ಕರ್ನಾಟಕ

karnataka

ETV Bharat / bharat

ಕಳೆದ 24 ಗಂಟೆಗಳಲ್ಲಿ 18-44 ವಯೋಮಾನದ 2.15 ಲಕ್ಷ ಜನರಿಗೆ ವ್ಯಾಕ್ಸಿನ್​

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವಯೋಮಾನದ ಜನರಿಗೆ ವ್ಯಾಕ್ಸಿನೇಷನ್ ಅಭಿಯಾನ ಆರಂಭಿಸಲಾಗಿದೆ.

Over 2.15 lakh beneficiaries in 18-44 age group vaccinated in last 24 hrs
ಕೊರೊನಾ ಲಸಿಕಾ ಅಭಿಯಾನ

By

Published : May 4, 2021, 6:43 AM IST

ನವದೆಹಲಿ:ಕಳೆದೊಂದು ದಿನದಲ್ಲಿ 18 ರಿಂದ 44 ವರ್ಷದೊಳಗಿನ 2,15,185 ಫಲಾನುಭವಿಗಳು ಕೋವಿಡ್ ವ್ಯಾಕ್ಸಿನ್‌ನ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ.

ಗುಜರಾತ್​ನಲ್ಲಿ 1,08,188 ಜನರಿಗೆ ವ್ಯಾಕ್ಸಿನ್​ ಹಾಕಲಾಗಿದ್ದು, 18-44 ವರ್ಷ ವಯಸ್ಸಿನವರಿಗೆ ಹೆಚ್ಚು ಲಸಿಕೆ ನೀಡಿದ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ರಾಜಸ್ಥಾನ 75,817 ಮತ್ತು ಮಹಾರಾಷ್ಟ್ರದಲ್ಲಿ 73,455 ಜನರಿಗೆ ಲಸಿಕೆ ನೀಡಲಾಗಿದೆ.

ಇನ್ನುಳಿದಂತೆ, ಹರಿಯಾಣ 54,946, ಛತ್ತೀಸ್‌ಗಢ 1,025, ದೆಹಲಿ 39,799, ಜಮ್ಮು ಮತ್ತು ಕಾಶ್ಮೀರ 5,562, ಕರ್ನಾಟಕ 2,353, ಒಡಿಶಾ 6,311, ಪಂಜಾಬ್ 635, ತಮಿಳುನಾಡು 2,521 ಮತ್ತು ಉತ್ತರ ಪ್ರದೇಶ 33,242 ಜನರಿಗೆ ಲಸಿಕೆ ಒದಗಿಸಲಾಗಿದೆ.

ಇದನ್ನೂ ಓದಿ:ಕಳೆದ 7 ದಿನಗಳಿಂದ 13 ರಾಜ್ಯಗಳಲ್ಲಿ ಇಳಿಕೆಯಾಗಿದೆ ಕೊರೊನಾ: ಕೇಂದ್ರ ಆರೋಗ್ಯ ಇಲಾಖೆ

ದೇಶಾದ್ಯಂತ ಇಲ್ಲಿಯವರೆಗೆ ಒಟ್ಟು 15.88 ಕೋಟಿ ಜನರಿಗೆ ವ್ಯಾಕ್ಸಿನೇಷನ್‌ ಮಾಡಲಾಗಿದೆ.

ABOUT THE AUTHOR

...view details