ರಾಯ್‌ಪುರ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ 500 ರೂ.ಗಳ ದಂಡ ವಿಧಿಸಲು ಛತ್ತೀಸಗಢ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮಾಸ್ಕ್ ಧರಿಸದಿದ್ರೆ ಈ ರಾಜ್ಯದಲ್ಲಿ 500 ರೂ. ದಂಡ
ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಠಿಣವಾಗಿ ಕೊರೊನಾ ವಿರುದ್ದ ಹೋರಾಟ ಮಾಡಲು ಜನರಲ್ಲಿ ಸರ್ಕಾರ ಮನವಿ ಕೂಡ ಮಾಡಿಕೊಂಡಿದೆ.
ಮಾಸ್ಕ್ ಧರಿಸದಿದ್ರೆ ಈ ರಾಜ್ಯದಲ್ಲಿ 500 ರೂ. ದಂಡ
ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ಅಡಿಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಈ ಆದೇಶದ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಮಾಸ್ಕ್ ಅಥವಾ ಮುಖದ ಹೊದಿಕೆಯನ್ನು ಧರಿಸದಿರುವುದು ಕಂಡುಬಂದರೆ 500 ರೂ. ದಂಡ ವಿಧಿಸಲಾಗುವುದು. ಈ ಮೊದಲು ಉಲ್ಲಂಘನೆಗಾಗಿ 100 ರೂ. ದಂಡ ವಿಧಿಸಲಾಗುತ್ತಿತ್ತು.
ಮಾಸ್ಕ್ ಹೊರತಾಗಿ ಸಾಮಾಜಿಕ ಅಂತರ ಮತ್ತು ಕೈ ತೊಳೆಯುವುದು ಸೇರಿದಂತೆ ವೈರಸ್ ತಡೆಗಟ್ಟುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಜ್ಯ ಸರ್ಕಾರವು ಜನರಿಗೆ ಮನವಿ ಮಾಡಿದೆ.