ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಹೆಚ್ಚು ಹಾನಿಗೊಳಗಾದ ರಾಜ್ಯಗಳಲ್ಲಿ ಒಂದಾದ ಮಹಾರಾಷ್ಟ್ರ ಸರ್ಕಾರದ ಮನವಿಯ ನಂತರ ರೈಲ್ವೆ ಇಲಾಖೆ ಶುಕ್ರವಾರ ಕ್ರೈಯೋಜೆನಿಕ್ ಟ್ಯಾಂಕರ್‌ಗಳಲ್ಲಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ನೀತಿಯನ್ನು ರೂಪಿಸಿತು.
ಶುಕ್ರವಾರ ತಡರಾತ್ರಿ ಸಾರ್ವಜನಿಕವಾಗಿ ಪ್ರಕಟವಾದ ಈ ನೀತಿಯಲ್ಲಿ ಕ್ರೈಯೊಜೆನಿಕ್ ಟ್ಯಾಂಕರ್‌ಗಳನ್ನು ಪಾವತಿಸಿದ ರೋಲ್ ಆನ್ - ರೋಲ್ (ರೋ-ರೋ) ಸೇವೆಯಂತೆ ರಾಜ್ಯಗಳ ವಿವಿಧ ಸ್ಥಳಗಳಿಗೆ ಸಾಗಿಸಲಾಗುವುದು ಎಂದು ಹೇಳಲಾಗಿದೆ.
ಕ್ರಯೋಜೆನಿಕ್ ಕಂಟೇನರ್‌ಗಳಲ್ಲಿ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ಮಹಾರಾಷ್ಟ್ರದ ಆರೋಗ್ಯ ಕಾರ್ಯದರ್ಶಿ ಮನವಿ ಮಾಡಿದ್ದರು. ಈ ವಿಷಯವನ್ನು ಪರಿಶೀಲಿಸಲಾಗಿದೆ. ಕ್ರೈಯೊಜೆನಿಕ್ ಕಂಟೇನರ್‌ಗಳಲ್ಲಿ ದ್ರವ ವೈದ್ಯಕೀಯ ಆಮ್ಲಜನಕವನ್ನು ಸಾಗಿಸಲು ಪ್ರಾಧಿಕಾರವು ಅನುಮೋದನೆ ನೀಡಿದೆ ಎಂದು ರೈಲ್ವೆ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.