ಕರ್ನಾಟಕ

karnataka

ETV Bharat / bharat

ದೇಶದಲ್ಲಿ 'ಆರೋಗ್ಯ ತುರ್ತು': ಕೋವಿಡ್​ ಬಿಕ್ಕಟ್ಟಿನ ವಿಚಾರದಲ್ಲಿ ಹೈಕೋರ್ಟ್‌ ನಿರ್ದೇಶನಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದ ಸುಪ್ರೀಂ - LIVE UPDATES

Covid crisis in India
ದೇಶದಲ್ಲಿ ಆರೋಗ್ಯ ತುರ್ತು

By

Published : Apr 27, 2021, 6:55 AM IST

Updated : Apr 27, 2021, 2:25 PM IST

14:25 April 27

ಅಸ್ಸೋಂನಲ್ಲಿ ಇಂದಿನಿಂದ ನೈಟ್​​ ಕರ್ಫ್ಯೂ

  • ಹೆಚ್ಚಿನ ಕೊರೊನಾರ್ಭಟ
  • ಅಸ್ಸೋಂನಲ್ಲಿ ನೈಟ್​​ ಕರ್ಫ್ಯೂ ವಿಧಿಸಿದ ಸರ್ಕಾರ
  • ಇಂದಿನಿಂದ ಮೇ 1ರವರೆಗೆ ನೈಟ್​​ ಕರ್ಫ್ಯೂ ಜಾರಿ
  • ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯ ವರೆಗೆ ನಿರ್ಬಂಧ
  • ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ

13:47 April 27

ಕೋವಿಡ್​ ಬಿಕ್ಕಟ್ಟಿನ ವಿಚಾರದಲ್ಲಿ ಹೈಕೋರ್ಟ್‌ ನಿರ್ದೇಶನಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದ ಸುಪ್ರೀಂ

  • ಭಾರತದ ಕೊರೊನಾ ಪರಿಸ್ಥಿತಿ ಬಗ್ಗೆ ಸ್ವಯಂಪ್ರೇರಿತ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್
  • ಈ ವಿಚಾರದಲ್ಲಿ ಹೈಕೋರ್ಟ್‌ಗಳ ಪಾತ್ರವೂ ಮುಖ್ಯವಾಗಿದೆ
  • ಆಯಾ ರಾಜ್ಯಗಳ ಪರಿಸ್ಥಿತಿಯನ್ನ ನಮಗಿಂತ ಹೈಕೋರ್ಟ್​ಗಳಿಗೇ ಚೆನ್ನಾಗಿ ತಿಳಿದಿರುತ್ತದೆ
  • ಹೀಗಾಗಿ ಹೈಕೋರ್ಟ್‌ ನೀಡುವ ನಿರ್ದೇಶನಗಳಿಗೆ ಯಾವುದೇ ಅಡ್ಡಿಯಿಲ್ಲ
  • ಹಾಗೆಂದು ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ನಾವು 'ಮೂಕ ಪ್ರೇಕ್ಷಕ'ರಂತೆ ಕೂರಲ್ಲ ಎಂದ ಸರ್ವೋಚ್ಚ ನ್ಯಾಯಾಲಯ
  • ಈ ಸಂಬಂಧ ಮುಂದಿನ ವಿಚಾರಣೆ ಶುಕ್ರವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್

12:38 April 27

ದೇಶದ ಕೊರೊನಾ ಪರಿಸ್ಥಿತಿ ಬಗ್ಗೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಆರಂಭ

