ಕರ್ನಾಟಕ

karnataka

ETV Bharat / bharat

ಕೊರೊನಾ ಎರಡನೇ ಅಲೆ ಸುನಾಮಿಯಾಗಬಹುದು: ಉದ್ಧವ್​​ ಠಾಕ್ರೆ ಭವಿಷ್ಯ

ಕೊರೊನಾದ ಎರಡನೇ ಅಲೆಯು 'ಸುನಾಮಿ' ರೀತಿಯಲ್ಲಿ ಇರಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

Thackeray
ಮುಖ್ಯಮಂತ್ರಿ ಉದ್ಧವ್ ಠಾಕ್ರೆ

By

Published : Nov 22, 2020, 11:07 PM IST

ಮುಂಬೈ: ಕೋವಿಡ್ -19 ಪ್ರಕರಣಗಳು ಮತ್ತೆ ದೇಶದ ಕೆಲವು ಭಾಗಗಳಲ್ಲಿ ಹೆಚ್ಚಾಗುತ್ತಿದ್ದು, ಕೊರೊನಾದ ಎರಡನೇ ಅಲೆಯು 'ಸುನಾಮಿ' ರೀತಿಯಲ್ಲಿ ಇರಬಹುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದು, ಮತ್ತೆ ರಾಜ್ಯದಲ್ಲಿ ಲಾಕ್​ಡೌನ್​ನ ಸುಳಿವು ನೀಡಿದ್ದಾರೆ.

ಸಿಎಂ ಉದ್ಧವ್ ಠಾಕ್ರೆ ಹಾಗೂ ಡಿಸಿಎಂ ಅಜಿತ್ ಪವಾರ್ ಕೊರೊನಾ ಎರಡನೇ ಅಲೆಗೆ ಮುನ್ನೆಚ್ಚರಿಕೆ ವಹಿಸುವಂತೆ ಜನರನ್ನು ಕೋರಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ.

ಭಾನುವಾರ ಸಂಜೆ ಮಾತನಾಡಿದ ಠಾಕ್ರೆ ಹಾಗೂ ಅಜಿತ್ ಪವಾರ್​ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ವಚ್ಛತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಜನದಟ್ಟಣೆ ತಪ್ಪಿಸುವ ಮೂಲಕ ಕೊರೊನಾ ತಡೆಯಬಹುದೆಂದು ಜನರಿಗೆ ಸಲಹೆ ನೀಡಿದ್ದಾರೆ.

ಕೊರೊನಾ ತಡೆಯಲು ನಮ್ಮಲ್ಲಿ ಇನ್ನೂ ಲಸಿಕೆ ಇಲ್ಲ, ಯಾವುದೇ ಚಿಕಿತ್ಸೆಯೂ ಇಲ್ಲ. ಆದ್ದರಿಂದ ನಾವು ಅಲ್ಲಿಯವರೆಗೆ ತಡೆಗಟ್ಟುವ ಕ್ರಮಗಳಿಗೆ ಒಗ್ಗಿಕೊಳ್ಳಬೇಕಾಗಿದ. ಅನ್​ಲಾಕ್​ ಆರಂಭವಾದಾಗಿನಿಂದ ಕೊರೊನಾ ಹೆಚ್ಚಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ಒಳಗಾಗಬೇಡಿ ಎಂದು ಜನರಲ್ಲಿ ಉದ್ಧವ್ ಠಾಕ್ರೆ ಮನವಿ ಮಾಡಿದ್ದಾರೆ.

ಇದರ ಜೊತೆಗೆ ನಮಗೆ ಮತ್ತೊಂದು ಲಾಕ್‌ಡೌನ್ ಬೇಡ. ಎಲ್ಲಾ ಹಬ್ಬಗಳನ್ನು ಸರಳವಾಗಿ ಆಚರಿಸಿದ್ದರೂ, ಅಪಾಯ ಇನ್ನೂ ಕಡಿಮೆಯಾಗಿಲ್ಲ ಎಂದು ಜನರಿಗೆ ಉದ್ಧವ್ ಠಾಕ್ರೆ ಎಚ್ಚರಿಸಿದ್ದು, ಮುಂದಿನ 8-10 ದಿನಗಳವರೆಗೆ ನಾವು ಪರಿಸ್ಥಿತಿಯನ್ನು ಅವಲೋಕಿಸಿ, ಇಲಾಖೆಗಳ ಜೊತೆ ಚರ್ಚಿಸಿ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ABOUT THE AUTHOR

...view details