ಕರ್ನಾಟಕ

karnataka

By

Published : Apr 25, 2021, 9:29 AM IST

ETV Bharat / bharat

ಕೋವಿಡ್‌ ಪರಿಹಾರ ಕಾರ್ಯದಲ್ಲಿ ವಾಯುಸೇನೆ ವಿಮಾನಗಳ ನಿರಂತರ ಸೇವೆ

ಭಾರತದ ಕೋವಿಡ್​-19 ಹೋರಾಟದಲ್ಲಿ ಭಾರತೀಯ ವಾಯುಪಡೆ ಬೆನ್ನೆಲುಬಾಗಿ ನಿಂತಿದೆ. ವಾಯುಪಡೆಯ ವಿಮಾನಗಳು ಆಮ್ಲಜನಕ ಸೇರಿದಂತೆ ಕೊರೊನಾ ತಡೆಗೆ ಅಗತ್ಯವಿರುವ ವಸ್ತುಗಳ ಪೂರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

COVID 19 RELIEF EFFORTS BY INDIAN AIR FORCE
ಭಾರತದ ಕೋವಿಡ್​-19 ಹೋರಾಟಕ್ಕೆ ವಾಯುಪಡೆಯ ಸಾಥ್

ತೇಜ್‌ಪುರ: ಕೋವಿಡ್​ ಪರಿಹಾರಕ್ಕಾಗಿ ಭಾರತೀಯ ವಾಯುಪಡೆಯು ತನ್ನ ಪ್ರಯತ್ನಗಳನ್ನು ಮುಂದುವರಿಸಿದೆ. ವಾಯುಪಡೆಯ ಓನ್ ಸಿ -17 ವಿಮಾನ ತಡರಾತ್ರಿ 2 ಗಂಟೆಗೆ ಸಿಂಗಾಪುರದ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಂಡನ್​ ವಾಯುನೆಲೆಗೆ ಪ್ರಯಾಣ ಬೆಳೆಸಿತು.

ಭಾರತೀಯ ವಾಯುಸೇನೆಯ ವಿಮಾನಕ್ಕೆ ಆಮ್ಲಜನಕ ಟ್ಯಾಂಕರ್‌ ತುಂಬಿಸುತ್ತಿರುವುದು.

ಇಂದು ಬೆಳಗ್ಗೆ ಸಿಂಗಾಪುರ ತಲುಪಿರುವ ಯುದ್ಧವಿಮಾನ ಕ್ರಯೋಜೆನಿಕ್ ಆಮ್ಲಜನಕದ ಕಂಟೇನರ್​ಗಳನ್ನು ತುಂಬಿಸಿಕೊಂಡ ನಂತರ, ಸಿಂಗಾಪುರದಿಂದ ನಿರ್ಗಮಿಸಲಿದೆ.

ಭಾರತೀಯ ವಾಯುಪಡೆಯ ಮತ್ತೊಂದು ಸಿ -17 ಯುದ್ಧ ವಿಮಾನ ಹಿಂಡನ್​ ವಾಯುನೆಲೆಯಿಂದ ಪುಣೆಗೆ ಆಗಮಿಸಿತು. ಜೆಟ್​ನಲ್ಲಿ 2 ಖಾಲಿ ಕ್ರಯೋಜೆನಿಕ್ ಆಮ್ಲಜನಕ ಕಂಟೇನರ್ ಟ್ರಕ್​ಗಳೊಂದಿಗೆ ತುಂಬಿಸಲಾಯಿತು. ನಂತರ ಅವುಗಳನ್ನು ಜಮ್ನಗರ್ ವಾಯುನೆಲೆಗೆ ಹಾರಿಸಲಾಯಿತು. ಅದೇ ರೀತಿ, ಸಿ-17 ವಿಮಾನ ಎರಡು ಖಾಲಿ ಆಮ್ಲಜನಕ ಕಂಟೇನರ್​ಗಳನ್ನು ಜೋಧಪುರದಿಂದ ಜಮ್ನಗರಕ್ಕೆ ಸಾಗಿಸಿತು.

ವೈದ್ಯಕೀಯ ಸಲಕರಣೆಗಳನ್ನು ಕೊಂಡೊಯ್ಯಲು ಸಿದ್ಧವಾಗಿರುವ ಭಾರತೀಯ ವಾಯುಸೇನೆಯ ವಿಮಾನ

ಒಂದು ಐಎಎಫ್ ಚಿನೂಕ್ ಹೆಲಿಕಾಪ್ಟರ್ ಮತ್ತು ಒಂದು ಆನ್-32 ಸಾರಿಗೆ ವಿಮಾನಗಳು ಕ್ರಮವಾಗಿ ಜಮ್ಮುವಿನಿಂದ ಲೇಹ್‌ಗೆ ಮತ್ತು ಜಮ್ಮುವಿನಿಂದ ಕಾರ್ಗಿಲ್‌ಗೆ ಕೋವಿಡ್​ ಪರೀಕ್ಷಾ ಸಾಧನಗಳನ್ನು ಕೊಂಡೊಯ್ದಿವೆ. ಉಪಕರಣಗಳು ಜೈವಿಕ ಸುರಕ್ಷತಾ ಕ್ಯಾಬಿನೆಟ್‌ಗಳು, ಕೇಂದ್ರಾಪಗಾಮಿಗಳು ಮತ್ತು ಸ್ಟೆಬಲೈಸರ್‌ಗಳನ್ನು ಒಳಗೊಂಡಿವೆ. ಈ ಯಂತ್ರಗಳನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತಯಾರಿಸಿದೆ.

ಇದನ್ನೂ ಓದಿ:ದೆಹಲಿ ಆಸ್ಪತ್ರೆಯ 50 ಮಂದಿ ಸೋಂಕಿತರಿಗೆ ಬೇಕೇ ಬೇಕು ಆಕ್ಸಿಜನ್‌, ಆದ್ರೆ ಪೂರೈಕೆಯೇ ಇಲ್ಲ!

For All Latest Updates

ABOUT THE AUTHOR

...view details