ನವದೆಹಲಿ: ಬಿಹಾರ ಹಾಗೂ ಕೇರಳ ರಾಜ್ಯಗಳು ಬಾಕಿ ಉಳಿಸಿಕೊಂಡಿದ್ದ ಕೋವಿಡ್ ಸಾವಿನ ದತ್ತಾಂಶ ತಡವಾಗಿ ನೀಡಿದ ಕಾರಣ ನಿನ್ನೆ ದೇಶದಲ್ಲಿ 2,796 ಕೋವಿಡ್ ಸಾವು ವರದಿಯಾಗಿದೆ. ಒಂದೇ ಬಾರಿಗೆ ಬಿಹಾರ 2,426 ಮಂದಿ ಹಾಗೂ ಕೇರಳ 263 ಮಂದಿ ಸೋಂಕಿತರು ಮೃತಪಟ್ಟಿರುವ ಡೇಟಾ ನೀಡಿದೆ. ಈ ಮೂಲಕ ಭಾರತದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 4,73,326ಕ್ಕೆ ಏರಿಕೆಯಾಗಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 8,895 ಮಂದಿ ಹೊಸ ಕೇಸ್ಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 3,46,33,255 ಮಂದಿಗೆ ವೈರಸ್ ಅಂಟಿದೆ. ಆದರೆ ಇವರಲ್ಲಿ 3,40,60,774 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 99,155 ಕೇಸ್ಗಳು ಸಕ್ರಿಯವಾಗಿದ್ದು, ಆ್ಯಕ್ಟಿವ್ ಪ್ರಕರಣಗಳ ಪ್ರಮಾಣ ಶೇ.29ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಭಾರತದ ಶೇ.50ರಷ್ಟು ಅರ್ಹ ಮಂದಿಗೆ ವ್ಯಾಕ್ಸಿನೇಷನ್