ನವದೆಹಲಿ:ಆಮ್ಲಜನಕದ ಹಾಹಾಕಾರ ಉಂಟಾಗಿರುವ ಭಾರತದಲ್ಲಿ ರಕ್ಕಸ ಕೊರೊನಾದಿಂದ ನಿನ್ನೆ ಮತ್ತೆ 4,120 ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಅನೇಕ ರಾಜ್ಯಗಳು ಲಾಕ್ಡೌನ್, ಕಠಿಣ ಕರ್ಫ್ಯೂ ಹೇರಿದ್ದರೂ 24 ಗಂಟೆಗಳ ಅವಧಿಯಲ್ಲಿ 3,62,727 ಸೋಂಕಿತರು ಪತ್ತೆಯಾಗಿದ್ದಾರೆ.
ದೇಶದಲ್ಲೀಗ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 2,37,03,665, ಮೃತರ ಸಂಖ್ಯೆ 2,58,317 ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 37,10,525ಕ್ಕೆ ಏರಿಕೆಯಾಗಿದೆ. ಬುಧವಾರ 3,52,181 ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ ಒಟ್ಟು 1,97,34,823 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.