ಕರ್ನಾಟಕ

karnataka

ETV Bharat / bharat

ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನ ಕೊರೊನಾ ಅಂಕಿ-ಸಂಖ್ಯೆ ಹೀಗಿದೆ... - ಅರವಿಂದ್ ಕೇಜ್ರಿವಾಲ್

ಭಾರತದಲ್ಲಿ ಬುಧವಾರ ಕೊರೊನಾ ಸೋಂಕಿತರ ಸಂಖ್ಯೆ 83,64,086 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬುಧವಾರ ಒಂದೇ ದಿನದಲ್ಲಿ 12,09,425 ಮಾದರಿ ಪರೀಕ್ಷೆಗಳನ್ನು ನಡೆಸಿದ್ದು, ಇದುವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆಯನ್ನು 11,42,08,384 ಕ್ಕೆ ತೆಗೆದುಕೊಂಡಿದೆ.

corona news
ಭಾರತದ ಕೊರೊನಾ ಸುದ್ದಿ

By

Published : Nov 5, 2020, 10:39 PM IST

ಹೈದರಬಾದ್​:ಭಾರತದಲ್ಲಿ ಬುಧವಾರ ಕೊರೊನಾ ವೈರಸ್ 24 ಗಂಟೆಗಳಲ್ಲಿ 50,210 ಮತ್ತು 704 ಸಾವು ಸಂಭವಿಸಿದ್ದು, ಸೋಂಕಿತರ ಸಂಖ್ಯೆ 83,64,086 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದ ಒಟ್ಟು ಕೋವಿಡ್ -19 ಪ್ರಕರಣಗಳಲ್ಲಿ, ಪ್ರಸ್ತುತ 5,27,962 ಪ್ರಕರಣಗಳು ಸಕ್ರಿಯವಾಗಿವೆ. 77,11,809 ಜನರನ್ನು ಬಿಡುಗಡೆ ಮಾಡಲಾಗಿದ್ದು, 1,24,315 ಜನರು ಸಾಂಕ್ರಾಮಿಕ ರೋಗದ ವಿರುದ್ಧದ ಯುದ್ಧದಲ್ಲಿ ಸೋತಿದ್ದಾರೆ. ಚೇತರಿಕೆಗೊಂಡ ಪ್ರಮಾಣ ಶೇಕಡಾ 92.09 ರಷ್ಟಿದ್ದರೆ, ಸಾವಿನ ಪ್ರಮಾಣ ಶೇಕಡಾ 1.49 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಬುಧವಾರ ಒಂದೇ ದಿನದಲ್ಲಿ 12,09,425 ಮಾದರಿ ಪರೀಕ್ಷೆಗಳನ್ನು ನಡೆಸಿದ್ದು, ಇದುವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆಯನ್ನು 11,42,08,384 ಕ್ಕೆ ತೆಗೆದುಕೊಂಡಿದೆ.

ದೆಹಲಿ

ನವದೆಹಲಿ: ರಾಷ್ಟ್ರ ರಾಜಧಾನಿಯ ಕೊರೊನಾ ವೈರಸ್ ಪರಿಸ್ಥಿತಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಹಬ್ಬ ಮತ್ತು ಮಾಲಿನ್ಯದಿಂದಾಗಿ ನಗರದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಹದಗೆಟ್ಟಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇನ್ನು ಎಎಪಿ ನಾಯಕ ಪಟಾಕಿಗಳನ್ನು ನಿಷೇಧಿಸಲು ಮತ್ತು ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ಬುಧವಾರ 6,842 ಕರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗಿನ ಸೋಂಕಿತರ ಸಂಖ್ಯೆ 4,09,938 ಕ್ಕೆ ತಲುಪಿದೆ.

ಮಹಾರಾಷ್ಟ್ರ

ಮುಂಬೈ:ಮಹಾರಾಷ್ಟ್ರದಲ್ಲಿ44,548 ಸಾವುಗಳು ಸೇರಿದಂತೆ ಒಟ್ಟು 16,98,198 ಕೊರೊನಾ ಪ್ರಕರಣಗಳಿಂದ ಹೆಚ್ಚು ಹಾನಿಗೊಳಗಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ದೆಹಲಿ ನಂತರದ ಸ್ಥಾನಗಳಲ್ಲಿವೆ.

