ಶಹಜಹಾನ್ಪುರ(ಉತ್ತರಪ್ರದೇಶ): ಕೊರೊನಾ ಮಹಾಮಾರಿ ಸಂದರ್ಭದಲ್ಲಿ ಸಾವಿರಾರು ಜನರು ತೊಂದರೆಗೊಳಗಾಗುತ್ತಿದ್ದು, ಹತ್ತಾರು ಸಮಸ್ಯೆ ಎದುರಿಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಲಭ್ಯವಾಗದೇ ಕೆಲವರು ಉಸಿರು ಚೆಲ್ಲಿದ್ದಾರೆ. ಈ ಮಧ್ಯೆ ಕೆಲವೊಂದು ಮಾನವೀಯ ಘಟನೆಗಳು ಕಂಡುಬರುತ್ತಿವೆ. ಸದ್ಯ ಅಂತಹದೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು, ಶಹಜಹಾನಪುರದಲ್ಲಿ ಈ ಘಟನೆ ನಡೆದಿದ್ದು, ಕೋವಿಡ್ ಸೋಂಕಿಗೊಳಗಾಗಿ ಆಕ್ಸಿಜನ್ ಲಭ್ಯವಾಗದೇ ತೊಂದರೆಗೊಳಗಾಗಿದ್ದ ರೋಗಿಗೆ ಯುವತಿವೋರ್ವಳು ಸ್ಕೂಟಿ ಮೇಲೆ ಆಕ್ಸಿಜನ್ ಸಿಲಿಂಡರ್ ತಂದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ. ಶಹಜಹಾನ್ಪುರದ ಮದಾರ್ಖೆಲ್ ಪ್ರದೇಶದಲ್ಲಿ ವಾಸವಾಗಿರುವ ಅರ್ಷಿ, ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ನಡುವೆ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಪೂರೈಸುವ ಕೆಲಸ ಮಾಡ್ತಿದ್ದು, ಸ್ವಂತ ಹಣದಲ್ಲೇ ಆಕ್ಸಿಜನ್ ತುಂಬಿಸುತ್ತಿದ್ದಾಳೆ.