ಕರ್ನಾಟಕ

karnataka

ETV Bharat / bharat

ಭಯೋತ್ಪಾದನೆ ನಿಧಿ ಪ್ರಕರಣ : ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಷಾನ ಜಾಮೀನು ಅರ್ಜಿ ವಜಾ

ನ್ಯಾಯಾಲಯವು ಕಳೆದ ವಿಚಾರಣೆಯ ಸಮಯದಲ್ಲಿ, "ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಸಂವಿಧಾನದ ಬಗ್ಗೆ ಶಬ್ಬೀರ್ ಷಾಗೆ ಸಂಪೂರ್ಣ ನಂಬಿಕೆ ಇದೆಯೇ" ಎಂದು ತನ್ನ ಕಕ್ಷಿದಾರರಿಂದ ದೃಢೀಕರಿಸಲು ಖಾನ್ ಅವರನ್ನು ಕೇಳಿಕೊಂಡಿತ್ತು. ಸದ್ಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ..

Shabir Shah
ಶಬ್ಬೀರ್ ಷಾ

By

Published : Jul 2, 2021, 7:26 AM IST

ಶ್ರೀನಗರ :ಭಯೋತ್ಪಾದನೆಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಷಾನ ಜಾಮೀನು ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್ ಗುರುವಾರ ವಜಾಗೊಳಿಸಿದೆ. ಈತನ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರಿದ್ದ ಪೀಠ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ. ವಿಚಾರಣೆಯ ಸಮಯದಲ್ಲಿ ಷಾ ಪರ ವಕೀಲ ಎಂ ಎಸ್‌ ಖಾನ್, "ನನ್ನ ಕಕ್ಷಿದಾರನಿಗೆ ದೇಶದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ.

ಅವನು ಕಾನೂನುಬದ್ಧ, ನ್ಯಾಯಸಮ್ಮತವಾದದ್ದನ್ನು ನಂಬುತ್ತಾನೆ. ವೈಯಕ್ತಿಕವಾಗಿ ಸ್ವಾತಂತ್ರ್ಯ, ಮಾನವ ಹಕ್ಕುಗಳು ಮತ್ತು ಸಮಾನ ಅವಕಾಶಕ್ಕಾಗಿ ಆತ ಹೋರಾಡುತ್ತಿದ್ದಾನೆ. ಇಂದು ಆತ ಜಾಮೀನಿಗಾಗಿ ಕಾಯುತ್ತಿದ್ದಾನೆ. ಇಡಿ ಸಮನ್ಸ್​ ಜಾರಿ ಮಾಡಿದ್ದು, ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ" ಎಂದು ಹೇಳಿದ್ದಾರೆ.

ಇದನ್ನು ಓದಿ: ಮಾನವ ಕಳ್ಳಸಾಗಣೆ : ಅಧಿಕಾರಿಗಳಿಂದ ಏಳು ಅಪ್ರಾಪ್ತರ ರಕ್ಷಣೆ

"ಪ್ರಕರಣದಲ್ಲಿ ಇಡಿ ತನಿಖೆ ನಿಧಾನಗತಿಯಾಗಿದೆ. 2017ರಲ್ಲಿ ಷಾನನ್ನು ಬಂಧಿಸಲಾಯಿತು. ಅಂದಿನಿಂದ ಕೇವಲ ನಾಲ್ಕು ವಿಚಾರಣೆಗಳು ನಡೆದಿವೆ. ಈವರೆಗೆ ಏಜೆನ್ಸಿ ಕೇವಲ ಐದು ಸಾಕ್ಷಿಗಳನ್ನು ಪರೀಕ್ಷಿಸಿದೆ" ಎಂದು ಹೇಳಿದರು.

ನ್ಯಾಯಾಲಯವು ಕಳೆದ ವಿಚಾರಣೆಯ ಸಮಯದಲ್ಲಿ, "ನ್ಯಾಯಾಂಗ ವ್ಯವಸ್ಥೆ ಮತ್ತು ಭಾರತದ ಸಂವಿಧಾನದ ಬಗ್ಗೆ ಶಬ್ಬೀರ್ ಷಾಗೆ ಸಂಪೂರ್ಣ ನಂಬಿಕೆ ಇದೆಯೇ" ಎಂದು ತನ್ನ ಕಕ್ಷಿದಾರರಿಂದ ದೃಢೀಕರಿಸಲು ಖಾನ್ ಅವರನ್ನು ಕೇಳಿಕೊಂಡಿತ್ತು. ಸದ್ಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ಇಡಿ ಪರ ಹಾಜರಾದ ವಕೀಲ ರಾಜೀವ್ ಅವಸ್ಥಿ "ಸಾಕಷ್ಟು ಪ್ರಯತ್ನಗಳ ನಂತರ ಷಾನನ್ನು ಬಂಧಿಸಲಾಗಿದೆ. ಅವನಿಗೆ ಜಾಮೀನು ನೀಡಿದರೆ ಅಥವಾ ಬಿಡುಗಡೆಯಾದರೆ ಅವನು ಕಾಶ್ಮೀರಕ್ಕೆ ಪಲಾಯನ ಮಾಡುತ್ತಾನೆ. ಅವನು ದೆಹಲಿಯಲ್ಲಿದ್ದರೂ ಸಹ, ಕಾಶ್ಮೀರ ಕಣಿವೆಯ ಪರಿಸ್ಥಿತಿಯನ್ನು ಅಸ್ಥಿರಗೊಳಿಸಲು ತಂತ್ರಜ್ಞಾನವನ್ನು ಬಳಸಬಹುದು. ಇನ್ನು, ಈ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿದೆ" ಎಂದು ಹೇಳಿದರು.

ABOUT THE AUTHOR

...view details