ಕರ್ನಾಟಕ

karnataka

ETV Bharat / bharat

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ.. ಹತ್ಯೆ ಆರೋಪಿಗೆ ಕೇವಲ 64 ದಿನಗಳಲ್ಲಿ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಪ್ರಕರಣ - ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಗಾಜಿಯಾಬಾದ್ ಪೋಕ್ಸೊ ನ್ಯಾಯಾಲಯ.

court sentenced accused to death
ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

By

Published : Feb 4, 2023, 8:17 PM IST

ನವದೆಹಲಿ:ಗಾಜಿಯಾಬಾದ್‌ನ ಸಾಹಿಬಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್‌ನಲ್ಲಿ ನಡೆದ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಗಾಜಿಯಾಬಾದ್ ಪೋಕ್ಸೊ ನ್ಯಾಯಾಲಯ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿದೆ. ಹೌದು, ಆರೋಪಿ ಸೋನುಗೆ ನ್ಯಾಯಾಲಯವು ಮರಣದಂಡನೆ ಶಿಕ್ಷಯನ್ನು ವಿಧಿಸಿದೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಂಜೀವ್ ಬಖರಾವಾ ತಿಳಿಸಿದರು. ಈ ಪ್ರಕರಣಕ್ಕೆ ಸಬಂಧಿಸಿದಂತೆ ಒಟ್ಟು 15 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಒಟ್ಟು 64 ದಿನಗಳವರೆಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದಲ್ಲಿ ಶಿಕ್ಷೆಯನ್ನು ಪ್ರಕಟಿಸಿದೆ.

ಮರಣೋತ್ತರ ಪರೀಕ್ಷೆ:ಈ ಪ್ರಕರಣ ಗಾಜಿಯಾಬಾದ್‌ನ ಸಾಹಿಬಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಟ್ಟಿತ್ತು. ಡಿಸೆಂಬರ್ 1ರಂದು ಇಲ್ಲಿಂದ 5 ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಇದರಿಂದ ಗಾಬರಿಗೆ ಒಳಗಾದ ಪೋಷಕರು ಬಾಲಕಿಗಾಗಿ ಎಲ್ಲ ಕಡೆ ಹುಡುಕಾಟ ನಡೆಸಿದ್ದರು. ಎಷ್ಟೇ ಹುಡುಕಿದರು ಬಾಲಕಿ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು, ಅಂತಿಮ ಪ್ರಯತ್ನ ಎಂಬಂತೆ ಡಿಸೆಂಬರ್​ 2 ರಂದು ಸಮೀಪದ ಕಾಡಿನಲ್ಲಿ ಬಾಲಕಿಗಾಗಿ ತಡಕಾಟ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿತ್ತು.

ಕಾಡಿನಲ್ಲಿ ಸಿಕ್ಕ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ಪೊಲೀಸರಿಗೆ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದ್ದವು. ಮರಣೋತ್ತರ ವರದಿ ಪ್ರಕಾರ ಬಾಲಕಿಯ ಖಾಸಗಿ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು ಪತ್ತೆಯಾಗಿತ್ತು. ಅತ್ಯಾಚಾರ ಎಸಗಿ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂಬುದು ತನಿಖೆ ವೇಳೆ ಬಯಲಾಗಿತ್ತು. ಸಂಪೂರ್ಣ ತನಿಖೆ ಬಳಿಕ ಇಲ್ಲಿನ ಪೊಲೀಸರು, ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು.

ಆಘಾತಕಾರಿ ಸಂಗತಿಗಳು ಬಹಿರಂಗ:ವಿಚಾರಣೆ ವೇಳೆ ಆರೋಪಿಗಳು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದರು. ಪ್ರತಿನಿತ್ಯ ಶಾಲಾ ಬಾಲಕಿಯನ್ನು ಹಿಂಬಾಲಿಸುತ್ತಿದ್ದೆವು ಎಂದು ಬಾಯ್ಬಿಟ್ಟಿದ್ದರು. ಡಿಸೆಂಬರ್ 1 ರಂದು ಕೂಡಾ ಅವರು ಸಿಟಿ ಫಾರೆಸ್ಟ್ ಬಳಿಯ ಕಾಲೋನಿಯ ಕಡೆಗೆ ಹೋಗುತ್ತಿದ್ದಾಗ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದರು. ಆದರೆ, ಅವಳನ್ನು ಗುರಿಯಾಗಿಸಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಕಾಲೋನಿಯಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದಾರೆ ಎಂಬುದು ತಿಳಿದು ಬಂದಿತ್ತು.

ಸಿಸಿಟಿವಿ ಆಧಾರದ ಮೇಲೆ ಆರೋಪಿ ಅರೆಸ್ಟ್​:15 ತಂಡಗಳ ಅವಿರತ ಪ್ರಯತ್ನದಿಂದ 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಗುರುತಿಸಿ ಆತನ ರೇಖಾಚಿತ್ರದ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದರು. ಮೊದಲಿಗೆ ಈ ಘಟನೆಯಲ್ಲಿ ಮಕ್ಕಳ ಅಪಹರಣದ ಗ್ಯಾಂಗ್ ಕೈವಾಡವಿಲ್ಲ ಎಂದು ಬಾಲಕಿಯ ಕುಟುಂಬಸ್ಥರು ಭಾವಿಸಿದ್ದರು. ಆದರೆ, ಅತ್ಯಾಚಾರದ ವಿಷಯ ಬಯಲಿಗೆ ಬಂದಾಗ ಕುಟುಂಬಸ್ಥರು ದಿಗ್ಭ್ರಮೆಗೊಂಡಿದ್ದರು.

ಇದನ್ನೂ ಓದಿ:ನಡು ರಸ್ತೆಯಲ್ಲೇ ಹೆಂಡತಿ ಕೊಂದ ಪತಿ.. ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

ABOUT THE AUTHOR

...view details