ಕರ್ನಾಟಕ

karnataka

ETV Bharat / bharat

ಭಾರತದಲ್ಲಿಂದು 196 ಹೊಸ ಕೋವಿಡ್​ ಕೇಸ್​ ಪತ್ತೆ.. ಒಮಿಕ್ರಾನ್ ಬಿಎಫ್‌.7 ಕುರಿತು ಎಚ್ಚರ - ಒಮಿಕ್ರಾನ್ ಸಬ್‌ವೇರಿಯಂಟ್‌ ಬಿಎಫ್‌

ಭಾರತದಲ್ಲಿಂದು 196 ಹೊಸ ಕೊರೊನಾ ವೈರಸ್ ಸೋಂಕಿತರು ಪತ್ತೆ- ಸಕ್ರಿಯ ಪ್ರಕರಣಗಳ ಸಂಖ್ಯೆ 3,428 ಕ್ಕೆ ಏರಿಕೆ - ಚೀನಾದಿಂದ ಬಂದ ಯುವಕನಿಗೆ ಕೋವಿಡ್ ಪಾಸಿಟಿವ್ - ಒಮಿಕ್ರಾನ್ ಸಬ್‌ವೇರಿಯಂಟ್‌ ಬಿಎಫ್‌. 7 ಆತಂಕ

ಕೋವಿಡ್
covid

By

Published : Dec 26, 2022, 11:21 AM IST

ನವದೆಹಲಿ: ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ದೇಶಾದ್ಯಂತ 196 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ದೇಶದಲ್ಲಿ ಕೊರೊನಾ ಸೋಂಕಿತರ​ ಸಂಖ್ಯೆ 4.46 ಕೋಟಿಗೆ (4,46,77,302) ಏರಿಕೆಯಾಗಿದೆ. ಪ್ರಸ್ತುತ ಭಾರತದಲ್ಲಿ 3,428 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.

ಸದ್ಯಕ್ಕೆ ಕೋವಿಡ್​ ಸೋಂಕಿನ ದೈನಂದಿನ ದರವು 0.56 ಪ್ರತಿಶತದಷ್ಟಿದ್ದು, ವಾರದ ಪಾಸಿಟಿವಿಟಿ ದರ 0.16 ಇದೆ. ಕಳೆದ 24 ಗಂಟೆಗಳಲ್ಲಿ 35,173 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚೇತರಿಕೆ ಪ್ರಮಾಣ ಶೇ 98.80 ಇದ್ದು, ಇದುವರೆಗೆ 4,41,43,179 ಮಂದಿ ಮೃತಪಟ್ಟಿದ್ದಾರೆ. ಸಾವಿನ ಪ್ರಮಾಣ ಶೇಕಡಾ 1.19 ರಷ್ಟಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೆ 220.05 ಕೋಟಿ ಕೋವಿಡ್ ಡೊಸ್​ ನೀಡಲಾಗಿದೆ.

ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ದೇಶದಲ್ಲಿ ಬಿಎಫ್‌ 7 ಕಾಣಿಸಿಕೊಳ್ಳಲಿದೆ: ಆರೋಗ್ಯ ಸಚಿವ ಸುಧಾಕರ್‌

ಚೀನಾದಿಂದ ಬಂದ ಯುವಕನಿಗೆ ಕೋವಿಡ್ ಪಾಸಿಟಿವ್:ಇತ್ತೀಚೆಗೆ ಚೀನಾದಿಂದ ಹಿಂತಿರುಗಿದ ಆಗ್ರಾದ ವ್ಯಕ್ತಿಯಲ್ಲಿ ಕೋವಿಡ್​-19 ಪಾಸಿಟಿವ್​​ ಕಾಣಿಸಿಕೊಂಡ ಬೆನ್ನಲ್ಲೇ ಇದೀಗ ಉನ್ನಾವೊ ಜಿಲ್ಲೆಯಲ್ಲಿ ಎರಡನೇ ಕೋವಿಡ್ ಪ್ರಕರಣ ಪತ್ತೆಯಾಗಿದೆ. ದುಬೈಗೆ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಕೋವಿಡ್​ ಪರೀಕ್ಷೆಗೆ ಒಳಪಟ್ಟಿದ್ದು, ಪಾಸಿಟಿವ್ ದೃಢಪಟ್ಟಿದೆ.

