ನವದೆಹಲಿ:190ಕ್ಕೂ ಹೆಚ್ಚು ಹಾಲಿ ಮತ್ತು ಮಾಜಿ ವಿಶ್ವ ನಾಯಕರು, ನೊಬೆಲ್ ಪ್ರಶಸ್ತಿ ವಿಜೇತರು, ನಾಗರಿಕ ಸಮಾಜ ಸಂಸ್ಥೆಗಳು, ನಂಬಿಕಸ್ಥ ನಾಯಕರು ಮತ್ತು ಆರೋಗ್ಯ ತಜ್ಞರು ಸರ್ಕಾರಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಹಲವು ವಿಚಾರಗಳ ಬಗ್ಗೆ ಅವರು ಧ್ವನಿ ಎತ್ತಿದ್ದಾರೆ. "ಲಾಭದಾಯಕ ಹಾಗೂ ರಾಷ್ಟ್ರೀಯತೆ" ಮುಂದೆ ತರಲು ಎಂದಿಗೂ ಅವಕಾಶ ನೀಡಬಾರದು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತೋರಿಸುವ ಮಾನವೀಯತೆ ಅಗತ್ಯತೆಯ ಕುರಿತು ಚರ್ಚಿಸಿದ್ದಾರೆ.
ಲ್ಯಾನ್ಸೆಟ್ ಅಧ್ಯಯನದಲ್ಲಿ ಏನಿದೆ?:ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕೋವಿಡ್ ಲಸಿಕೆ ರೋಲ್‌ಔಟ್‌ನ ಮೊದಲ ವರ್ಷದಲ್ಲಿ ಪ್ರತಿ 24 ಸೆಕೆಂಡಿಗೆ ಒಂದು ಸಾವಿಗೆ ಕಾರಣವಾದ ಕೋವಿಡ್, ಹಾಗೂ ಅದರ ತಡೆಗಟ್ಟುವಿಕೆಗಾಗಿ ಕಂಡು ಹಿಡಿದ ಲಸಿಕೆಯಲ್ಲಿನ ಅಸಮಾನತೆಯನ್ನ ಖಂಡಿಸಲಾಗಿದೆ. ಆಗ ಜೀವಗಳನ್ನು ಉಳಿಸಲು ಸಾಧ್ಯವಾಗದ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಇದು "ಜಗತ್ತಿನ ಆತ್ಮಸಾಕ್ಷಿಯ ಮೇಲಿನ ಗಾಯವಾಗಿದೆ" ಎಂದು ವರದಿಯಲ್ಲಿ ಹೇಳಲಾಗಿದೆ.
ವಿಷಾದ ವ್ಯಕ್ತಪಡಿಸಿದ ವಿಶ್ವ ನಾಯಕರು:ಕೋವಿಡ್-19 ನ್ನು ತಡೆಗಟ್ಟಲು ಲಸಿಕೆಗಳನ್ನ ಅಭಿವೃದ್ಧಿಪಡಿಸಲಾಗಿದೆ. ಅಪಾರ ಸಾರ್ವಜನಿಕ ನಿಧಿಯೊಂದಿಗೆ ಈ ಲಸಿಕೆಗಳನ್ನ ವಿತರಿಸಲಾಗಿದೆ. ಇದರಿಂದ ಅವೆಲ್ಲ ಈಗ "ಜನರ ಲಸಿಕೆಗಳು, ಜನರ ಪರೀಕ್ಷೆಗಳು ಮತ್ತು ಜನರ ಚಿಕಿತ್ಸೆ'' ಗಾಗಿ ಜನ್ಮ ತಾಳಿದವುಗಳಾಗಿವೆ ಎಂದು ಒಬ್ಬ ವಿಶ್ವ ನಾಯಕರು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಜನರ ಅಗತ್ಯವನ್ನು ಆಧರಿಸಿ ಕೋವಿಡ್ -19 ಲಸಿಕೆಗಳು, ಪರೀಕ್ಷೆಗಳು ಮತ್ತು ಚಿಕಿತ್ಸೆಗಳನ್ನು ನೀಡುವ ಬದಲು, ಔಷಧೀಯ ಕಂಪನಿಗಳು ಶ್ರೀಮಂತ ದೇಶಗಳಿಗೆ ಮೊದಲು ಲಸಿಕೆಗಳನ್ನು ಮಾರಾಟ ಮಾಡಿದ ಬಗ್ಗೆ ಭಾರಿ ಟೀಕೆಗಳನ್ನು ಹಲವು ವಿಶ್ವ ನಾಯಕರು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ತಮ್ಮ ಪತ್ರಗಳಲ್ಲಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.