ಸುಪ್ರೀಂಕೋರ್ಟ್
  • ಭಾರತದಲ್ಲಿ ಕೋವಿಡ್​ ನಿರ್ವಹಣೆ ವಿಚಾರಣೆಯನ್ನು ಸ್ವಯಂಪ್ರೇರಿವಾಗಿ ನಡೆಸುತ್ತಿರುವ ಸುಪ್ರೀಂಕೋರ್ಟ್
  • ಆಕ್ಸಿಜನ್​ ಕೊರತೆ, ಅಗತ್ಯ ಔಷಧ ಪೂರೆೈಕೆ ಕುರಿತು ಸುಮೋಟೋ ಕೇಸ್​ ದಾಖಲಿಸಿಕೊಂಡಿದ್ದ ನ್ಯಾಯಾಲಯ
  • ವಿಚಾರಣೆ ನಡೆಸುತ್ತಿರುವ ನ್ಯಾ. ಡಿ.ವೈ.ಚಂದ್ರಚೂಡ್, ಎಸ್ ರವೀಂದ್ರ ಭಟ್ ನೇತೃತ್ವದ ನ್ಯಾಯಪೀಠ
  • ಜನರ ಜೀವವನ್ನು ನಾವು ರಕ್ಷಿಸಬೇಕಾಗಿದೆ ಎಂದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್
  • ನಾವು ಕೋವಿಡ್​ ಪರಿಸ್ಥಿತಿಯನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದೇವೆ
  • ಉನ್ನತ ಮಟ್ಟದಲ್ಲಿ ಈ ವಿಚಾರದ ನಿರ್ವಹಣೆಯಾಗುತ್ತಿದೆ ಎಂದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ
  • ಬಿಕ್ಕಟ್ಟನ್ನು ಎದುರಿಸಲು ನಿಮ್ಮ ರಾಷ್ಟ್ರೀಯ ಯೋಜನೆ ಏನು?
  • ಇದಕ್ಕೆ ವ್ಯಾಕ್ಸಿನೇಷನ್ ಮಾತ್ರವೇ ಪ್ರಮುಖ ಆಯ್ಕೆಯಾಗಿದೆಯೇ?
  • ತುಷಾರ್ ಮೆಹ್ತಾಗೆ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಪ್ರಶ್ನೆ

12:33 April 27

ಆಮ್ಲಜನಕ ಸಿಕ್ಕಿಲ್ಲವೆಂದು ಬಾಯಿಯಿಂದಲೇ ಪತಿಯ ಬಾಯಿಗೆ ಗಾಳಿ ಊದಿದ ಪತ್ನಿ

ಬಾಯಿಯಿಂದಲೇ ಪತಿಯ ಬಾಯಿಗೆ ಗಾಳಿ ಊದಿದ ಪತ್ನಿ
  • ಆಕ್ಸಿಜನ್‌ ಸಿಗದೆ ವ್ಯಕ್ತಿ ಸಾವು ಬದುಕಿನ ನಡುವೆ ಹೋರಾಟ
  • ಬಾಯಿಯಿಂದಲೇ ಪತಿಯ ಬಾಯಿಗೆ ಗಾಳಿ ಊದಿದ ಪತ್ನಿ
  • ಉತ್ತರ ಪ್ರದೇಶದಲ್ಲಿ ಹೃದಯ ವಿದ್ರಾವಕ ಘಟನೆ

12:05 April 27

ಒಂದೇ ಆಂಬ್ಯುಲೆನ್ಸ್‌ನಲ್ಲಿ 22 ಕೋವಿಡ್​ ರೋಗಿಗಳ ಮೃತದೇಹ..

ಒಂದೇ ಆಂಬ್ಯುಲೆನ್ಸ್‌ನಲ್ಲಿ 22 ಕೋವಿಡ್​ ರೋಗಿಗಳ ಮೃತದೇಹ
  • ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೋವಿಡ್​ ಸಾವು-ನೋವು
  • ಸ್ಮಶಾನಕ್ಕೆ ಬಂದ ಒಂದೇ ಆಂಬ್ಯುಲೆನ್ಸ್‌ನಲ್ಲಿತ್ತು 22 ಕೋವಿಡ್​ ರೋಗಿಗಳ ಮೃತದೇಹ
  • ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ಘಟನೆ
  • ಶವಗಳನ್ನು ಸಾಗಿಸಲು ತುರ್ತು ವಾಹನಗಳ ಕೊರತೆಯಿದೆ ಎಂದ ಬೀಡ್ ಜಿಲ್ಲಾಡಳಿತ

11:56 April 27

ಆಕ್ಸಿಜನ್ ಕೊರತೆಯಿಂದ ಮೀರತ್​ನಲ್ಲಿ 9 ರೋಗಿಗಳು ಸಾವು

ಆಕ್ಸಿಜನ್ ಕೊರತೆಯಿಂದ ಮೀರತ್​ನಲ್ಲಿ 9 ರೋಗಿಗಳು ಸಾವು
  • ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಕೋವಿಡ್​ ತಂದಿಟ್ಟ ಆಪತ್ತು
  • ಆಕ್ಸಿಜನ್ ಕೊರತೆಯಿಂದ  9 ರೋಗಿಗಳು ಸಾವು
  • ಉತ್ತರ ಪ್ರದೇಶದ ಮೀರತ್​ನ ಕೆಎಂಸಿ ಆಸ್ಪತ್ರೆಯಲ್ಲಿ ಘಟನೆ