ಕೋವಿಡ್​ 19 ಪಾಸಿಟಿವ್​ ವರದಿ ಬಂದ ಯುವಕನ ಮನೆಗೆ ಅರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಯುವಕನ ಕುಟುಂಬ ಸದಸ್ಯರು ಸೇರಿದಂತೆ 20 ಜನರ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದೆ. ಕೋವಿಡ್​ ಮಾರ್ಗಸೂಚಿಯಂತೆ ಸ್ಥಳೀಯ ಆಡಳಿತ ಯುವಕನನ್ನು ಐಸೋಲೇಷನ್​ನಲ್ಲಿ ಇರಿಸಿದೆ. ಜೊತೆಗೆ ಯುವಕನಿಂದ ಸಂಗ್ರಹಿಸಿದ ಮಾದರಿಯನ್ನು ಜಿನೋಮ್​ ಸೀಕ್ವೆನ್ಸಿಂಗ್​ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ:ಚೀನಾದಿಂದ ಬಂದ ಆಗ್ರಾದ ನಂತರ ಇದೀಗ ಉನ್ನಾವೋದ ಯುವಕನಿಗೆ ಕೋವಿಡ್ ಪಾಸಿಟಿವ್

ಕೊರೊನಾ ವೈರಸ್​ನ ಹೊಸ ತಳಿ ಒಮಿಕ್ರಾನ್ (ಸಬ್‌ವೇರಿಯಂಟ್‌) ಬಿಎಫ್‌.7 ಆತಂಕ: ಚೀನಾ, ಅಮೆರಿಕ, ಜಪಾನ್​ ಸೇರಿದಂತೆ ಅನೇಕ ದೇಶಗಳಲ್ಲಿ ಕೋವಿಡ್​ 19 ವೈರಸ್​ ವ್ಯಾಪಕವಾಗಿ ಹರಡುತ್ತಿದ್ದು, ದೇಶದಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ವಿದೇಶದಿಂದ ಬರುವವರಿಗೆ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದ್ದು, ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಆರ್​ಟಿ-ಪಿಸಿಆರ್​ ವರದಿಗೆ ಅನುಗುಣವಾಗಿ ಪಾಸಿಟಿವ್​ ಬಂದರೆ ಅಂತಹವರನ್ನು ಕ್ವಾರಂಟೈನ್​ ಮಾಡಲಾಗುತ್ತಿದೆ.

ದೇಶದಲ್ಲಿ ಕೊರೊನಾ ಭೀತಿ ಸೃಷ್ಟಿಯಾಗುತ್ತಿರುವ ಕಾರಣ ಅಗತ್ಯ ವೈದ್ಯಕೀಯ ಸಿದ್ಧತೆಗೆ ಸಹ ಸೂಚಿಸಲಾಗಿದೆ. ಈ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋವಿಡ್​ ನಿರ್ವಹಣೆಗಾಗಿ ಆಮ್ಲಜನಕದ ದಾಸ್ತಾನು ಮತ್ತು ಪೂರೈಕೆಯನ್ನು ಪರಿಶೀಲಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಕೊರೊನಾ ರೂಪಾಂತರ ತಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿ ಬೋಸ್ಟರ್ ಡೋಸ್ ಹೆಚ್ಚಿಸುವ ಕುರಿತು ತಿಳಿಸಿದೆ.

ಇದನ್ನೂ ಓದಿ:ಒಮಿಕ್ರಾನ್ ಬಿಎಫ್.7 : ಜಾಗ್ರತೆ ವಹಿಸಿ.. ಮುನ್ನೆಚ್ಚರಿಕೆ ಮರೆಯದಿರಿ

ABOUT THE AUTHOR

...view details