ಕರ್ನಾಟಕ

karnataka

ETV Bharat / bharat

ಕೋವ್ಯಾಕ್ಸಿನ್​ನಲ್ಲಿ ವೈಜ್ಞಾನಿಕ ಮಾನದಂಡ ಕಾಯ್ದುಕೊಳ್ಳಲು ಬದ್ಧ: ಭಾರತ್ ಬಯೋಟೆಕ್ ಆಶ್ವಾಸನೆ - ವೈಜ್ಞಾನಿಕ ಮಾನದಂಡ ಹಾಗೂ ಬದ್ಧತೆ ಕಾಯ್ದುಕೊಳ್ಳಲು ಸಿದ್ಧ

ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗದ ಸುರಕ್ಷತೆಯ ಡೇಟಾವನ್ನು ವಿಶ್ಲೇಷಿಸಲಾಗಿದೆ. ಸಮಗ್ರತೆಗೆ ರಾಜಿಯಾಗದೇ ಬದ್ಧತೆಯನ್ನು ಎತ್ತಿಹಿಡಿಯುತ್ತೇವೆ. ಕಂಪನಿಯು ಮೂರನೇ ಹಂತದ ಪ್ರಯೋಗಗಳ ಡೇಟಾವನ್ನು ಶೀಘ್ರದಲ್ಲೇ ಸಾರ್ವಜನಿಕರ ಮುಂದಿಡಲಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

ಭಾರತ್ ಬಯೋಟೆಕ್
ಭಾರತ್ ಬಯೋಟೆಕ್

By

Published : Jun 12, 2021, 11:03 PM IST

Updated : Jun 12, 2021, 11:11 PM IST

ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೋವ್ಯಾಕ್ಸಿನ್‌ನ ವೈಜ್ಞಾನಿಕ ಮಾನದಂಡಗಳು ಪಾರದರ್ಶಕವಾಗಿವೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ. ಕಂಪನಿಯ ಈವರೆಗೆ ಲಸಿಕೆ ಸುರಕ್ಷತೆ ಮತ್ತು ಪರಿಣಾಮಕಾರಿ ಬಗ್ಗೆ ಒಂಬತ್ತು ಸಂಶೋಧನಾ ಅಧ್ಯಯನಗಳನ್ನು ಪ್ರಕಟಿಸಿದೆ.

ಅಕಾಡೆಮಿಕ್ ಜರ್ನಲ್‌ಗಳು, ಪೀರ್ ವಿಮರ್ಶಕರು, ಎನ್‌ಐವಿ, ಐಸಿಎಂಆರ್, ಭಾರತ್ ಬಯೋಟೆಕ್​​ ಸಂಸ್ಥೆಯ ಸಂಶೋಧಕರು, ವಿಜ್ಞಾನಿಗಳು ಮಾಡಿರುವ 9 ಅಧ್ಯಯನಗಳ ಡೇಟಾ ಪ್ರಕಟಿಸಲಾಗಿದೆ ಎಂದು ಭಾರತ್‌ ಬಯೋಟೆಕ್ ಸಹ ಸಂಸ್ಥಾಪಕಿ ಮತ್ತು ಜಂಟಿ ಎಂಡಿ ಸುಚಿತ್ರಾ ಎಲ್ಲಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಒಂದು ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗದ ಸಂಪೂರ್ಣ ದತ್ತಾಂಶ ಮತ್ತು ಕೋವ್ಯಾಕ್ಸಿನ್​ನ ಮೂರನೇ ಹಂತದ ಪ್ರಯೋಗಗಳ ಭಾಗಶಃ ದತ್ತಾಂಶವನ್ನು ಭಾರತದ ನಿಯಂತ್ರಕರು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಪೀರ್ ವಿಮರ್ಶೆಗೆ ಸಮಯೋಚಿತ ವಿಧಾನದಲ್ಲಿ, ಕಂಪನಿಯು ಈಗಾಗಲೇ ಒಂದು ವರ್ಷದಲ್ಲಿ ಜಾಗತಿಕವಾಗಿ ಹೆಸರಾಂತ ಐದು ಮುಂಚೂಣಿಯ ವಿಮರ್ಶಕ ಜರ್ನಲ್‌ಗಳಲ್ಲಿ ಲಸಿಕೆ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಒಂಬತ್ತು ಸಂಶೋಧನಾ ಅಧ್ಯಯನಗಳನ್ನು ಪ್ರಕಟಿಸಿದೆ.

ಕೋವ್ಯಾಕ್ಸಿನ್, ಸಂಪೂರ್ಣ - ವೈರಿಯನ್ ನಿಷ್ಕ್ರಿಯಗೊಂಡ ಕೊರೊನಾ ಲಸಿಕೆ. ಭಾರತದಲ್ಲಿ ಮಾನವ ಕ್ಲಿನಿಕಲ್ ಪ್ರಯೋಗಗಳಲ್ಲಿ ಯಾವುದೇ ಅಡ್ಡಪರಿಣಾಮ ಎದುರಿಸದ, ಉದಯೋನ್ಮುಖ ರೂಪಾಂತರಗಳಲ್ಲಿ ಯಾವುದೇ ಡೇಟಾ ಹೊಂದಿರುವ ಏಕೈಕ ಉತ್ಪನ್ನವಿದು ಎಂದು ಭಾರತ್ ಬಯೋಟೆಕ್ ಹೇಳಿದೆ. ಭಾರತ್ ಬಯೋಟೆಕ್ ಮೂರು ಪೂರ್ವಭಾವಿ ಅಧ್ಯಯನಗಳನ್ನು ಪೂರ್ಣಗೊಳಿಸಿದೆ. ಇವುಗಳನ್ನು ಪೀರ್-ವಿಮರ್ಶಕ ಜರ್ನಲ್ ಸೆಲ್‌ಪ್ರೆಸ್‌ನಲ್ಲಿ ಪ್ರಕಟಿಸಲಾಗಿದೆ.

ಪ್ರಸ್ತುತ, ಕೊವ್ಯಾಕ್ಸಿನ್‌ನ ಮೂರನೇ ಹಂತದ ಪ್ರಯೋಗದ ಸುರಕ್ಷತೆಯ ಡೇಟಾವನ್ನು ವಿಶ್ಲೇಷಿಸಲಾಗಿದೆ. ಸಮಗ್ರತೆಗೆ ರಾಜಿಯಾಗದೆ ಬದ್ಧತೆಯನ್ನು ಎತ್ತಿಹಿಡಿಯುತ್ತೇವೆ. ಕಂಪನಿಯು ಮೂರನೇ ಹಂತದ ಪ್ರಯೋಗಗಳ ಡೇಟಾವನ್ನು ಶೀಘ್ರದಲ್ಲೇ ಸಾರ್ವಜನಿಕರ ಮುಂದಿಡಲಿದೆ ಎಂದು ಭಾರತ್ ಬಯೋಟೆಕ್ ಹೇಳಿದೆ.

Last Updated : Jun 12, 2021, 11:11 PM IST

ABOUT THE AUTHOR

...view details