11:51 April 27

ಕೇರಳದಲ್ಲಿ ಲಸಿಕಾಭಿಯಾನಕ್ಕಾಗಿ 2 ಲಕ್ಷ ರೂ. ನೀಡಿದ ಬೀಡಿ ಕಾರ್ಮಿಕ

ಕೇರಳದಲ್ಲಿ ಲಸಿಕಾಭಿಯಾನಕ್ಕಾಗಿ 2 ಲಕ್ಷ ರೂ. ನೀಡಿದ ಬೀಡಿ ಕಾರ್ಮಿಕ
  • ಜನರ ಹೃದಯ ಗೆದ್ದ ಕೇರಳದ ಕಣ್ಣೂರಿನ ಬೀಡಿ ಕಾರ್ಮಿಕ
  • ರಾಜ್ಯದಲ್ಲಿ ಕೋವಿಡ್​ ವ್ಯಾಕ್ಸಿನೇಷನ್​​ಗಾಗಿ 2 ಲಕ್ಷ ರೂ. ದೇಣಿಗೆ
  • ಮುಖ್ಯಮಂತ್ರಿಯ ವಿಪತ್ತು ಪರಿಹಾರ ನಿಧಿಗೆ ಹಣ ನೀಡಿದ ವ್ಯಕ್ತಿ
  • ತನ್ನ ಬ್ಯಾಂಕ್​​ ಖಾತೆಯಲ್ಲಿ ಕೇವಲ 850 ರೂ. ಉಳಿಸಿಕೊಂಡು ಉಳಿದದ್ದನ್ನು ಕೊಟ್ಟ ಬೀಡಿ ಕಾರ್ಮಿಕ

11:43 April 27

ಚುನಾವಣಾ ಫಲಿತಾಂಶದ ಬಳಿಕ ಗೆಲುವಿನ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ಬ್ರೇಕ್​

  • ದೇಶದಲ್ಲಿ ಕೊರೊನಾ ಅಟ್ಟಹಾಸ
  • ಚುನಾವಣಾ ಫಲಿತಾಂಶದ ಬಳಿಕ ಗೆಲುವಿನ ಸಂಭ್ರಮಾಚರಣೆಗೆ ಚುನಾವಣಾ ಆಯೋಗ ಬ್ರೇಕ್​
  • ಎಲೆಕ್ಷನ್​ಗಾಗಿ ದೊಡ್ಡ ದೊಡ್ಡ ರ‍್ಯಾಲಿ, ಸಾರ್ವಜನಿಕ ಸಭೆಗಳನ್ನು ನಡೆಸಿದ್ದ ರಾಜಕೀಯ ಪಕ್ಷಗಳು
  • ಮೇ 2ರಂದು ಮತ ಎಣಿಕೆ ದಿನ ಹಾಗೂ ರಿಸಲ್ಟ್​ ಬಂದ ಮೇಲೆ ಯಾವುದೇ ರೀತಿಯ ಮೆರವಣಿಗೆಗೆ ನಿಷೇಧ
  • ಪಂಚರಾಜ್ಯಗಳ ವಿಧಾನಸಭೆ, ಕೆಲ ರಾಜ್ಯಗಳ ಲೋಕಸಭಾ ಉಪಚುನಾವಣೆ, ಪಂಚಾಯತ್​ ಚುನಾವಣೆ ಫಲಿತಾಂಶ ಮೇ 2ರಂದು ಪ್ರಕಟ

11:01 April 27

ಭಾರತದಿಂದ ವಿಮಾನ ಹಾರಾಟ ಸ್ಥಗಿತಗೊಳಿಸಿದ ಆಸ್ಟ್ರೇಲಿಯಾ

  • ಭಾರತದಲ್ಲಿ ಕೋವಿಡ್ ಉಲ್ಬಣ ಹಿನ್ನೆಲೆ
  • ಭಾರತದ ವಿಮಾನಗಳಿಗೆ ನಿಷೇಧ ಹೇರಿದ  ಆಸ್ಟ್ರೇಲಿಯಾ
  • ಮೇ 15ರ ವರೆಗೆ ಎಲ್ಲಾ ಪ್ರಯಾಣಿಕ ವಿಮಾನಗಳು ಸ್ಥಗಿತ
  • ಪ್ರಧಾನಿ ಸ್ಕಾಟ್ ಮಾರಿಸನ್ ಆದೇಶ

