ಪಾಟ್ನಾ: ಕೋವಿಡ್-19ನಿಂದ ಈಗಾಗಲೇ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡು ಕುಟುಂಬಸ್ಥರು ದುಃಖದಲ್ಲಿದ್ದಾರೆ. ಈ ಮಧ್ಯೆ ಮೃತರ ಅಂತ್ಯಕ್ರಿಯೆ ಮಾಡಲು ಪಾಟ್ನಾದಲ್ಲಿ ಮಧ್ಯವರ್ತಿಗಳಾಗಿ ಮುಂದೆ ನಿಂತು ಶವ ಸಂಸ್ಕಾರ ಮಾಡಿಸುವವರು ಅಧಿಕ ಶುಲ್ಕ ವಿಧಿಸುತ್ತಿದ್ದು, ಮೃತರ ಕುಟುಂಬಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೀಡಾಗುತ್ತಿವೆ.
ಪಾಟ್ನಾದಲ್ಲಿ ಅಂತ್ಯಕ್ರಿಯೆಯನ್ನೇ ಲಾಭದಾಯಕ ವ್ಯವಹಾರವಾಗಿಸಿಕೊಂಡ ವರ್ಗ! - ಕೋವಿಡ್ -19
ಕೋವಿಡ್ನಿಂದ ಮೃತರಾದವರ ಅಂತ್ಯಕ್ರಿಯೆ ನಡೆಸಲು ಬಿಹಾರ ರಾಜ್ಯದ ಕೆಲವು ಸ್ಮಶಾನಗಳಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗ್ತಿದೆ. ಅಲ್ಲದೇ ಅಂತ್ಯ ಸಂಸ್ಕಾರಕ್ಕೆ ಬೇಕಾದ ಸಾಮಗ್ರಿಗಳ ಬೆಲೆಗಳನ್ನು ದಿಢೀರ್ ಏರಿಸಿ ಸ್ಮಶಾನಗಳ ಏಜೆಂಟರು ಈಗಾಗಲೇ ಪ್ರೀತಿಪಾತ್ರರನ್ನ ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತಷ್ಟು ಆರ್ಥಿಕ ಹೊರೆ ಹೇರುತ್ತಿದ್ದಾರೆ.

ಪಾಟ್ನಾದಲ್ಲಿ ಕೋವಿಡ್ ಮೃತದೇಹಗಳ ಅಂತ್ಯಕ್ರಿಯೆಗಳನ್ನೇ ಲಾಭದಾಯಕ ವ್ಯವಹಾರವಾಗಿಸಿಕೊಂಡು ಜನರಿಂದ ಹಣ ವಸೂಲಿ ಮಾಡುವ ವರ್ಗವೊಂದು ಹುಟ್ಟಿಕೊಂಡಿದೆ. ಪಾಟ್ನಾದ ಬನ್ಸಿ ಘಾಟ್‌ನಲ್ಲಿ ದಲ್ಲಾಳಿಗಳು ಅವಶ್ಯಕತೆಗಳ ಆಧಾರದ ಮೇಲೆ ಅಂತ್ಯಕ್ರಿಯೆಯ ಪ್ಯಾಕೇಜ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಉದಾಹರಣೆಗೆ ಚಟ್ಟ ಅಥವಾ ಏಣಿ, ಪೀತಾಂಬರಿ, ಮಖಾನಾ, ಮೊಸರು ಮತ್ತು ಹೂವುಗಳು. ಬನ್ಸಿ ಘಾಟ್ ಮಾರ್ಕೆಟ್ನಲ್ಲಿ ಚಟ್ಟ ಅಥವಾ ಏಣಿಗೆ 450 ರೂ.ಗಳಿದ್ದರೆ, ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 1050 ರೂ. ಬೆಲೆ ಇದೆ. ಅದೇ ರೀತಿ ಕನಕರ್ಭಾಗ್ನಲ್ಲಿ 7000 ರೂಪಾಯಿ ಬೆಲೆ ಇದೆ.
ಈ ಬಗ್ಗೆ ಈಟಿವಿ ಭಾರತ್ ವರದಿಗಾರರು ಪಿಎಂಸಿಹೆಚ್ ಗೇಟ್‌ನಲ್ಲಿ ಏಣಿಯೊಂದಕ್ಕೆ ಏಜೆಂಟರನ್ನು ಸಂಪರ್ಕಿಸಿದಾಗ, ಅವರು 1050 ರೂ. ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. ಹೂವುಗಳು, ಹಗ್ಗ ಮತ್ತು ಚಾಪೆಯನ್ನು ಹೊರತುಪಡಿಸಿ, ಕೊನೆಯ ವಿಧಿಗಳನ್ನು ನಡೆಸಲು ಬೇಕಾದ ಎಲ್ಲಾ ವಸ್ತುಗಳು ಹೊರತುಪಡಿಸಿ ಅಂತ್ಯಕ್ರಿಯೆಗೆ ಸುಮಾರು 7000 ರೂ. ಆಗುತ್ತದೆ. ಉಳಿದವುಗಳಿಗೆ ಪ್ರತ್ಯೇಕ ಚಾರ್ಜ್ ಮಾಡಲಾಗುವುದು ಎಂದು ಹೇಳಿದ್ದಾರೆ. ಹೀಗಾಗಿ ಸಾಂಪ್ರದಾಯಿಕವಾಗಿ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆಗಳನ್ನು ನಡೆಸುವುದು ಜನರಿಗೆ ಅಸಾಧ್ಯವಾಗಿದೆ.