ನವದೆಹಲಿ :ಕಳೆದ ಕೆಲ ವಾರಗಳಿಂದ ಭಾರತದಲ್ಲಿ ಕೋವಿಡ್ ರೂಪಾಂತರಿ ಒಮಿಕ್ರಾನ್ ಹಾವಳಿ ಜೋರಾಗಿದೆ. ದಿನದಿಂದ ದಿನಕ್ಕೆ ಅತಿ ಹೆಚ್ಚಿನ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ನಡೆದಿರುವ ಅಧ್ಯಯನದಿಂದ ಮತ್ತೊಂದು ಆಘಾತಕಾರಿ ವಿಷಯ ಬಹಿರಂಗಗೊಂಡಿದೆ.
ಕ್ಲಿನಿಕಲ್ ವೈರಾಲಜಿ, ಲಿವರ್ ಮತ್ತು ಅಂಡ್ ಬಿಲಿಯರಿ ಸೈನ್ಸಸ್ ವಿಭಾಗ ನವದೆಹಲಿ ನಡೆಸಿರುವ ಅಧ್ಯಯನದಿಂದ ಹೊಸ ರೂಪಾಂತರ ಇದೀಗ ಸಮುದಾಯಕ್ಕೆ ಹರಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಕೋವಿಡ್ನ ರೂಪಾಂತರಿ ಒಮಿಕ್ರಾನ್ ಸೋಂಕು ಕಾಣಿಸಿರುವ ರೋಗಿಗಳಲ್ಲಿ ಹೆಚ್ಚಿನವರು ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಆದರೂ ಅವರಲ್ಲಿ ಸೋಂಕು ಕಾಣಿಸಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಇದು ಸಮುದಾಯಕ್ಕೆ ಹಬ್ಬಿದೆ ಎಂಬುದನ್ನ ಸೂಚಿಸುತ್ತದೆ ಎಂದು ತಿಳಿಸಿದೆ.
2021ರ ನವೆಂಬರ್ 25ರಿಂದ ಡಿಸೆಂಬರ್ 23ರ ನಡುವೆ ದೆಹಲಿಯ ಐದು ಜಿಲ್ಲೆಗಳಿಂದ ಸಂಗ್ರಹಿಸಿರುವ ಜೀನೋಮ್ ಸೀಕ್ವೆನ್ಸಿಂಗ್ನ ವರದಿ ಕೂಡ ದಾಖಲಾಗಿದೆ. ಕೋವಿಡ್ ಸೋಂಕಿಗೊಳಗಾಗಿರುವ ಶೇ. 60.9ರಷ್ಟು ಜನರಲ್ಲಿ ಸಮುದಾಯಕ್ಕೆ ಹರಡುವಿಕೆ ಕಂಡು ಬಂದಿದೆ ಎನ್ನಲಾಗಿದೆ.