10:13 April 27

ಕೊಪ್ಪಳ: ಕಠಿಣ ನಿಯಮವಿದ್ರೂ ಕ್ಯಾರೆ ಎನ್ನದ ಜನ

ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಕೊಪ್ಪಳ ಮಂದಿ
  • ಕೋವಿಡ್​​ ಉಲ್ಬಣ ಹಿನ್ನೆಲೆ ಕರ್ನಾಟಕದಲ್ಲಿ 14 ದಿನಗಳ ಕಠಿಣ ಕರ್ಫ್ಯೂ
  • ಆದ್ರೂ ಕ್ಯಾರೆ ಎನ್ನದೆ ಗುಂಪು ಸೇರುತ್ತಿರುವ ಜನರು
  • ಕೊಪ್ಪಳದ ಎಸ್ ಜಿ ಗಂಜ್ ತರಕಾರಿ ಮಾರುಕಟ್ಟೆಯಲ್ಲಿ ಜನಸಮೂಹ
  • ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಕೊಪ್ಪಳ ಮಂದಿ
  • ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 395 ಕೇಸ್​ಗಳು ಪತ್ತೆ

10:13 April 27

ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ದಲೈ ಲಾಮಾ ಸಾಥ್​

ಟಿಬೆಟಿಯನ್​ ಧರ್ಮಗುರು ದಲೈ ಲಾಮಾ
  • ದೇಶದ ಕೋವಿಡ್​ ಸಂಕಷ್ಟಕ್ಕೆ ದಲೈ ಲಾಮಾ ಸಹಾಯ ಘೋಷಣೆ
  • ಪಿಎಂ ಕೇರ್​ ಫಂಡ್​ಗೆ ನೆರವು ನೀಡುವುದಾಗಿ ತಿಳಿಸಿದ ಟಿಬೆಟಿಯನ್​ ಧರ್ಮಗುರು
  • 'ದಲೈ ಲಾಮಾ ಟ್ರಸ್ಟ್'​ ಮೂಲಕ ದಾನ ಮಾಡುವುದಾಗಿ ಹೇಳಿದ ಬೌದ್ಧ ಧರ್ಮ ಪ್ರತಿಪಾದಕ

09:48 April 27

ಭಾರತದಲ್ಲಿ ಒಂದೇ ದಿನ 3.23 ಲಕ್ಷ ಸೋಂಕಿತರು ಪತ್ತೆ.. 2771 ಮಂದಿ ಬಲಿ

  • ದೇಶದಲ್ಲಿ ಒಂದೇ ದಿನ 3,23,144 ಕೋವಿಡ್​ ಕೇಸ್​ ಪತ್ತೆ
  • 24 ಗಂಟೆಗಳ ಅವಧಿಯಲ್ಲಿ 2771 ಜನರು ಸಾವು
  • ಸೋಮವಾರ ಒಂದೇ ದಿನ  2,51,827 ಮಂದಿ ಡಿಸ್ಚಾರ್ಜ್​
  • ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,76,36,307ಕ್ಕೆ ಏರಿಕೆ
  • ಈವರೆಗೆ 1,97,894 ಮಂದಿ ವೈರಸ್​ಗೆ ಬಲಿ
  • ಒಟ್ಟು 1,45,56,209 ಜನರು ಸೋಂಕಿನಿಂದ ಗುಣಮುಖ
  • ಸಕ್ರಿಯ ಪ್ರಕರಣಗಳ ಸಂಖ್ಯೆ 28,82,204ಕ್ಕೆ ಹೆಚ್ಚಳ
  • ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ

09:28 April 27

ಕೊರೊನಾ ರೋಗಿಯ ಮೃತದೇಹವನ್ನ ಬೈಕ್​ನಲ್ಲೇ 15 ಕಿ.ಮೀ ಸಾಗಿಸಿದ ಕುಟುಂಬ

ಕೊರೊನಾ ರೋಗಿಯ ಮೃತದೇಹವನ್ನ ಬೈಕ್​ನಲ್ಲೇ 15 ಕಿ.ಮೀ ಸಾಗಿಸಿದ ಕುಟುಂಬ
  • ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ದಾರುಣ ಘಟನೆ
  • ಕೊರೊನಾ ರೋಗಿಯ ಮೃತದೇಹವನ್ನ ಬೈಕ್​ನಲ್ಲೇ 15 ಕಿ.ಮೀ ಸಾಗಿಸಿದ ಕುಟುಂಬ
  • ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸೋಂಕಿತೆ ಸಾವು
  • ಇದನ್ನು ಗಮನಿಸಿ ಆಟೋದಿಂದ ಶವವನ್ನು ಕೆಳಗಿಳಿಸಲು ಸೂಚಿಸಿದ ಚಾಲಕ
  • ಬೇರೆ ದಾರಿಯಲಿಲ್ಲದೇ  ಮೃತದೇಹವನ್ನ ಬೈಕ್​ನಲ್ಲೇ ಮಧ್ಯ ಕೂರಿಸಿಕೊಂಡು ಹೋದ ಕುಟುಂಬಸ್ಥರು

