ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ಅಮೆರಿಕಾ, ಫ್ರಾನ್ಸ್, ಜರ್ಮನಿ, ರಷ್ಯಾ ದೇಶಗಳಿಂದ ನೆರವಿನ ಹಸ್ತ ಚಾಚಲಾಗಿದೆ. ಈಗಾಗಲೇ ಯುಎಸ್‌ಎಯಿಂದ 1,000 ಆಮ್ಲಜನಕ ಸಿಲಿಂಡರ್‌ಗಳು, ರೆಗ್ಯುಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹೊತ್ತ ವಿಮಾನವು ಶನಿವಾರ ರಾತ್ರಿ ಭಾರತಕ್ಕೆ ಬಂದಿಳಿದಿದೆ. ಈ ಬಗ್ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ವಿರುದ್ಧದ ಭಾರತದ ಹೋರಾಟಕ್ಕೆ ಯುಎಸ್, ಫ್ರಾನ್ಸ್ನಿಂದ ನೆರವಿನ ಹಸ್ತ - France helps to India
ಕೊರೊನಾ ವಿರುದ್ಧ ಹೋರಾಡಲು ಯುಎಸ್ ಮತ್ತೆ ಸಹಾಯ ಹಸ್ತ ಚಾಚಿದ್ದು, 1000ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳು, ರೆಗ್ಯುಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಭಾರತಕ್ಕೆ ರವಾನಿಸಿದೆ. ಇನ್ನು ಫ್ರಾನ್ಸ್ ಕೂಡ ಎಂಟು ದೊಡ್ಡ ಆಮ್ಲಜನಕ ಉತ್ಪಾದನಾ ಘಟಕಗಳು ಸೇರಿದಂತೆ 28 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಿದೆ.

"ಯುಎಸ್ನ ಸಹಕಾರ ಮುಂದುವರೆದಿದೆ. ಯುಎಸ್ಎಯಿಂದ ಮತ್ತೊಂದು ವಿಮಾನವು 1000ಕ್ಕೂ ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳು, ರೆಗ್ಯುಲೇಟರ್ ಮತ್ತು ಇತರ ವೈದ್ಯಕೀಯ ಉಪಕರಣಗಳು ಆಗಮಿಸಿವೆ. 2 ದಿನಗಳ ಅವಧಿಯಲ್ಲಿ ಮೂರನೇ ಸಾಗಣೆ ಇದಾಗಿದ್ದು, ದೇಶದ ಆಮ್ಲಜನಕದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಯುಎಸ್ ಬೆಂಬಲಕ್ಕಾಗಿ ಕೃತಜ್ಞತೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ. ಶುಕ್ರವಾರ ಯುಎಸ್ ತನ್ನ ಹಲವಾರು ತುರ್ತು ಕೊರೊನಾ ಪರಿಹಾರ ವಸ್ತುಗಳನ್ನು ಭಾರತಕ್ಕೆ ಕಳುಹಿಸಿತ್ತು.
ಇನ್ನು ಫ್ರಾನ್ಸ್ ಕೂಡ ಭಾರತಕ್ಕೆ ಸಹಾಯ ಮಾಡುವ ಉದ್ದೇಶದಿಂದ "ಐಕಮತ್ಯ ಮಿಷನ್"ನ ಭಾಗವಾಗಿ ಎಂಟು ದೊಡ್ಡ ಆಮ್ಲಜನಕ ಉತ್ಪಾದನಾ ಘಟಕಗಳು ಸೇರಿದಂತೆ 28 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಲಿದೆ. ಎಂಟು ಆಸ್ಪತ್ರೆಗಳನ್ನು ಆಮ್ಲಜನಕ ಸ್ವಾಯತ್ತವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಭಾರತದ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಹೇಳಿದ್ದಾರೆ.