ಕರ್ನಾಟಕ

karnataka

ETV Bharat / bharat

ರೂಪಾಂತರಿ ಕೊರೊನಾಗೂ ಕೋವ್ಯಾಕ್ಸಿನ್​​ ಮದ್ದು: ಭಾರತ್​ ಬಯೋಟೆಕ್​​ - ರೂಪಾಂತರಿ ಕೊರೊನಾ

ರೂಪಾಂತರಿ ಕೊರೊನಾ ವೈರಸ್​​​​ ಅನ್ನು ಕೋವ್ಯಾಕ್ಸಿನ್​​​ ಲಸಿಕೆಯಿಂದ ಗುಣಪಡಿಸಬಹುದು ಎಂದು ಕೋವ್ಯಾಕ್ಸಿನ್​ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಭಾರತ್​ ಬಯೋಟೆಕ್​ ಹೇಳಿದೆ.

mutated coronavirus
ರೂಪಾಂತರಿ ಕೊರೊನಾ

By

Published : Dec 29, 2020, 11:14 PM IST

ಹೈದರಾಬಾದ್​:ಬ್ರಿಟನ್​​ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ವೈರಸ್​​​​ ಅನ್ನು ಕೋವ್ಯಾಕ್ಸಿನ್​​​ ಲಸಿಕೆಯಿಂದ ಗುಣಪಡಿಸಬಹುದು ಎಂದು ಕೋವ್ಯಾಕ್ಸಿನ್​ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆ ಭಾರತ್​ ಬಯೋಟೆಕ್​ ಹೇಳಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಈ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಸದ್ಯ 3ನೇ ಹಂತದ ಲಸಿಕೆ ಪ್ರಯೋಗ ಮಾಡಲಾಗಿದೆ. ಈ ವೇಳೆ 20ಸಾವಿರ ಸ್ವಯಂ ಸೇವಕರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಬಳಸಲು ತುರ್ತು ಪರವಾನಗಿ ಅನುಮೋದನೆ ಕೋರಿ ಸಂಸ್ಥೆ ಔಷಧ ನಿಯಂತ್ರಕ ಅಧಿಕಾರಿಗಳನ್ನು ಸಂಪರ್ಕಿಸಿದೆ.

ಕೊರೊನಾ ವೈರಸ್​ ಸಾಕಷ್ಟು ರೂಪಾಂತರ ಹೊಂದುವ ನಿರೀಕ್ಷೆಯಿದ್ದು, ನಾವು ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಅದರ ವಿರುದ್ಧವೂ ಹೋರಾಡಲಿದೆ. ಈ ಬಗ್ಗೆ ನಮಗೆ ಖಾತ್ರಿಯಿದೆ ಎಂದು ಸಂಸ್ಥೆ ಹೇಳಿದೆ. ಯುಕೆಯಿಂದ ಭಾರತಕ್ಕೆ ಮರಳಿದ ಆರು ಜನರಿಗೆ ರೂಪಾಂತರಿತ ವೈರಸ್​ ಕಂಡು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಡೆನ್ಮಾರ್ಕ್, ನೆದರ್​​ಲೆಂಡ್​​, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್, ಫ್ರಾನ್ಸ್, ಸ್ಪೇನ್, ಸ್ವಿಟ್ಜರ್​ಲೆಂಡ್​, ಜರ್ಮನಿ, ಕೆನಡಾ, ಜಪಾನ್, ಲೆಬನಾನ್ ಮತ್ತು ಸಿಂಗಾಪುರದಲ್ಲಿ ರೂಪಾಂತರಿ ಕೊರೊನಾ ವೈರಸ್​ ಕುರಿತು ಈಗಾಗಲೇ ವರದಿಯಾಗಿದೆ.

ABOUT THE AUTHOR

...view details