ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಹೊಸದಾಗಿ 26,964 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 383 ಸೋಂಕಿತರು ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ 26,964 ಕೊರೊನಾ ಸೋಂಕಿತರು ಪತ್ತೆ: 383 ಮಂದಿ ಬಲಿ! - ಒಟ್ಟು ಕೊರೊನಾ ಪ್ರಕರಣಗಳು
ಭಾರತದಲ್ಲಿ ಹೊಸದಾಗಿ 26,964 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 383 ಸೋಂಕಿತರು ಬಲಿಯಾಗಿದ್ದಾರೆ.
ಒಟ್ಟು ಕೊರೊನಾ ಪ್ರಕರಣಗಳು
186 ದಿನಗಳಲ್ಲೇ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದು, 3,01,989ಕ್ಕೆ ಇಳಿಕೆ ಕಂಡಿದೆ. ಈವರೆಗೆ ಕೊರೊನಾದಿಂದ 3,27,83,741 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಇದುವರೆಗೂ 4,45,768 ಮಂದಿ ಮೃತಪಟ್ಟಿದ್ದಾರೆ.
ಆರೋಗ್ಯ ಸಚಿವಾಲಯದ ಪ್ರಕಾರ, ಸೆಪ್ಟೆಂಬರ್ 19 ರವರೆಗೆ 55,67,54,282 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರಲ್ಲಿ ಭಾನುವಾರ 15,92,395 ಪರೀಕ್ಷೆ ಮಾಡಲಾಗಿದೆ. ಅಷ್ಟೇ ಅಲ್ಲ ಮಂಗಳವಾರ 96,46,778 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.