ಹೈದರಾಬಾದ್: ಮಹಾಮಾರಿ ಕೊರೊನಾ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಭಾರತ ಸಜ್ಜಾಗಿದ್ದು, ದೇಶದ ಮೂರು ಕೋಟಿ ಮುಂಚೂಣಿ ಕಾರ್ಮಿಕರಿಗೆ (ಕೊರೊನಾ ವಾರಿಯರ್ಸ್) ಲಸಿಕೆ ಹಾಕುವುದಾಗಿ ಕೇಂದ್ರ ಸರ್ಕಾರ ಇಂದು ಪ್ರಕಟಿಸಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸಿರುವ 1.1 ಕೋಟಿ ಡೋಸ್ ಕೋವಿಶೀಲ್ಡ್ ಮತ್ತು 55 ಲಕ್ಷ ಡೋಸ್ ಕೋವಾಕ್ಸಿನ್ ಅನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಆದೇಶ ನೀಡಿದೆ.
ಕೋವಿಶೀಲ್ಡ್ ಪ್ರತಿ ಡೋಸ್‌ಗೆ 200 ರೂ ತಗುಲಲಿದೆ. 38.5 ಲಕ್ಷ ಡೋಸ್‌ಗಳಿಗೆ (ಪ್ರತಿ ಡೋಸ್‌ಗೆ) 295 ರೂ. ಮತ್ತು ಉಳಿದ 16.5 ಲಕ್ಷ ಡೋಸ್‌ಗಳನ್ನು ಉಚಿತವಾಗಿ ನೀಡುತ್ತಿದೆ. ಹಾಗಾಗಿ, ಕೋವಾಕ್ಸಿನ್‌ನ ಬೆಲೆ ಪ್ರತಿ ಡೋಸ್‌ಗೆ 206 ರೂ ಆಗಲಿದೆ.
ಈ ಸುದ್ದಿಯನ್ನೂ ಓದಿ:ಕೊರೊನಾ ಲಸಿಕೆ ಯಶಸ್ಸು: ಉಜ್ಜೈನಿಯ ಬಾಬಾ ಮಹಾಕಾಳ ದೇವಸ್ಥಾನದಲ್ಲಿ ವಿಶೇಷ ಪೂಜೆ
ರಾಜಸ್ಥಾನ, ತಮಿಳುನಾಡು, ದೆಹಲಿ, ಮಹಾರಾಷ್ಟ್ರ, ಬಿಹಾರ, ಕರ್ನಾಟಕ, ಒಡಿಶಾ, ಉತ್ತರ ಪ್ರದೇಶ, ಅಸ್ಸೋಂ, ಆಂಧ್ರಪ್ರದೇಶ ಮತ್ತು ಹರಿಯಾಣ ರಾಜ್ಯಗಳು ಕೋವ್ಯಾಕ್ಸಿನ್ ಬಳಸಲು ಒಪ್ಪಿಕೊಂಡಿದ್ದು, ಈಗಾಗಲೇ ಸರ್ವ ಸಿದ್ಧತೆ ನಡೆಸಿದೆ. ಹತ್ತು ರಾಜ್ಯಗಳಲ್ಲಿ ಈಗಾಗಲೇ 20,000 ಡೋಸ್ ಕೋವಾಕ್ಸಿನ್ ಬಂದಿದ್ದರೆ, ಅಸ್ಸೋಂ ಈವರೆಗೆ 12,000 ಡೋಸ್ ಪಡೆದಿದೆ.
ದೆಹಲಿ, ಆಂಧ್ರ, ತೆಲಂಗಾಣ, ಪಂಜಾಬ್ ರಾಜ್ಯಗಳು ಕೋವಿಶೀಲ್ಡ್ ಬಳಸಲಿವೆ. ತಮಿಳುನಾಡು, ಕೇರಳ, ಬಿಹಾರ, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳು ಎಲ್ಲರಿಗೂ ಉಚಿತ ಲಸಿಕೆಗಳನ್ನು ನೀಡುವುದಾಗಿ ಘೋಷಿಸಿದ್ದು, ಕೇಂದ್ರದಿಂದ ನೆರವು ಕೇಳಿವೆ.