ಕರ್ನಾಟಕ

karnataka

ETV Bharat / bharat

ಕೊಚ್ಚಿ ಬ್ಯೂಟಿ ಪಾರ್ಲರ್ ಫೈರಿಂಗ್ ಕೇಸ್ : ಕ್ರೈಂ ಬ್ರಾಂಚ್ ಕಸ್ಟಡಿಗೆ ರವಿ ಪೂಜಾರಿ

ಕೊಚ್ಚಿ ಬ್ಯೂಟಿ ಪಾರ್ಲರ್ ಫೈರಿಂಗ್ ಕೇಸ್ ಮಾಸ್ಟರ್ ಮೈಂಡ್ ರವಿ ಪೂಜಾರಿಯನ್ನು ಕ್ರೈಂ ಬ್ರಾಂಚ್ ಕಸ್ಟಡಿಗೆ ಪಡೆದುಕೊಳ್ಳಲು ಕೋರ್ಟ್​ ಆದೇಶಿಸಿದೆ..

pujari-to-crime-branch-team
ಕ್ರೈಂ ಬ್ರಾಂಚ್ ಕಸ್ಟಡಿಗೆ ರವಿ ಪೂಜಾರಿ

By

Published : Jun 1, 2021, 3:52 PM IST

ಎರ್ನಾಕುಲಂ(ಕೇರಳ):ಕೊಚ್ಚಿ ಬ್ಯೂಟಿ ಪಾರ್ಲರ್ ಮೇಲಿನ ಗುಂಡಿನ ದಾಳಿ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಅಂಡರ್​ ವರ್ಲ್ಡ್ ಡಾನ್​ ರವಿ ಪೂಜಾರಿಯನ್ನು ಅಪರಾಧ ವಿಭಾಗದ ಕಸ್ಟಡಿಗೆ ನೀಡಲು ಎರ್ನಾಕುಲಂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್​ ಸಮ್ಮತಿಸಿದೆ.

ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ರವಿ ಪೂಜಾರಿಯನ್ನು ವಶಕ್ಕೆ ಪಡೆಯಲು ಎರ್ನಾಕುಲಂನಿಂದ ಅಧಿಕಾರಿಗಳು ಆಗಮಿಸಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 8ರವರೆಗೆ ಕಸ್ಟಡಿಗೆ ನೀಡಲಾಗಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಲು ಅಪರಾಧ ವಿಭಾಗವು ಘಟನಾ ಸ್ಥಳಕ್ಕೆ ಕರೆದೊಯ್ಯುಲಿದ್ದಾರೆ.

2019ರ ಡಿಸೆಂಬರ್ 15ರಂದು ಎರ್ನಾಕುಲಂನ ಕಡವಂತರದಲ್ಲಿರುವ ನಟಿ ಲೀನಾ ಮಾರಿಯಾ ಪಾಲ್ ಒಡೆತನದ ಬ್ಯೂಟಿ ಪಾರ್ಲರ್‌ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿನ್ ವರ್ಗೀಸ್ ಮತ್ತು ಬಿಲಾಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ಇವರು ಪಾತಕಿ ರವಿ ಪೂಜಾರಿ ಸಹಚರರು ಎನ್ನಲಾಗ್ತಿದೆ.

ಕೊರೊನಾ ಕಹಿ ನಡುವೆ ಸಿಹಿ ಸುದ್ದಿ: ಸಿಲಿಂಡರ್ ದರದಲ್ಲಿ 122 ರೂ. ಇಳಿಕೆ

ABOUT THE AUTHOR

...view details