ಕರ್ನಾಟಕ

karnataka

ETV Bharat / bharat

ಗಣರಾಜ್ಯ ದಿನದಂದು ಹಿಂಸಾಚಾರ ಪ್ರಕರಣ : ನಟ ದೀಪ್ ಸಿಧು ವಿರುದ್ಧ ಚಾರ್ಜ್​ಶೀಟ್​ ಪರಿಗಣಿಸಿದ ಕೋರ್ಟ್​​

ಹಿಂಸಾಚಾರ ನಡೆದ ಸುಮಾರು ನಾಲ್ಕು ತಿಂಗಳ ನಂತರ, ಮೇ 17ರಂದು ನಟ ಸಿಧು ಸೇರಿ ಇತರ 15 ಜನರ ವಿರುದ್ಧ 3,224 ಪುಟಗಳಷ್ಟು ಉದ್ದದ ಮೊದಲ ಚಾರ್ಜ್‌ಶೀಟ್‌ನ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಅಪರಾಧ ಶಾಖೆ ಸಲ್ಲಿಸಿತ್ತು..

sidhu
sidhu

By

Published : Jun 19, 2021, 5:08 PM IST

ನವದೆಹಲಿ: ಗಣರಾಜ್ಯೋತ್ಸವದ ಹಿಂಸಾಚಾರ ಪ್ರಕರಣದಲ್ಲಿ ನಟ- ಬಿಜೆಪಿ ಕಾರ್ಯಕರ್ತ ದೀಪ್ ಸಿಧು ಮತ್ತು ಇತರರ ವಿರುದ್ಧ ಸಲ್ಲಿಸಲಾದ ಪೂರಕ ಚಾರ್ಜ್‌ಶೀಟ್‌ ಅನ್ನು ದೆಹಲಿ ನ್ಯಾಯಾಲಯ ಶನಿವಾರ ಪರಿಗಣನೆಗೆ ತೆಗೆದುಕೊಂಡಿದೆ. ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಗರ್ ಜೂನ್ 29 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎಲ್ಲ ಆರೋಪಿಗಳು ವಿಚಾರಣೆಗೆ ಹಾಜರಾಗಬೇಕೆಂದು ಸಮನ್ಸ್​ ನೀಡಿದ್ದಾರೆ. ನ್ಯಾಯಾಂಗ ಬಂಧನದಲ್ಲಿದ್ದ ಮಣಿಂದರ್ ಸಿಂಗ್ ಮತ್ತು ಖೇಂಪ್ರೀತ್ ಸಿಂಗ್ ವಿರುದ್ಧ ಪ್ರೊಡಕ್ಷನ್​ ವಾರಂಟ್ ಹೊರಡಿಸಲಾಗಿದೆ.

ಜನವರಿ 26ರಂದು ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾನಿರತ ರೈತರು ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿ ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದರು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡರು. ಪ್ರಕರಣ ಸಂಬಂಧ ಪೊಲೀಸರು ಜೂನ್‌ 17ರಂದು ಪೂರಕ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅಂತಿಮ ವರದಿಯಲ್ಲಿ ಗಲಭೆಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರತ್ಯಕ್ಷದರ್ಶಿಗಳು ಅಥವಾ ಯಾರಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲಾಗಿತ್ತೋ ಅವರ ಹೆಸರುಗಳನ್ನು ತನಿಖಾಧಿಕಾರಿ ನಮೂದಿಸಿ ಗಮನ ಸೆಳೆದಿದ್ದಾರೆ.

ಹಿಂಸಾಚಾರ ನಡೆದ ಸುಮಾರು ನಾಲ್ಕು ತಿಂಗಳ ನಂತರ, ಮೇ 17ರಂದು ನಟ ಸಿಧು ಸೇರಿ ಇತರ 15 ಜನರ ವಿರುದ್ಧ 3,224 ಪುಟಗಳಷ್ಟು ಉದ್ದದ ಮೊದಲ ಚಾರ್ಜ್‌ಶೀಟ್‌ನ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸ್ ಅಪರಾಧ ಶಾಖೆ ಸಲ್ಲಿಸಿತ್ತು. ದೆಹಲಿ ಹಿಂಸಾಚಾರದ ಪ್ರಮುಖ ಸಂಚುಕೋರನೆಂದು ಆರೋಪಿಸಲಾಗಿರುವ ಸಿಧುನನ್ನು ಫೆಬ್ರವರಿ 9 ರಂದು ಬಂಧಿಸಲಾಯಿತು. ಕೆಂಪುಕೋಟೆಯಲ್ಲಿ ನಡೆದ ಅಹಿತಕರ ಘಟನೆಗೆ ಉತ್ತೇಜನ ನೀಡಿದ್ದಾರೆ ಎಂದು ಪೊಲೀಸರು ಸಿಧು ವಿರುದ್ಧ ಆರೋಪಿಸಿದ್ದರು.

ABOUT THE AUTHOR

...view details