ಕರ್ನಾಟಕ

karnataka

ETV Bharat / bharat

ಭಾರತ, ಬ್ರಿಟನ್​​ನಲ್ಲಿ ಪತ್ತೆಯಾಗಿರುವ ಕೋವಿಡ್​ ವಿರುದ್ಧ ಕೋವ್ಯಾಕ್ಸಿನ್​ ಪರಿಣಾಮಕಾರಿ

ಕೋವ್ಯಾಕ್ಸಿನ್​ ಲಸಿಕೆ ಭಾರತ ಹಾಗೂ ಬ್ರಿಟನ್​ನಲ್ಲಿ ಪತ್ತೆಯಾಗಿರುವ ಕೋವಿಡ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಭಾರತ್​ ಬಯೋಟೆಕ್​ ಹೇಳಿಕೊಂಡಿದೆ.

COVAXIN
COVAXIN

By

Published : May 16, 2021, 5:29 PM IST

ನವದೆಹಲಿ:ಭಾರತ್​ ಬಯೋಟೆಕ್​ನಿಂದ ಅಭಿವೃದ್ಧಿಗೊಂಡಿರುವ ಕೋವ್ಯಾಕ್ಸಿನ್​​ ಲಸಿಕೆ ಭಾರತ ಹಾಗೂ ಬ್ರಿಟನ್​​ನಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್ (ಮೊದಲ ಬಾರಿಗೆ ಪತ್ತೆ)​ ವಿರುದ್ಧ ಬಹಳಷ್ಟು ಪರಿಣಾಮಕಾರಿಯಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ನ್ಯಾಷನಲ್​​ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ICMR) ಸಹಯೋಗದಲ್ಲಿ ನಡೆದ ಅಧ್ಯಯನದಿಂದ ಈ ಮಾಹಿತಿ ತಿಳಿದು ಬಂದಿರುವುದಾಗಿ ಲಸಿಕೆ ಉತ್ಪಾದನಾ ಸಂಸ್ಥೆ ಭಾರತ್ ಬಯೋಟೆಕ್​ ಮಾಹಿತಿ ಹಂಚಿಕೊಂಡಿದೆ.

ಭಾರತದಲ್ಲಿ ಈಗಾಗಲೇ ಪತ್ತೆಯಾಗಿರುವ ಬಿ.1.617 ಹಾಗೂ ಬ್ರಿಟನ್​​ನ ಬಿ.1.1.7 ಕೋವಿಡ್ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್​​ ಪರಿಣಾಮಕಾರಿಯಾಗಿ ಹೋರಾಟ ನಡೆಸಲಿದೆ ಎಂದು ಅದು ಭಾನುವಾರ ತಿಳಿಸಿದೆ. ಸಂಶೋಧನಾ ಮಾಹಿತಿಯ ಪ್ರಕಾರ ಕೋವ್ಯಾಕ್ಸಿನ್​​ ಕೊರೊನಾ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದ್ದು, ಬಿ.617 ಮಾದರಿ ತೊಡೆದು ಹಾಕುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಬ್ರಿಟನ್​​ನ ಬಿ.1.1.7 ವಿರುದ್ಧ ಕೂಡ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: 'ಮೋದಿಜೀ ನಮ್ಮನ್ನು ಅರೆಸ್ಟ್ ಮಾಡಿ', ಪ್ರಿಯಾಂಕಾ, ರಾಹುಲ್​ ಗಾಂಧಿ ಟ್ವೀಟ್​

ಭಾರತದಲ್ಲಿ ಕೊರೊನಾ ವೈರಸ್​ ವಿರುದ್ಧ ನೀಡಲಾಗುತ್ತಿರುವ ಲಸಿಕೆಗಳ ಪೈಕಿ ಕೋವ್ಯಾಕ್ಸಿನ್ ಕೂಡ ಒಂದಾಗಿದ್ದು, ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 18,22,20,164 ಡೋಸ್​ ಲಸಿಕೆ ನೀಡಲಾಗಿದೆ.

ABOUT THE AUTHOR

...view details