ಹೈದರಾಬಾದ್(ತೆಲಂಗಾಣ):ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ಈಗ ವಯಸ್ಕರು ಮತ್ತು ಮಕ್ಕಳಿಗೆ ನೀಡಬಹುದಾದ ಸಾರ್ವತ್ರಿಕ ಲಸಿಕೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಕೊರೊನಾ ವೈರಸ್ ಸೋಂಕು ನಿರೋಧಕ ಕೋವ್ಯಾಕ್ಸಿನ್ ಲಸಿಕೆಗೆ ಇದೀಗ ಸಾರ್ವತ್ರಿಕ ಲಸಿಕೆ ಎಂಬ ಪಟ್ಟ ಲಭ್ಯವಾಗಿದೆ. ಈ ಲಸಿಕೆಯನ್ನು ಇನ್ಮು ವಯಸ್ಕರು ಹಾಗೂ ಮಕ್ಕಳು ಸೇರಿದಂತೆ ಎಲ್ಲರಿಗೂ ನೀಡಬಹುದಾಗಿದೆ. 'ಜಾಗತಿಕ ಲಸಿಕೆ ಅಭಿವೃದ್ಧಿಪಡಿಸಬೇಕು ಎಂಬ ಗುರಿ ಹೊಂದಿದ್ದು, ಇದೀಗ ಈ ಗುರಿಯನ್ನು ನಾವು ತಲುಪಿದ್ದೇವೆ' ಎಂದು ಭಾರತ್ ಬಯೋಟೆಕ್ ಸಂತಸ ವ್ಯಕ್ತಪಡಿಸಿದೆ.