ಚಂಡೀಗಢ: ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರನ್ನು ಸುತ್ತಿಕೊಂಡ ವಿವಾದ ಮಗ್ಗುಲು ಬದಲಿಸಿದೆ. ಶನಿವಾರ(ನಿನ್ನೆ) ಮಧ್ಯರಾತ್ರಿ ನಡೆದ ವಿಶೇಷ ವಿದ್ಯಮಾನದಲ್ಲಿ ಪಂಜಾಬ್-ಹರಿಯಾಣ ಹೈಕೋರ್ಟ್ ಪ್ರಕರಣದ ವಿಚಾರಣೆ ನಡೆಸಿದ್ದು, ಬಗ್ಗಾ ಅವರಿಗೆ ಜಾಮೀನುರಹಿತ ಬಂಧನ ವಾರೆಂಟ್‌ನಿಂದ ಮುಕ್ತಿ ನೀಡಿತು. ಇದರ ಜೊತೆಗೆ, ಮೇ 10ರ ವರೆಗೆ ಬಂಧಿಸದಂತೆ ಸೂಚಿಸಿ ಮೊಹಾಲಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಪ್ರಕರಣದ ಮುಂದಿನ ವಿಚಾರಣೆ ಮೇ 10 ರಂದು ನಡೆಯಲಿದೆ. ಹೀಗಾಗಿ, ಇದಕ್ಕೂ ಮುನ್ನ ಬಗ್ಗಾ ಅವರ ವಿರುದ್ಧ ಪೊಲೀಸರು ಯಾವುದೇ ರೀತಿಯ ಬಲವಂತದ ಕಾನೂನು ಪ್ರಕ್ರಿಯೆ ನಡೆಸುವಂತಿಲ್ಲ. ಬಿಜೆಪಿ ನಾಯಕನನ್ನು ಬಂಧಿಸುವಂತೆ ಮೊಹಾಲಿ ಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಜಾಮೀನುರಹಿತ ಬಂಧನ ವಾರೆಂಟ್ ರದ್ದುಪಡಿಸುವಂತೆ ಕೋರಿ ಬಗ್ಗಾ ಅವರು ಪಂಜಾಬ್-ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.