ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಕೋವಿಡ್​ ಪಾಸಿಟಿವ್ ರೇಟ್​ ಶೇ.19.8ಕ್ಕೆ ಕುಸಿತ: ಕೇಂದ್ರ ಸರ್ಕಾರ - ಭಾರತ ಕೋವಿಡ್​

ದೇಶದಲ್ಲಿ ಕಳೆದ ಕೆಲದಿನಗಳಿಂದ ಕೋವಿಡ್​ ಸೋಂಕಿತ ಸಕ್ರಿಯ ಪ್ರಕರಣಗಳಲ್ಲಿ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Lav Aggarwal
Lav Aggarwal

By

Published : May 15, 2021, 8:07 PM IST

ನವದೆಹಲಿ:ದೇಶದ ಕೋವಿಡ್ ಪಾಸಿಟಿವ್ ರೇಟ್​ ಇದೀಗ ಶೇ. 19.8ಕ್ಕೆ ಕುಸಿತಗೊಂಡಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್​ ಅಗರವಾಲ್ ಮಾಹಿತಿ ನೀಡಿದ್ದಾರೆ. ಕಳೆದ ವಾರ ಇಂದು ಶೇ. 21.9ರಷ್ಟಿತ್ತು ಎಂದಿದ್ದಾರೆ.

ಲವ್​​ ಅಗರವಾಲ್​ ಸುದ್ದಿಗೋಷ್ಠಿ

ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, 11 ರಾಜ್ಯಗಳಿಂದ 1 ಲಕ್ಷಕ್ಕೂ ಅಧಿಕ ಕೋವಿಡ್ ಸಕ್ರಿಯ ಪ್ರಕರಣಗಳಿದ್ದು, 17 ರಾಜ್ಯಗಳಲ್ಲಿ 50 ಸಾವಿರಕ್ಕಿಂತಲೂ ಕಡಿಮೆ ಕೋವಿಡ್ ಕೇಸ್​ಗಳಿವೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್ ಹಾಗೂ ಛತ್ತೀಸ್​ಘಡದಲ್ಲಿ ಕೋವಿಡ್ ಸೋಂಕಿತ ಪ್ರಕರಣ ಇಳಿಮುಖವಾಗಿವೆ. ಆದರೆ ತಮಿಳುನಾಡಿನಲ್ಲಿ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕ ಮೂಡಿಸಿದೆ ಎಂದರು.

ಇದನ್ನೂ ಓದಿ: ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಮಗು ಸೇರಿ ನಾಲ್ವರ ಸಾವು, ಹಲವರಿಗೆ ಗಾಯ

ಇದೇ ವೇಳೆ ಮಾತನಾಡಿರುವ ನೀತಿ ಆಯೋಗದ ಸದಸ್ಯ ವಿಕೆ ಪೌಲ್​, ದೇಶದಲ್ಲಿ ಇದೀಗ ಪ್ರತಿ ತಿಂಗಳು 1.5 ಕೋಟಿ ಕೊವ್ಯಾಕ್ಸಿನ್​ ಲಸಿಕೆ ಉತ್ಪಾದನೆ ಮಾಡಲಾಗ್ತಿದ್ದು, ಇದೀಗ ಅದನ್ನ 10 ಕೋಟಿಗೆ ವಿಸ್ತರಿಸುವ ಇರಾದೆ ಇದೆ ಎಂದಿದ್ದಾರೆ. ದೇಶದಲ್ಲಿ ಈಗಾಗಲೇ ಶೇ. 89ರಷ್ಟು ಆರೋಗ್ಯ ಕಾರ್ಯಕರ್ತರು ಹಾಗೂ ಶೇ. 82ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದರು.

ABOUT THE AUTHOR

...view details