ಕರ್ನಾಟಕ

karnataka

ETV Bharat / bharat

ಸುಮಾರು 6 ತಿಂಗಳ ಬಳಿಕ ಭಾರತದಲ್ಲಿ ಕೋವಿಡ್​ ಪ್ರಕರಣಗಳ ಗಣನೀಯ ಇಳಿಕೆ

ಸದ್ಯ ದೇಶದಲ್ಲಿ 2,92,518 ಸಕ್ರಿಯ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳಿದ್ದು, ಇದು ಒಟ್ಟು ಸಕ್ರೀಯ ಪ್ರಕರಣಗಳು ಶೇಕಡಾ 2.90 ರಷ್ಟಿದೆ.

ಕೊರೊನಾ ಪ್ರಕರಣ
COVID-19

By

Published : Dec 22, 2020, 1:09 PM IST

ನವದೆಹಲಿ: ದೇಶದಲ್ಲಿ ದೈನಂದಿನ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಸುಮಾರು ಆರು ತಿಂಗಳ ನಂತರ 20,000 ಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 3 ಲಕ್ಷಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸುತ್ತಿವೆ.

ಈಗಾಗಲೇ ಭಾರತದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಒಂದು ಕೋಟಿ ತಲುಪಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 19,556 ಹೊಸ ಪ್ರಕರಣಗಳು ವರದಿಯಾಗಿವೆ. 301 ಹೊಸ ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 1,46,111 ಕ್ಕೆ ಏರಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಈ​ ಸೋಂಕಿನಿಂದ 96,36,487 ಜನರು ಈಗಾಗಲೇ ಗುಣಮುಖರಾಗಿದ್ದು, ಶೇಕಡಾ 95.65 ರಷ್ಟು ರಾಷ್ಟ್ರೀಯ ಚೇತರಿಕೆ ಪ್ರಮಾಣವಿದೆ. ಕೋವಿಡ್​ -19 ಪ್ರಕರಣದ ಸಾವಿನ ಪ್ರಮಾಣವು ಶೇ 1.45 ರಷ್ಟಿದೆ.

ಸೋಂಕಿತ ಪ್ರಕರಣಗಳ ಏರಿಳಿತ ಹೀಗಿದೆ:

ಭಾರತದ ಕೋವಿಡ್ ಸೋಂಕಿತರ ಸಂಖ್ಯೆ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ.

ಇದು ಸೆಪ್ಟೆಂಬರ್ 28 ರಂದು 60 ಲಕ್ಷ ದಾಟಿದೆ. ಅಕ್ಟೋಬರ್ 11 ರಂದು 70 ಲಕ್ಷ ತಲಪಿತ್ತು. ಅಕ್ಟೋಬರ್ 29 ರಂದು 80 ಲಕ್ಷ, ನವೆಂಬರ್ 20 ರಂದು 90 ಲಕ್ಷ ಮತ್ತು ಡಿಸೆಂಬರ್ 19 ರಂದು ಒಂದು ಕೋಟಿ ಗಡಿ ದಾಟಿತ್ತು.

ಐಸಿಎಂಆರ್ ಪ್ರಕಾರ, ಡಿಸೆಂಬರ್ 21 ರವರೆಗೆ 16,31,70,557 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಸೋಮವಾರ 10,72,228 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ರಾಜ್ಯವಾರು ಮೃತಪಟ್ಟವರ ವಿವರ:

ದೇಶದಲ್ಲಿ ಈವರೆಗೆ ಒಟ್ಟು 1,46,111 ಸಾವುಗಳು ಸಂಭವಿಸಿವೆ. ಇದರಲ್ಲಿ ಮಹಾರಾಷ್ಟ್ರದಿಂದ 48,801, ನಂತರ ಕರ್ನಾಟಕದಿಂದ 12,016, ತಮಿಳುನಾಡಿನಿಂದ 11,995, ದೆಹಲಿಯಿಂದ 10,304, ಪಶ್ಚಿಮ ಬಂಗಾಳದಿಂದ 9,401, ಉತ್ತರಪ್ರದೇಶದಿಂದ 8,212, ಆಂಧ್ರಪ್ರದೇಶದಿಂದ 7,078 ಮತ್ತು ಪಂಜಾಬ್‌ 5,212 ಸೋಂಕಿತರು ಸಾವನ್ನಪ್ಪಿದ್ದಾರೆ.

ABOUT THE AUTHOR

...view details