09:15 April 27

ಮುಖ್ತಾರ್ ಅನ್ಸಾರಿ, ಛೋಟಾ ರಾಜನ್​ಗೆ ಕೊರೊನಾ

ಮುಖ್ತಾರ್ ಅನ್ಸಾರಿ, ಛೋಟಾ ರಾಜನ್​ಗೆ ಕೊರೊನಾ
  • ಗ್ಯಾಂಗ್​​ಸ್ಟರ್​-ರಾಜಕಾರಣಿ ಮುಖ್ತಾರ್ ಅನ್ಸಾರಿ, ಭೂಗತ ಪಾತಕಿ ಛೋಟಾ ರಾಜನ್​ಗೆ ಸೋಂಕು
  • ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿದ್ದ ಅನ್ಸಾರಿ
  • ಮೌ ಕ್ಷೇತ್ರದ ಬಿಎಸ್​ಪಿ ಶಾಸಕನಾಗಿದ್ದ ಮುಖ್ತಾರ್
  • ದೆಹಲಿಯ ಏಮ್ಸ್​ ಆಸ್ಪತ್ರೆಗೆ ಛೋಟಾ ರಾಜನ್​ ದಾಖಲು
  • ತಿಹಾರ್​​ ಜೈಲಿನಲ್ಲಿದ್ದ ಭೂಗತ ಪಾತಕಿ ರಾಜನ್

09:08 April 27

ಕೋವಿಡ್​ ಕರ್ಫ್ಯೂ ನಡುವೆಯೂ ಚುನಾವಣೆ

ಕೋವಿಡ್​ ಕರ್ಫ್ಯೂ ನಡುವೆಯೂ ಚುನಾವಣೆ
  • ಕೊರೊನಾ ಆತಂಕ, ಕಠಿಣ ಕರ್ಫ್ಯೂ ನಡುವೆಯೂ ಕರ್ನಾಟಕದ ಹಲವೆಡೆ ಇಂದು ಎಲೆಕ್ಷನ್​
  • ಶಿವಮೊಗ್ಗದ ಭದ್ರಾವತಿ ನಗರಸಭೆ ಹಾಗೂ ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಚುನಾವಣೆ
  • ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಪಂಚಾಯಿತಿ ಚುನಾವಣೆಗೆ ಮತದಾನ
  • ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ
  • ಕೋವಿಡ್​ ನಿಯಮ ಪಾಲಿಸಿ ಹಕ್ಕು ಚಲಾಯಿಸುತ್ತಿರುವ ಜನರು

09:00 April 27

ತವರು ಜಿಲ್ಲೆಗೆ ಬಂದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು

ತವರು ಜಿಲ್ಲೆಗೆ ಬಂದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು
  • ಸೋಂಕು ಹೆಚ್ಚಳ ಹಿನ್ನೆಲೆ ಇಂದಿನಿಂದ ಕರ್ನಾಟಕದಲ್ಲಿ ಕಠಿಣ ಕೊರೊನಾ ಕರ್ಫ್ಯೂ ಜಾರಿ
  • ಶಾಲಾ-ಕಾಲೇಜುಗಳು ಬಂದ್​, ಪರೀಕ್ಷೆಗಳು ಮುಂದೂಡಿಕೆ
  • ತವರು ಜಿಲ್ಲೆಗಳತ್ತ ಮರಳಿದ ವಲಸೆ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು
  • ಬೆಂಗಳೂರು, ಮಂಗಳೂರು, ಉಡುಪಿ ಸೇರಿದಂತೆ ನಾನಾ ಭಾಗಗಳಿಗೆ ವಿದ್ಯಾಭ್ಯಾಸ ಮಾಡಲು, ದುಡಿಯಲು ಹೋಗಿದ್ದವರು ವಾಪಾಸ್​
  • ಬಸ್ ಹಾಗೂ ರೈಲು ಮೂಲಕ ಕೊಪ್ಪಳಕ್ಕೆ ಬಂದಿಳಿದು, ಸ್ವಗ್ರಾಮದತ್ತ ಪ್ರಯಾಣ

