ಮಥುರಾ (ಉತ್ತರ ಪ್ರದೇಶ):ಶ್ರೀ ಕೃಷ್ಣ ಜನ್ಮಭೂಮಿಯ ಮಾಲೀಕತ್ವ ಮತ್ತು ದೇವಾಲಯದ ಬಳಿ ಇರುವ ಮಸೀದಿ ತೆರವುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಮಥುರಾದ ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.
ಶ್ರೀ ಕೃಷ್ಣ ಜನ್ಮಭೂಮಿಗೆ ಸೇರಿದ 13.37 ಎಕರೆ ಭೂಮಿಯನ್ನು ಮರುಪಡೆಯಲು ಹಾಗೂ ಕೃಷ್ಣ ಹುಟ್ಟಿದ ಈ ಪ್ರದೇಶದಲ್ಲಿರುವ ಕತ್ರಿ ಕೇಶವ್ ದೇವ್ ದೇವಸ್ಥಾನದ ಆವರಣದಲ್ಲಿ 17ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕು ಎಂದು ಕೋರಿ ರಂಜನಾ ಅಗ್ನಿಹೋತ್ರಿ ಸೇರಿದಂತೆ ಐವರು ವಕೀಲರು 2019ರ ಸೆಪ್ಟೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು.