ನವದೆಹಲಿ:ದೇಶಾದ್ಯಂತ ಮಾರ್ಚ್ 3ರಿಂದ ಎರಡನೇ ಹಂತದ ಕೋವಿಡ್ ಲಸಿಕೆ ನೀಡುವ ಅಭಿಯಾನ ಆರಂಭಗೊಂಡಿದೆ. ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಡೋಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಕೇಂದ್ರ ಆರೋಗ್ಯ ಸಚಿವರು ಮಹತ್ವದ ಘೋಷಣೆ ಮಾಡಿದ್ದಾರೆ.
ಇಷ್ಟು ದಿನ ಕೋವಿಡ್ ವ್ಯಾಕ್ಸಿನ್ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಲಭ್ಯವಾಗುತ್ತಿತ್ತು. ಇನ್ಮುಂದೆ ದಿನದ 24 ಗಂಟೆಗಳ ಕಾಲವೂ ಲಸಿಕೆಯನ್ನು ನೀಡಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯರ ಉಡುಪು ಬಿಚ್ಚಿಸಿ, ಡ್ಯಾನ್ಸ್ ಮಾಡಿಸಿದ ಪೊಲೀಸರು: ತನಿಖೆಗೆ ಆದೇಶ
ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ಮತ್ತಷ್ಟು ವೇಗ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜನರ ಸಮಯ ಹಾಗೂ ಆರೋಗ್ಯದ ಮೌಲ್ಯದ ಬಗ್ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹರ್ಷವರ್ಧನ್ ತಿಳಿಸಿದರು.
ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಕೋವಿನ್ 2.0 ಅಪ್ಲಿಕೇಶನ್ನಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಲಸಿಕೆ ಹಾಕುವ ಕಾಲಾವಧಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದರು. ಇದರ ಜತೆಗೆ ಸಂಜೆ 5 ಗಂಟೆಯ ನಂತರ ಲಸಿಕೆ ನೀಡುವುದು ಅಥವಾ ಸ್ಥಗಿತಗೊಳಿಸುವ ವಿಚಾರದ ಬಗ್ಗೆ ಬಗ್ಗೆ ಆಸ್ಪತ್ರೆಗಳು ನಿರ್ಧರಿಸಬೇಕು ಎಂದು ಸೂಚಿಸಿದ್ದರು.