08:53 April 27

ಮಹಾರಾಷ್ಟ್ರದಲ್ಲಿ ಮುಂದುವರೆದ ಕೋವಿಡ್​ ಲಾಕ್​ಡೌನ್​

ಮುಂಬೈನ ಬಾಂದ್ರಾದ ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿ
  • ಮಹಾರಾಷ್ಟ್ರದಲ್ಲಿ ಕೋವಿಡ್​ ಲಾಕ್​ಡೌನ್​
  • ರಾಜ್ಯಾದ್ಯಂತ ಮೇ 1ರವರೆಗೆ ಎಲ್ಲಾ ಚಟುವಟಿಕೆಗಳಿಗೆ ನಿರ್ಬಂಧ
  • ಅಗತ್ಯ-ತುರ್ತು ವಾಹನ ಸಂಚಾರಕ್ಕೆ ಮಾತ್ರ ಅವಕಾಶ

08:43 April 27

ಛತ್ತೀಸ್​ಗಢದಿಂದ ದೆಹಲಿಗೆ ಬಂದ ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲು

ಛತ್ತೀಸ್​ಗಢದಿಂದ ದೆಹಲಿಗೆ ಬಂದ ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲು
  • ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್​ ರೋಗಿಗಳಿಗೆ ಪೂರೈಸಲು ಆಮ್ಲಜನಕ​ ಅಭಾವ
  • ಛತ್ತೀಸ್​ಗಢದಿಂದ ದೆಹಲಿಗೆ ಬಂದ ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲು
  • ಜಿಂದಾಲ್​ ಉಕ್ಕಿನ ಘಟಕದಿಂದ ಬಂದ ಆಮ್ಲಜನಕದ ಟ್ಯಾಂಕರ್​​​ ಹೊತ್ತ ವಿಶೇಷ ರೈಲು
  • ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ರವಾನೆಯಾಗಲಿರುವ ಆಕ್ಸಿಜನ್

07:51 April 27

ಗಾಜಿಪುರ ಶವಾಗಾರದಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ

100ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ
  • ಗಾಜಿಪುರದ ಸ್ಮಶಾನವೊಂದರಲ್ಲಿ ಒಂದೇ ದಿನ 100ಕ್ಕೂ ಹೆಚ್ಚು ಮೃತದೇಹಗಳ ಅಂತ್ಯಕ್ರಿಯೆ
  • ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರ
  • ಕೋವಿಡ್​ ರೋಗಿಗಳೂ ಸೇರಿ ಒಂದೇ ದಿನ ಸ್ಮಶಾನಕ್ಕೆ ಬಂದ ನೂರಕ್ಕೂ ಅಧಿಕ ಶವಗಳು
  • ಶವಾಗಾರದಲ್ಲಿ ಜಾಗವಿಲ್ಲದೇ ವಾಹನ ಪಾರ್ಕಿಂಗ್ ಸ್ಥಳದಲ್ಲೂ ಅಂತ್ಯಸಂಸ್ಕಾರ

07:42 April 27

ಕೊಪ್ಪಳದ ಕಿನ್ನಾಳ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ

  • ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ 80 ಕೊರೊನಾ ಕೇಸು ಪತ್ತೆ
  • ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಹೊರಡಿಸಿದ ಉಪವಿಭಾಗಾಧಿಕಾರಿ
  • ಅಗತ್ಯ ಚಟುವಟಿಕೆ ಹೊರತುಪಡಿಸಿ ಇಂದಿನಿಂದ ಏ. 30ರವರೆಗೆ ನಿರ್ಬಂಧ

07:37 April 27

ಬ್ರಿಟನ್​ನಿಂದ ಭಾರತಕ್ಕೆ ಬಂದ ವೈದ್ಯಕೀಯ ಸಾಮಗ್ರಿಗಳು

ಬ್ರಿಟನ್​ನಿಂದ ಭಾರತಕ್ಕೆ ಬಂದ ವೈದ್ಯಕೀಯ ಸಾಮಗ್ರಿಗಳು
  • ಭಾರತಕ್ಕೆ ನೆರವು ನೀಡುವ ಭರವಸೆ ಪೂರೈಸಿದ ಇಂಗ್ಲೆಂಡ್​
  • 100 ವೆಂಟಿಲೇಟರ್‌ಗಳು, 95 ಆಮ್ಲಜನಕ ಸಾಂದ್ರಕಗಳು ದೇಶಕ್ಕೆ ರವಾನೆ
  • ಇಂದು ಬೆಳಗ್ಗೆ ಬ್ರಿಟನ್​ನಿಂದ ಭಾರತ ತಲುಪಿರುವ ವೈದ್ಯಕೀಯ ಸಾಮಗ್ರಿಗಳು
  • ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮಾಹಿತಿ

