ನವದೆಹಲಿ :ಕೊರೊನಾ ಎರಡನೇ ಅಲೆಯಿಂದ ಕಂಗೆಟ್ಟಿರುವ ಭಾರತದ ಸಹಾಯಕ್ಕೆ ಹಾಂಗ್ ಕಾಂಗ್ ಮುಂದಾಗಿದೆ. ಸುಮಾರು 300 ಆಮ್ಲಜನಕ ಸಾಂದ್ರಕಗಳ ಜೊತೆಗೆ ಇತರ ವೈದ್ಯಕೀಯ ಉಪಕರಣಗಳ ಸರಕನ್ನು ಕಳುಹಿಸಿದೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, "ಹಾಂಗ್ಕಾಂಗ್ನಿಂದ ದೆಹಲಿಗೆ ಇಂಡಿಗೊ ಏರ್ಲೈನ್ಸ್ ವಿಮಾನದ ಮೂಲಕ 300 ಆಕ್ಸಿಜನ್ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಉಪಕರಣಗಳು ಆಗಮಿಸಿವೆ. ನಾವು ಒಗ್ಗಟ್ಟಾಗಿ ಹೋರಾಡೋಣ" ಎಂದು ಪುರಿ ಟ್ವೀಟ್ ಮಾಡಿದ್ದಾರೆ.