50 ರಷ್ಟು ಆಸನ ಸಾಮರ್ಥ್ಯ ಹೊಂದಿರುವ ಸಿನೆಮಾ ಹಾಲ್‌ಗಳನ್ನು ಗುರುವಾರದಿಂದ ಮತ್ತೆ ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ ಮತ್ತು ಒಳಗೆ ಯಾವುದೇ ತಿನ್ನಬಹುದಾದ ವಸ್ತುಗಳನ್ನು ಅನುಮತಿಸಲಾಗುವುದಿಲ್ಲ. ಬುಧವಾರ ಹೊರಡಿಸಿದ ಆದೇಶದಲ್ಲಿ, ಚಿತ್ರ ಮಂದಿರಗಳು, ನಾಟಕ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು, ಈಜುಕೊಳಗಳು ಮತ್ತು ಯೋಗ ಸಂಸ್ಥೆಗಳಿಗೆ ಕಂಟೈನ್​ಮೆಂಟ್​ ಝೋನ್​ ಹೊರಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.

ರಾಜಸ್ಥಾನ

ದೌಸಾ: ದೌಸಾದ ಶೈಲವಾಸ್ ಜೈಲಿನಲ್ಲಿ ಸುಮಾರು 107 ಕೈದಿಗಳ ಕೊರೊನಾ ಪರೀಕ್ಷೆ ನಡೆಸಿದ್ದು, 130 ಕೈದಿಗಳ ವರದಿ ಇನ್ನೂ ಬರಬೇಕಿದೆ. ಇನ್ನು ಜೈಲಿನ ಸಿಬ್ಬಂದಿಯನ್ನು ಇತರ ಕೈದಿಗಳ ಜೊತೆಗೆ ಪರೀಕ್ಷಿಸಲಾಗುತ್ತಿದೆ. ಗುರುವಾರ 28 ಬಂಧಿತರಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಜೈಲಿನಲ್ಲಿ ಕೊರೊನಾ ಹೆಚ್ಚುತ್ತಿರುವ ದೃಷ್ಟಿಯಿಂದ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಕೆ.ಕೆ.ಬಜಾಜ್ ಕೂಡ ಕೇಂದ್ರ ಕಾರಾಗೃಹವನ್ನು ತಲುಪಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಕೊರೊನಾ ಸೋಂಕಿತ ಕೈದಿಗಳನ್ನು ಪ್ರತ್ಯೇಕವಾಗಿಡಲು ಸೂಚನೆ ನೀಡಿದರು.

ತಮಿಳುನಾಡು

ಚೆನ್ನೈ: ತಮಿಳುನಾಡಿನಲ್ಲಿ ಹೊಸದಾಗಿ 2,348 ಕೊರೊನಾ ಪ್ರಕರಣಗಳು ಕಂಡು ಬಂದಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,36,777 ಕ್ಕೆ ತಲುಪಿದೆ ಎಂದು ವರದಿಯಾಗಿದೆ. 28 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 11,272 ಕ್ಕೆ ತಲುಪಿದೆ. ಪ್ರಸ್ತುತ ರಾಜ್ಯದಲ್ಲಿ 19,061 ಸಕ್ರಿಯ ಪ್ರಕರಣಗಳಿವೆ.

ಜಾರ್ಖಂಡ್

ರಾಂಚಿ: ಬುಧವಾರ ಜಾರ್ಖಂಡ್‌ನಲ್ಲಿ ಮುನ್ನೂರೊಂದು ಕೊರೊನಾ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಕೋವಿಡ್​-19 ಬುಲೆಟಿನ್ ಪ್ರಕಾರ, ಇದೇ ದಿನ 505 ಜನರನ್ನು ಬಿಡುಗಡೆ ಮಾಡಲಾಗಿದೆ. 97,480 ಜನರು ಚೇತರಿಕೆಗೊಂಡಿದ್ದು, 4,814 ಸಕ್ರಿಯ ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 1,03,188 ಕ್ಕೆ ತಲುಪಿದೆ. ಈವರೆಗೆ ಒಟ್ಟು 894 ಜನರು ಕೊರೊನಾಕ್ಕೆ ಬಲಿಯಾಗಿದ್ದಾರೆ. ಇನ್ನು ಬುಧವಾರದವರೆಗೆ 3,503,516 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details