07:32 April 27

ತೆಲಂಗಾಣಕ್ಕೆ ಆಮ್ಲಜನಕ ಪೂರೈಕೆ

ತೆಲಂಗಾಣಕ್ಕೆ ಆಮ್ಲಜನಕ ಪೂರೈಕೆ
  • ಒಡಿಶಾದಿಂದ ತೆಲಂಗಾಣಕ್ಕೆ ಬಂತು ಆಕ್ಸಿಜನ್‌ ತುಂಬಿದ್ದ ಐದು ಲಾರಿಗಳು
  • ಕೋವಿಡ್‌ ಸೋಂಕಿತರಿರುವ ಆಸ್ಪತ್ರೆಗಳಿಗೆ ರವಾನೆ
  • ಆಮ್ಲಜನ ಪೂರೈಕೆಗೆ ಭಾರಿ ಕಸರತ್ತು ನಡೆಸುತ್ತಿರುವ ಕೆಸಿಆರ್​ ಸರ್ಕಾರ

07:20 April 27

ವಾಜಪೇಯಿ ಅವರ ಸೋದರ ಸೊಸೆ, ಮಾಜಿ ಸಂಸದೆ ಕರುಣಾ ಶುಕ್ಲಾ ಕೊರೊನಾಗೆ ಬಲಿ

ಕರುಣಾ ಶುಕ್ಲಾ ಕೊರೊನಾಗೆ ಬಲಿ
  • ಕೋವಿಡ್​ಗೆ ಕಾಂಗ್ರೆಸ್​ ನಾಯಕಿ, ಮಾಜಿ ಸಂಸದೆ ಕರುಣಾ ಶುಕ್ಲಾ ನಿಧನ
  • ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಸೋದರ ಸೊಸೆಯಾಗಿರುವ ಶುಕ್ಲಾ
  • ಛತ್ತೀಸ್​ಗಢದ ರಾಯಪುರದ ರಾಮಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೈ ನಾಯಕಿ

07:12 April 27

ಭಾರತಕ್ಕೆ ಆಕ್ಸಿಜನ್​, ವೆಂಟಿಲೇಟರ್​ ಕಳುಹಿಸಲಿರುವ ಫ್ರಾನ್ಸ್

  • ಕೊರೊನಾ ಭೀಕರ ಸುಳಿಯಲ್ಲಿ ಸಿಲುಕಿದ ಭಾರತದ ಸಹಾಯಕ್ಕೆ ಬಂದ ಫ್ರಾನ್ಸ್
  • 2000 ರೋಗಿಗಳಿಗೆ ಐದು ದಿನಗಳವರೆಗೆ ಆಗುವಷ್ಟು ದ್ರವ ಆಮ್ಲಜನಕ ಪೂರೈಕೆ ಘೋಷಣೆ
  • 28 ವೆಂಟಿಲೇಟರ್‌ಗಳು, ಐಸಿಯುಗಳಿಗೆ ಬೇಕಾದ ಉಪಕರಣಗಳನ್ನು ಒದಗಿಸುವುದಾಗಿ ಹೇಳಿದ ಫ್ರಾನ್ಸ್
  • ಮುಂದಿನ ದಿನಗಳಲ್ಲಿ ಹೆಚ್ಚಿನ ವೈದ್ಯಕೀಯ ವಸ್ತುಗಳ ಸರಬರಾಜು ಭರವಸೆ

06:55 April 27

ಪಿಪಿಇ ಕಿಟ್​ ಧರಿಸಿ ಸಪ್ತಪದಿ ತುಳಿದ ವಧು-ವರ

ಪಿಪಿಇ ಕಿಟ್​ ಧರಿಸಿ ಸಪ್ತಪದಿ ತುಳಿದ ವಧು-ವರ
  • ಮದುಮಗನಿಗೆ ಕೊರೊನಾ ಪಾಸಿಟಿವ್​​
  • ಪಿಪಿಇ ಕಿಟ್​ ಧರಿಸಿ ಸಪ್ತಪದಿ ತುಳಿದ ವಧು-ವರ
  • ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಘಟನೆ

