ಲಕ್ನೋ (ಉತ್ತರ ಪ್ರದೇಶ):ಕೊರೊನಾ ಸೋಂಕು ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಿರ್ಣಾಯಕ ಪ್ರಮಾಣದಲ್ಲಿ ತನ್ನ ವೇಗ ಹೆಚ್ಚಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಉತ್ತರ ಪ್ರದೇಶದಲ್ಲಿ 27,357 ಪ್ರಕರಣಗಳು ಪತ್ತೆಯಾಗಿದ್ದು, 120 ಮಂದಿ ಮೃತಪಟ್ಟಿದ್ದಾರೆ. ಲಕ್ನೋದಲ್ಲಿ 5912 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ 36 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಎರಡು ಶವ ಸಂಸ್ಕಾರ ಮೈದಾನದಲ್ಲಿ ರಾತ್ರಿಯಿಡೀ ಶವಗಳನ್ನು ಸುಡಲಾಗುತ್ತಿದ್ದು, ನಿನ್ನೆ ಒಂದೇ ದಿನ 108 ಶವಗಳನ್ನು ಹೂಳಲಾಯಿತು. ನಗರದ ವಿವಿಧ ಸ್ಮಶಾನಗಳಲ್ಲಿ ಕನಿಷ್ಠ 60 ಶವಗಳ ಅಂತ್ಯಕ್ರಿಯೆ ಮಾಡಲಾಯಿತು.
ಉತ್ತರ ಪ್ರದೇಶದ ರಾಜಧಾನಿಯಲ್ಲಿ ಸರ್ಕಾರವು ದಾಖಲಿಸಿದ ಸಾವುಗಳಿಗಿಂತ ಸುಮಾರು ಏಳು ಪಟ್ಟು ಹೆಚ್ಚು ಮೃತದೇಹಗಳನ್ನು ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಅಂತಿಮ ವಿಧಿಗಳಿಗಾಗಿ ಹಾಗೂ ಶವ ಸಂಸ್ಕಾರಕ್ಕಾಗಿ ಸ್ಮಶಾನಗಳಲ್ಲಿ ಉದ್ದನೆಯ ಕ್ಯೂ ಇದೆ. ಕೊರೊನಾದಿಂದ ಸಾವನ್ನಪ್ಪಿದವರ ಅಧಿಕೃತ ದಾಖಲೆಗಳು ನಿಖರವಾಗಿವೆಯೋ ಇಲ್ಲವೋ ಎಂಬುದು ಜನರಲ್ಲಿ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಕೊರೊನಾದ ರೋಗಿಗಳು ಆಸ್ಪತ್ರೆಗಳನ್ನು ತಲುಪುತ್ತಿಲ್ಲವೇ ಎಂಬುವುದೇ ಮತ್ತೊಂದು ಅನುಮಾನವಾಗಿದೆ.
ಲಕ್ನೋ ನಗರ ಆಯುಕ್ತ ಅಜಯ್ ದ್ವಿವೇದಿ ಅವರ ಪ್ರಕಾರ, ನಗರದ ಭೈಸಾ ಕುಂಡ್ ಮತ್ತು ಗುಲಾಲಾ ಘಾಟ್‌ಗಳಲ್ಲಿ ನಿನ್ನೆ ತಡರಾತ್ರಿ 108 ಮೃತದೇಹಗಳ ಅಂತ್ಯಕ್ರಿಯೆ ಮಾಡಲಾಗಿದೆ. ಸ್ಮಶಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಫ್ಲಾಟ್ಗಳು ಮತ್ತು ಖಾಲಿ ಇರುವ ಇತರ ಸ್ಥಳಗಳಲ್ಲಿಯೂ ಶವಾಗಾರಗಳನ್ನು ನಡೆಸಲಾಗುತ್ತಿದೆ ಎಂದು ಸ್ಮಶಾನಕ್ಕೆ ಸಂಬಂಧಿಸಿದವರು ಹೇಳುತ್ತಾರೆ. ದೊಡ್ಡ ಮತ್ತು ಸಣ್ಣ ಸೇರಿದಂತೆ ಲಕ್ನೋದಲ್ಲಿ ಒಟ್ಟು 100 ಸ್ಮಶಾನಗಳಿವೆ ಎಂದು ಸ್ಮಶಾನ ಸಮಿತಿಯ ಇಮಾಮ್ ಅಬ್ದುಲ್ ಮಟಿನ್ ಹೇಳಿದ್ದಾರೆ. ಸಾಮಾನ್ಯವಾಗಿ ಐದರಿಂದ ಆರು ಜನರನ್ನು ಈ ಸ್ಮಶಾನಗಳಲ್ಲಿ ಸಾಮಾನ್ಯ ದಿನಗಳಲ್ಲಿ ಸಮಾಧಿ ಮಾಡಲಾಗುತ್ತಿತ್ತು. ಪ್ರಸ್ತುತ, ಪ್ರತಿದಿನ ಸರಾಸರಿ 60ರಿಂದ 70 ಜನರನ್ನು ಸಮಾಧಿ ಮಾಡಲಾಗುತ್ತಿದೆ.
ಹೆಚ್ಚಿದ ಮೃತದೇಹಗಳು, ಅಗೆಯಲು ಹೆಚ್ಚಿನ ದರಗಳು: