ಕರ್ನಾಟಕ

karnataka

ETV Bharat / bharat

ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್‌ ಸಾಗಿಸಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಡಗು ನಿಯೋಜಿಸಿದ ನೌಕಾಪಡೆ - Southern Naval Command at Kochi

ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್​​ಗಳನ್ನು ಸಾಗಿಸಲು ಕೇರಳದ ಕೊಚ್ಚಿಯ ದಕ್ಷಿಣ ನೌಕಾಪಡೆ ಎರಡು ನೌಕಾ ಹಡಗುಗಳನ್ನು ನಿಯೋಜಿಸಿದೆ.

Lakshadweep
ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್‌ ಸಾಗಿಸಲು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಡಗು ನಿಯೋಜಿಸಿದ ನೌಕಾಪಡೆ

By

Published : Apr 24, 2021, 10:31 AM IST

ಕೊಚ್ಚಿ (ಕೇರಳ):ಲಕ್ಷದ್ವೀಪಕ್ಕೆ ಆಮ್ಲಜನಕ ಸಿಲಿಂಡರ್​​ಗಳನ್ನು ಸಾಗಿಸಲು ಕೇರಳದ ಕೊಚ್ಚಿಯ ದಕ್ಷಿಣ ನೌಕಾಪಡೆ ಎರಡು ನೌಕಾ ಹಡಗುಗಳನ್ನು ನಿಯೋಜಿಸಿದ್ದು, ಇವು 'ಆಕ್ಸಿಜನ್ ಎಕ್ಸ್‌ಪ್ರೆಸ್' ಹಡಗುಗಳೆಂದು ಹೇಳಿದೆ.

ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಟಿಎಲ್ ಆಡಳಿತವನ್ನು ಬೆಂಬಲಿಸಲು ಆಕ್ಸಿಜನ್ ಸಿಲಿಂಡರ್‌ ಸಾಗಿಸಲು ಹಾಗೂ ಖಾಲಿ ಸಿಲಿಂಡರ್​ಗಳನ್ನು ಅಲ್ಲಿಂದ ಪಡೆಯಲು ಹಡಗುಗಳನ್ನು ನಿಯೋಜಿಸಿರುವುದಾಗಿ ಸದರ್ನ್ ನೇವಲ್ ಕಮಾಂಡ್ (ಎಸ್‌ಎನ್‌ಸಿ) ತಿಳಿಸಿದೆ.

ಹೆಚ್ಚಿನ ಓದಿಗೆ: ಕೋವಿಡ್​ ವಿರುದ್ಧ ಹೋರಾಡಲು 'ಆಕ್ಸಿಜನ್​​ ಎಕ್ಸ್​ಪ್ರೆಸ್' ಹಳಿಗೆ..

ದ್ವೀಪದಲ್ಲಿ ವೈದ್ಯಕೀಯ ನೆರವು ಹೆಚ್ಚಿಸಲು ವೈದ್ಯಕೀಯ ತಂಡವನ್ನು ಕಳುಹಿಸಿಕೊಡಲಾಗಿದ್ದು, ಪಿಪಿಇ, ಆರ್‌ಎಡಿಟಿ ಕಿಟ್‌ಗಳು, ಮಾಸ್ಕ್​​ಗಳು, ಕೈಗವಸುಗಳು, ನೆಬ್ಯುಲೈಸರ್‌ಗಳು ಸೇರಿದಂತೆ ಇತರ ವೈದ್ಯಕೀಯ ವಸ್ತುಗಳನ್ನು ಸರಬರಾಜುಗಳನ್ನು ಸಹ ನೌಕಾಪಡೆಯ ಮೂಲಕ ಒದಗಿಸಲಾಗಿದೆ.

ಈಗಾಗಲೇ ಕೋವಿಡ್​ ಉಲ್ಬಣದಿಂದಾಗಿ ಹೆಚ್ಚು ಬೇಡಿಕೆಯಿರುವ ಆಮ್ಲಜನಕದ ಸಿಲಿಂಡರ್​ಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸಲೆಂದು ಭಾರತೀಯ ರೈಲ್ವೆಯು 'ಆಕ್ಸಿಜನ್ ಎಕ್ಸ್‌ಪ್ರೆಸ್' ವಿಶೇಷ ರೈಲು ಸೇವೆ ಆರಂಭಿಸಿದೆ.

ABOUT THE AUTHOR

...view details