ಕೋಲ್ಕತ್ತಾ (ಪಶ್ಚಿಮ ಬಂಗಾಳ):ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ಜಾರಿಗೆ ತಂದಿದ್ದ ನಿರ್ಬಂಧಗಳನ್ನು ಜೂನ್ 15 ರವರೆಗೆ ವಿಸ್ತರಿಸಿ ಸಿಎಂ ಮಮತಾ ಬ್ಯಾನರ್ಜಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ಇದು ಲಾಕ್ಡೌನ್ ಅಥವಾ ಕರ್ಫ್ಯೂ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೀದಿ, ರಾಜ್ಯದ ಮುಖ್ಯ ಕಸುಬಾದ ಸೆಣಬಿನ ಉದ್ಯಮದಲ್ಲಿ ಶೇಕಡಾ 30 ರ ಬದಲು ಶೇಕಡಾ 40 ರಷ್ಟು ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ರಾಜ್ಯದ ಆರ್ಥಿಕತೆಗೆ ತೊಂದರೆಯಾಗದಂತೆ ನಾವು ನಿಗಾ ವಹಿಸಿದ್ದೇವೆ ಎಂದಿದ್ದಾರೆ.