06:10 April 27

ಕೋವಿಡ್​ 2ನೇ ಅಲೆ

ಅನೇಕ ರಾಷ್ಟ್ರಗಳಿಗೆ ಕೋವಿಡ್​ ಲಸಿಕೆ ಪೂರೈಸಿದ್ದ ಭಾರತ ಇದೀಗ ಸಂಕಷ್ಟವೆನ್ನೆದುರಿಸುತ್ತಿದೆ. ಪ್ರತಿನಿತ್ಯ ಮೂರು ಲಕ್ಷಕ್ಕಿಂತ ಅಧಿಕದಂತೆ ವಿಶ್ವದಲ್ಲೇ ಅತೀ ಹೆಚ್ಚು ಸೋಂಕಿತರು ದೇಶದಲ್ಲಿ ಪತ್ತೆಯಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಹಾಸಿಗೆ, ಆಮ್ಲಜನಕ ಸಿಗದೇ ರೋಗಿಗಳು ಪ್ರಾಣಬಿಡುತ್ತಿದ್ದಾರೆ. ಎರಡು ಸಾವಿರಕ್ಕೂ ಹೆಚ್ಚು ಜನರು ವೈರಸ್​ಗೆ ಬಲಿಯಾಗುತ್ತಿದ್ದು, ಮೃತದೇಹಗಳ ಅಂತ್ಯಸಂಸ್ಕಾರಕ್ಕೂ ಸ್ಮಶಾನಗಳಲ್ಲಿ ಸ್ಥಳ ದೊರಕದ ದುಸ್ಥಿತಿ ಒದಗಿಬಂದಿದೆ.

ಎರಡನೇ ಅಲೆಯ ಈ ಬಲಶಾಲಿ ವೈರಸ್​​ ಹರಡುವಿಕೆ ತಡೆಯಲು ದೆಹಲಿ, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಛತ್ತೀಸ್​ಗಢದಂತಹ ಅನೇಕ ರಾಜ್ಯ ಸರ್ಕಾರಗಳು ಲಾಕ್​ಡೌನ್​, ಕಠಿಣ ಕರ್ಫ್ಯೂನಂತಹ ಕ್ರಮಗಳನ್ನ ಜಾರಿಗೆ ತಂದಿವೆ.  

ದೇಶದ ವಿವಿಧ ಭಾಗಗಳಿಗೆ ಆಮ್ಲಜನಕ ತಲುಪಿಸಲೆಂದು ಭಾರತೀಯ ರೈಲ್ವೆಯು 'ಆಕ್ಸಿಜನ್ ಎಕ್ಸ್‌ಪ್ರೆಸ್' ವಿಶೇಷ ರೈಲು ಸೇವೆ ಆರಂಭಿಸಿದೆ. ಭಾರತೀಯ ನೌಕಾಪಡೆ ಕೂಡ 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಡಗುಗಳ ಮೂಲಕ ದ್ವೀಪ ಪ್ರದೇಶಗಳಿಗೆ ಆಮ್ಲಜನಕ ಪೂರೈಸುತ್ತಿದೆ. ಭಾರತೀಯ ವಾಯುಪಡೆ ತನ್ನ ವಿಮಾನಗಳ ಮೂಲಕ ಇತರ ದೇಶಗಳಿಂದ ಭಾರತಕ್ಕೆ ಆಕ್ಸಿಜನ್ ಹೊತ್ತು ತರುತ್ತಿದೆ.  

ಭಾರತದ ಆರೋಗ್ಯ ತುರ್ತು ಪರಿಸ್ಥಿತಿಗೆ ನೆರವಾಗಲು ಅಮೆರಿಕ, ಫ್ರಾನ್ಸ್​, ಆಸ್ಟ್ರೇಲಿಯಾ, ಇಂಗ್ಲೆಂಡ್​ ಸೇರಿದಂತೆ ಹಲವು ರಾಷ್ಟ್ರಗಳು ಮುಂದೆ ಬಂದಿದ್ದು, ಆಕ್ಸಿಜನ್​, ವೆಂಟಿಲೇಟರ್​, ಪಿಪಿಇ ಕಿಟ್​ನಂತಹ ಅಗತ್ಯ ವೈದ್ಯಕೀಯ ಸಾಮಾಗ್ರಿಗಳನ್ನು ರವಾನಿಸುತ್ತಿವೆ.  

Last Updated : Apr 27, 2021, 2:25 PM IST

ABOUT THE AUTHOR

...view details