ನವದೆಹಲಿ: ದೇಶದಲ್ಲಿ ಕೋವಿಡ್ -19 ರೂಪಾಂತರ ತಳಿ ಒಮಿಕ್ರಾನ್ ಹೆಚ್ಚುತ್ತಿರುವ ಕಾರಣಕ್ಕೆ ದೆಹಲಿ ಸರ್ಕಾರ ಶನಿವಾರ 4 ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣ ಒಮಿಕ್ರಾನ್ ಚಿಕಿತ್ಸೆಗಾಗಿ ಮೀಸಲಿರಿಸಿದೆ.
ಆ ನಾಲ್ಕು ಆಸ್ಪತ್ರೆಗಳೆಂದರೆ:
- ಸರ್ ಗಂಗಾ ರಾಮ್ ಆಸ್ಪತ್ರೆ
- ಸಾಕೇತ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆ
- ವಸಂತ್ ಕುಂಜ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆ
- ತುಘಲಕಾಬಾದ್ ಪ್ರದೇಶದ ಬಾತ್ರಾ ಆಸ್ಪತ್ರೆ
ಈ ಹಿಂದೆ, ಒಮಿಕ್ರಾನ್ ಚಿಕಿತ್ಸೆಗಾಗಿ ಸರ್ಕಾರಿ ಲೋಕನಾಯಕ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಯನ್ನು ಮಾತ್ರ ಗೊತ್ತುಪಡಿಸಲಾಗಿತ್ತು. ದೇಶದಲ್ಲಿ ಈವರೆಗೆ 10ಕ್ಕೂ ಹೆಚ್ಚು ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಡಿ.2 ರಂದು ಕರ್ನಾಟಕದಲ್ಲಿ ದೇಶದ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆಯಾಗಿತ್ತು.
ಮೊದಲ ಬಾರಿಗೆ ಕೋವಿಡ್-19 ಹೊಸ ರೂಪಾಂತರ ಒಮಿಕ್ರಾನ್ ನ.25 ರಂದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ವರದಿ ಮಾಡಿತ್ತು. WHO ಪ್ರಕಾರ, ಈ ವರ್ಷ ನ.9 ರಂದು ಸಂಗ್ರಹಿಸಲಾದ ಮಾದರಿಯಿಂದ ಮೊದಲ ಬಾರಿಗೆ ದೃಢಪಟ್ಟಿತ್ತು. ನ.26 ರಂದು, ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಸೋಂಕನ್ನು WHO 'ಒಮಿಕ್ರಾನ್' ಎಂದು ಹೆಸರಿಸಿದೆ. ಒಮಿಕ್ರಾನ್ ಪತ್ತೆಯಾದಾಗಿನಿಂದ ಹಲವು ದೇಶಗಳು ದಕ್ಷಿಣ ಆಫ್ರಿಕಾದ ರಾಷ್ಟ್ರಗಳ ಮೇಲೆ ಪ್ರಯಾಣ ನಿರ್ಬಂಧ ವಿಧಿಸಿವೆ.
ಇದನ್ನೂ ಓದಿ:India Covid Report: 7,081 ಹೊಸ ಕೋವಿಡ್ ಕೇಸ್ ಪತ್ತೆ, 264 ಮಂದಿ ಸಾವು