ಕರ್ನಾಟಕ

karnataka

ETV Bharat / bharat

ಕೊರೊನಾ ಇನ್ನೂ ಮಾಯವಾಗಿಲ್ಲ ಎಚ್ಚರದಿಂದಿರಿ : ದೇಶದ ಜನತೆಗೆ ಮೋದಿ ಮನವಿ

ಗುಜರಾತ್‌ನ ಜುನಾಗಢ್‌ನ ಗಥಿಲಾದಲ್ಲಿರುವ ಉಮಿಯಾ ಮಾತಾ ದೇವಸ್ಥಾನದಲ್ಲಿ 14ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಆಕೆಯನ್ನು ಕಡ್ವಾ ಪಾಟಿದಾರ್ ಸಮುದಾಯದ ದೇವತೆ ಎಂದು ಪರಿಗಣಿಸಲಾಗಿದೆ. ರಾಸಾಯನಿಕ ಗೊಬ್ಬರದ ದುಷ್ಪರಿಣಾಮಗಳಿಂದ ಭೂಮಿ ತಾಯಿಯನ್ನು ರಕ್ಷಿಸಲು ಮಾತಾ ಉಮಿಯಾ ಭಕ್ತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಬೇಕು..

ಕೊರೊನಾ ಇನ್ನೂ ಮಾಯವಾಗಿಲ್ಲ ಎಚ್ಚರದಿಂದಿರಿ: ದೇಶದ ಜನತೆಗೆ ಮೋದಿ ಮನವಿ
ಕೊರೊನಾ ಇನ್ನೂ ಮಾಯವಾಗಿಲ್ಲ ಎಚ್ಚರದಿಂದಿರಿ: ದೇಶದ ಜನತೆಗೆ ಮೋದಿ ಮನವಿ

By

Published : Apr 10, 2022, 7:22 PM IST

ಜುನಾಗಢ(ಗುಜರಾತ್): ಕೊರೊನಾ ಇನ್ನೂ ಮಾಯವಾಗಿಲ್ಲ ಮತ್ತು ಪುನರುಜ್ಜೀವನಗೊಳ್ಳುತ್ತಲೇ ಇದೆ ಎಂದು ಹೇಳುವ ಮೂಲಕ ಕೊರೊನಾ ವಿರುದ್ಧ ತಮ್ಮ ಎಚ್ಚರಿಕೆಯನ್ನು ಕಡಿಮೆ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಸೂಚಿಸಿದ್ದಾರೆ. ವೈರಸ್ ಹರಡುವುದನ್ನು ತಡೆಯಲು 185 ಕೋಟಿ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದ ಅವರು, ಸಾರ್ವಜನಿಕ ಬೆಂಬಲದಿಂದ ಇದು ಸಾಧ್ಯವಾಯಿತು ಎಂದರು.

ಕೊರೊನಾ ಒಂದು ದೊಡ್ಡ ಬಿಕ್ಕಟ್ಟು, ಬಿಕ್ಕಟ್ಟು ಈಗ ಮುಗಿದಿದೆ ಎಂದು ನಾವು ಹೇಳುತ್ತಿಲ್ಲ. ಇದು ವಿರಾಮ ತೆಗೆದುಕೊಂಡಿರಬಹುದು. ಆದರೆ,ಅದು ಯಾವಾಗ ಮರುಕಳಿಸುತ್ತದೆ ಎಂದು ನಮಗೆ ತಿಳಿದಿಲ್ಲ. ಇದು 'ಬಹುರೂಪಿ' ಕಾಯಿಲೆ. ಇದನ್ನು ನಿಲ್ಲಿಸಲು ಈಗಾಗಲೇ ಸುಮಾರು 185 ಕೋಟಿ ಲಸಿಕೆಗಳನ್ನ ನೀಡಲಾಗಿದೆ. ಇದು ಜಗತ್ತನ್ನು ಅಚ್ಚರಿಗೊಳಿಸಿದೆ ಎಂದು ಮೋದಿ ಹೆಮ್ಮೆಪಟ್ಟರು.

ಇದನ್ನೂ ಓದಿ:ಗುಜರಾತ್‌ನ ಬಿಜೆಪಿ ಸರ್ಕಾರದ ವಿರುದ್ಧ ಕೇಜ್ರಿವಾಲ್ ಕಿಡಿ : ಕೇಸರಿ ಕೋಟೆಗೆ ಲಗ್ಗೆ ಇಡುತ್ತಾ ಆಪ್​ !?

ಗುಜರಾತ್‌ನ ಜುನಾಗಢ್‌ನ ಗಥಿಲಾದಲ್ಲಿರುವ ಉಮಿಯಾ ಮಾತಾ ದೇವಸ್ಥಾನದಲ್ಲಿ 14ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಆಕೆಯನ್ನು ಕಡ್ವಾ ಪಾಟಿದಾರ್ ಸಮುದಾಯದ ದೇವತೆ ಎಂದು ಪರಿಗಣಿಸಲಾಗಿದೆ. ರಾಸಾಯನಿಕ ಗೊಬ್ಬರದ ದುಷ್ಪರಿಣಾಮಗಳಿಂದ ಭೂಮಿ ತಾಯಿಯನ್ನು ರಕ್ಷಿಸಲು ಮಾತಾ ಉಮಿಯಾ ಭಕ್ತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಬೇಕು.

ನಾವು ನಮ್ಮ ತಾಯಿಗೆ ಅನಗತ್ಯ ಔಷಧಿಗಳನ್ನು ತಿನ್ನಿಸಬಾರದು, ನಮ್ಮ ಭೂಮಿಯಲ್ಲಿ ಅನಗತ್ಯ ರಾಸಾಯನಿಕಗಳನ್ನು ಬಳಸಬಾರದು ಎಂದು ಸಲಹೆ ನೀಡಿದರು. ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಜಾಗೃತಿ ಹೆಚ್ಚಿದ ಪರಿಣಾಮ ದೇಶದ ಹೆಣ್ಣು ಮಕ್ಕಳು ಒಲಿಂಪಿಕ್ಸ್‌ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ನಮ್ಮ ಹೆಣ್ಣುಮಕ್ಕಳ ಬಗ್ಗೆ ಯಾರು ತಾನೆ ಹೆಮ್ಮೆ ಪಡುವುದಿಲ್ಲ? ಎಂದ ಅವರು, ಮಕ್ಕಳು ಮತ್ತು ಬಾಲಕಿಯರಲ್ಲಿ ಅಪೌಷ್ಟಿಕತೆಯ ವಿರುದ್ಧ ಸಕ್ರಿಯರಾಗುವ ಅಗತ್ಯವನ್ನು ಒತ್ತಿ ಹೇಳಿದರು.

For All Latest Updates

TAGGED:

ABOUT THE AUTHOR

...view details