ಕರ್ನಾಟಕ

karnataka

ETV Bharat / bharat

ಸೋಲಾರ್ ಪ್ಯಾನಲ್ ವಂಚನೆ ಪ್ರಕರಣ : ವಿವಾದಾತ್ಮಕ ಉದ್ಯಮಿ ಸರಿತಾ ಎಸ್ ನಾಯರ್ ತಪ್ಪಿತಸ್ಥೆ

ಕೇರಳ ಸೋಲಾರ ಹಗರಣದ ಮುಖ್ಯ ಆರೋಪಿ ಸರಿತಾ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಅಂತಿಮವಾಗಿ ಅರೆಸ್ಟ್ ವಾರಂಟ್ ಹೊರಡಿಸಿ ಆಕೆಯನ್ನು ತಿರುವನಂತಪುರಂನಲ್ಲಿ ಬಂಧಿಸಲಾಗಿತ್ತು. ಇದೀಗ ಆಕೆ ಪ್ರಕರಣದಲ್ಲಿ ತಪ್ಪಿತಸ್ಥೆ ಎಂಬುದು ಸಾಬೀತಾಗಿದೆ.

Saritha S Nair
Saritha S Nair

By

Published : Apr 27, 2021, 3:37 PM IST

Updated : Apr 27, 2021, 3:51 PM IST

ಕೇರಳ:ಸೋಲಾರ್ ಪ್ಯಾನಲ್ ಸ್ಥಾಪನೆಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ವಿವಾದಾತ್ಮಕ ಉದ್ಯಮಿ ಸರಿತಾ ಎಸ್ ನಾಯರ್ ತಪ್ಪಿತಸ್ಥರೆಂದು ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಘೋಷಿಸಿದೆ.

ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಮೂರನೇ ಆರೋಪಿ ಬಿ ಮಣಿಮೊನ್ ಅವರನ್ನು ಖುಲಾಸೆಗೊಳಿಸಲಾಗಿದೆ. ಕೋಯಿಕ್ಕೋಡ್ ಮೂಲದ ಕೈಗಾರಿಕೋದ್ಯಮಿ ಅಬ್ದುಲ್ ಮಜೀದ್ ಅವರ ಮನೆ ಮತ್ತು ಕಚೇರಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸುವ ಭರವಸೆ ನೀಡಿ, ಬಳಿಕ 42.70 ಲಕ್ಷ ರೂ.ಗೆ ಮೋಸ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ನೀಡಿರುವ ತೀರ್ಪು ಇದಾಗಿದೆ.

ಆದರೆ, ಮುಖ್ಯ ಆರೋಪಿ ಸರಿತಾ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಅಂತಿಮವಾಗಿ ಅರೆಸ್ಟ್ ವಾರಂಟ್ ಹೊರಡಿಸಿ ಆಕೆಯನ್ನು ತಿರುವನಂತಪುರಂನಲ್ಲಿ ಬಂಧಿಸಲಾಗಿದೆ.

Last Updated : Apr 27, 2021, 3:51 PM IST

ABOUT THE AUTHOR

...view details