ವರ್ಷ ಮೆಲ್ಪಟ್ಟ ಮಕ್ಕಳ ಮೇಲೆ ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​ ಲಸಿಕೆ ಪ್ರಯೋಗ ನಡೆಸಲಾಗಿತ್ತು. ಸೆಪ್ಟೆಂಬರ್​ ತಿಂಗಳಲ್ಲಿ 18ವರ್ಷದೊಳಗಿನ ಮಕ್ಕಳ ಮೇಲೆ 1,2 ಹಾಗೂ 3ನೇ ಹಂತದ ಪ್ರಯೋಗ ಪೂರ್ಣಗೊಳಿಸಿತ್ತು. ಅದರ ಕ್ಲಿನಿಕಲ್​ ಪ್ರಯೋಗದ ದತ್ತಾಂಶವನ್ನ ಡಿಸಿಜೆಐಗೆ ಸಲ್ಲಿಕೆ ಮಾಡಲಾಗಿದೆ.

ಆದರೆ ಇಲ್ಲಿಯವರೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಣ ಯಾವುದೇ ರೀತಿಯ ನಿರ್ಧಾರ ಕೈಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿರಿ:ಆಟೋ ಚಾಲಕನ ಸಮಯಪ್ರಜ್ಞೆ.. ಬೆಂಗಳೂರಿನಲ್ಲಿ ಮನೆ ತೊರೆದ ಮಕ್ಕಳು ಮಂಗಳೂರಿನಲ್ಲಿ ಸಿಕ್ಕಿದ್ದು ಹೇಗೆ?

ತಜ್ಞರ ಸಮಿತಿ ಪ್ರಕಾರ ಮಕ್ಕಳಿಗೆ ಕೋವ್ಯಾಕ್ಸಿನ್​ ಲಸಿಕೆ ನೀಡುವುದರ ಮಧ್ಯೆ ಮೊದಲ ಡೋಸ್​ ಹಾಗೂ ಎರಡನೇ ಡೋಸ್​ಗಳ ನಡುವೆ 20 ದಿನಗಳ ಅಂತರ ಇರುವುದು ಕಡ್ಡಾಯವಾಗಿದ್ದು, ಸಂಶೋಧಕರು ನಿಷ್ಕ್ರಿಯಗೊಳಿಸಿದ ಕೊರೊನಾ ವೈರಸ್​​ ಲಸಿಕೆ ಅನುಮೋದನೆ ಪಡೆಯುವವರೆಗೂ ವೈದ್ಯಕೀಯ ಪ್ರಯೋಗ & ಅಧ್ಯಯನ ಮುಂದುವರಿಕೆ ಮಾಡುವಂತೆ ತಿಳಿಸಿದೆ.

ABOUT THE AUTHOR

...view details