ಕರ್ನಾಟಕ

karnataka

ETV Bharat / bharat

ನಮ್ಮ ನಿರ್ಲಕ್ಷ್ಯ ಸಮಾಜದ ಸಮಸ್ಯೆಗೆ ಕಾರಣವಾಗಬಾರದು : ಸಚಿವ ಹರ್ಷವರ್ಧನ್ ಎಚ್ಚರಿಕೆ

ದೆಹಲಿಯಲ್ಲಿ ಪ್ರಕರಣಗಳು ಖಂಡಿತವಾಗಿಯೂ ತೀವ್ರವಾಗಿ ಇಳಿದಿವೆ. ಆದರೆ, 1.5 ವರ್ಷಗಳ ನಮ್ಮ ಅನುಭವವು ಯಾವುದೇ ಸಂದರ್ಭದಲ್ಲೂ ವ್ಯರ್ಥವಾಗಬಾರದು. ಜನರು ಮತ್ತು ಸಮಾಜವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸುವಂತಾಗಬಾರದು. ನಾವು ಎಚ್ಚರವಾಗಿರಬೇಕು..

ಸಚಿವ ಹರ್ಷವರ್ಧನ್
ಸಚಿವ ಹರ್ಷವರ್ಧನ್

By

Published : Jun 29, 2021, 3:31 PM IST

ನವದೆಹಲಿ: ಕೋವಿಡ್ -19ರ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು. ನಮ್ಮ ನಿರ್ಲಕ್ಷ್ಯ ಮುಂದಿನ ಸಮಸ್ಯೆಗೆ ಕಾರಣವಾಗಬಾರದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ಇತರ ಪಾಲುದಾರರು ಭಾಗವಹಿಸಿದ ವರ್ಚುವಲ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಹರಡುವ ರೋಗಗಳನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ತಿಳಿಸಿದರು.

"ಕೊರೊನಾ ಎರಡನೇ ಅಲೆ ಇನ್ನೂ ಮುಗಿದಿಲ್ಲ. ದೆಹಲಿಯಲ್ಲಿ ಪ್ರಕರಣಗಳು ಖಂಡಿತವಾಗಿಯೂ ತೀವ್ರವಾಗಿ ಇಳಿದಿವೆ. ಆದರೆ, 1.5 ವರ್ಷಗಳ ನಮ್ಮ ಅನುಭವವು ಯಾವುದೇ ಸಂದರ್ಭದಲ್ಲೂ ವ್ಯರ್ಥವಾಗಬಾರದು. ಜನರು ಮತ್ತು ಸಮಾಜವನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸುವಂತಾಗಬಾರದು. ನಾವು ಎಚ್ಚರವಾಗಿರಬೇಕು"ಎಂದು ಸಚಿವರು ಸೂಚಿಸಿದರು.

ಲಸಿಕೆಗಳ ಬಗ್ಗೆ ಮಾತನಾಡಿದ ಅವರು, "ಅದೃಷ್ಟವಶಾತ್, ಕಳೆದ ಆರು ತಿಂಗಳಿಂದ ಲಸಿಕೆ ಸಹ ಲಭ್ಯವಿದೆ. ಆದ್ದರಿಂದ ಹೆಚ್ಚು ಹೆಚ್ಚು ಜನರಿಗೆ ಲಸಿಕೆ ಹಾಕುವ ಮೂಲಕ ನಾವು ಬಹುಶಃ ಕೋವಿಡ್ ವಿರುದ್ಧದ ಹೋರಾಟದಲ್ಲಿ ಯಶಸ್ಸನ್ನು ಪಡೆಯಬಹುದು" ಎಂದರು.

ABOUT THE AUTHOR

...view details