ಹೈದರಾಬಾದ್: ಈ ತಿಂಗಳ ಆರಂಭದಲ್ಲಿ ಕೊರೊನಾಗೆ ತುತ್ತಾಗಿದ್ದ ಟೆಲಿವಿಷನ್ ತಾರೆ ರುಬಿನಾ ಡಿಲೈಕ್, ಕೊರೊನಾದೊಂದಿಗೆ ಹೋರಾಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಆಕೆಯ ಕುಟುಂಬ ಮತ್ತು ಅಭಿಮಾನಿಗಳ ಪ್ರೀತಿ ಮತ್ತು ಕಾಳಜಿಯನ್ನು ನೆನೆದು ಭಾವುಕರಾಗಿದ್ದಾರೆ.
ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಕೊರೊನಾ ಪಾಸಿಟಿವ್ ಆಗಿದೆ ಎಂದು ಡಿಲೈಕ್ ತನ್ನ ಅಭಿಮಾನಿಗಳಿಗೆ ಈ ತಿಂಗಳ ಮೊದಲು ತಿಳಿಸಿದ್ದರು. ಹಿಮಾಚಲ ಪ್ರದೇಶದ ತನ್ನ ತವರೂರಾದ ಶಿಮ್ಲಾದಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿರುವ ಈ ನಟಿ ಕೊರೊನಾ ವಿರುದ್ಧ ಹೇಗೆ ಸೆಣಸಾಡಿದೆ ಹಾಗೂ ಹೇಗೆ ಇದನ್ನು ಎದುರಿಸಬೇಕು ಎಂಬುದರ ಬಗ್ಗೆ ತಿಳಿಸಿದ್ದಾರೆ.
ಇತ್ತೀಚೆಗೆ ರುಬಿನಾ ವೈರಸ್‌ನಿಂದ ಚೇತರಿಸಿಕೊಳ್ಳುವ ವೇಳೆ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿದ್ದರು. ಈಗ ಸೋಮವಾರ ರಾತ್ರಿ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವಿಡಿಯೋವೊಂದನ್ನು ಬಿಟ್ಟಿದ್ದು, ನನ್ನ ಕೋವಿಡ್ ಚೇತರಿಕೆ ಪ್ರಯಾಣವು ಸಂಪೂರ್ಣ ಕಣ್ಣೀರು, ಕೃತಜ್ಞತೆ, ಪ್ರೀತಿಯಿಂದ ತುಂಬಿತ್ತು ಎಂದಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೂ ಕೂಡ ಪರೀಕ್ಷೆಗೆ ಒಳಗಾಗಿ ಎಂದು ಮನವಿ ಮಾಡಿದ್ದಾರೆ.