ಕರ್ನಾಟಕ

karnataka

ETV Bharat / bharat

ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಂತರದಲ್ಲಿ 9 ರಿಂದ 6 ತಿಂಗಳಿಗೆ ಇಳಿಕೆ.. ಕೇಂದ್ರದ ನಿರ್ಧಾರ - ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಂತರ

ಕೋವಿಡ್​ನ ಎರಡನೇ ಡೋಸ್​ ಪಡೆದುಕೊಂಡ ಬಳಿಕ ಬೂಸ್ಟರ್ ಡೋಸ್ ತೆಗೆದುಕೊಳ್ಳುವ ಅವಧಿಯಲ್ಲಿ ಇದೀಗ ಗಣನೀಯವಾದ ಇಳಿಕೆ ಮಾಡಲಾಗಿದೆ.

Covid-19 booster dose gap reduced
Covid-19 booster dose gap reduced

By

Published : Jul 6, 2022, 7:31 PM IST

ನವದೆಹಲಿ:ಕೋವಿಡ್ ಬೂಸ್ಟರ್ ಡೋಸ್​ ಪಡೆದುಕೊಳ್ಳುವ ಅಂತರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಇಳಿಕೆ ಮಾಡಿದೆ. ಕೋವಿಡ್​ ವ್ಯಾಕ್ಸಿನೇಷನ್​​​ ಪಡೆದುಕೊಂಡ 9 ತಿಂಗಳ ಬದಲಾಗಿ ಆರು ತಿಂಗಳಿಗೆ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಧಿಸೂಚನೆ ಹೊರಡಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಹೊಸ ಮಾರ್ಗಸೂಚಿ ಪ್ರಕಾರ 9 ತಿಂಗಳು ಅಥವಾ 39 ವಾರಗಳ ಬದಲಾಗಿ 6 ತಿಂಗಳು ಅಥವಾ 26 ವಾರಗಳಲ್ಲಿ ಇದೀಗ 18-59 ವಯಸ್ಸಿನ ಫಲಾನುಭವಿಗಳು ಕೋವಿಡ್​ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದಾಗಿದೆ ಎಂದಿದೆ.

ಇದನ್ನೂ ಓದಿರಿ:ಪಂಚಾಯ್ತಿ ಉಪಚುನಾವಣೆ: 130 ಸೀಟುಗಳ ಪೈಕಿ 102ರಲ್ಲಿ ಬಿಜೆಪಿ ಅವಿರೋಧ ಆಯ್ಕೆ

ಕೋವಿಡ್​​ನ ಎರಡನೇ ಡೋಸ್​ ಪಡೆದ ಆರು ತಿಂಗಳ ಬಳಿಕ ಫಲಾನುಭವಿಗಳು ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳಬಹುದಾಗಿದೆ. ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಈ ಸೋಂಕು ಲಭ್ಯವಿರುತ್ತದೆ ಎಂದು ತಿಳಿಸಿದೆ. ಜೂನ್ ತಿಂಗಳಲ್ಲಿ ನಡೆದ ಸ್ಥಾಯಿ ತಾಂತ್ರಿಕ ಉಪಸಮಿತಿ ಸಭೆಯಲ್ಲಿ ಬೂಸ್ಟರ್ ಡೋಸ್ ನೀಡುವ ಅಂತರದಲ್ಲಿ ಇಳಿಕೆ ಮಾಡಲು ಶಿಫಾರಸು ಮಾಡಿತ್ತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.


ABOUT THE AUTHOR

...view details