ಕರ್ನಾಟಕ

karnataka

ETV Bharat / bharat

ಸಾಕ್ಷ್ಯಾಧಾರಗಳ ಕೊರತೆ, ಅತ್ಯಾಚಾರ ಆರೋಪಿಗಳನ್ನು ಖುಲಾಸೆಗೊಳಿಸಿದ ಕೋರ್ಟ್​ - national news

ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿದ್ದ 4 ಆರೋಪಿಗಳನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.

court-acquits-4-accused-in-kidnap-and-rape-case
ಸಾಕ್ಷ್ಯಧಾರಗಳ ಕೊರತೆ,, ಅತ್ಯಾಚಾರ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

By

Published : Apr 3, 2023, 8:38 PM IST

ಥಾಣೆ (ಮಹಾರಾಷ್ಟ್ರ):ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಶೇಷ ನ್ಯಾಯಾಲಯವು 2015ರಲ್ಲಿ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆಯಿಂದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಿದೆ. ನ್ಯಾಯಾಧೀಶ ಪಿಎಂ ಗುಪ್ತಾ ಅವರಿದ್ದ ಪೀಠವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ್ದು, ಮಾರ್ಚ್​ 31ರಂದು ನೀಡಿದ ಆದೇಶದಲ್ಲಿ ಪ್ರಾಸಿಕ್ಯೂಷನ್​​ ಆರೋಪಿಗಳ ವಿರುದ್ಧದ ಆರೋಪಗಳನ್ನು ಸಮಂಜಸವಾಗಿ ಸಾಬೀತುಪಡಿಸಿಲು ವಿಫಲವಾಗಿದೆ.

ಘಟನೆಯ ಸಮಯದಲ್ಲಿ ಸಂತ್ರಸ್ತೆ ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ಪ್ರಾಸಿಕ್ಯೂಷನ್​ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ, ಇದರಿಂದ ಆರೋಪಿಗಳ ವಿರುದ್ಧ ಫೋಕ್ಸೋ ಕಾಯ್ದೆಯಡಿ ಆರೋಪಿಸಿಲು ಸರಿಯಾದ ಪುರಾವೆ ಒದಗಿಸಲು ನ್ಯಾಯಾಧೀಶರು ತಿಳಿಸಿದ್ದಾರೆ.

ಪ್ರಕರಣ ಹಿನ್ನೆಲೆ: ಮುಂಬೈನಲ್ಲಿ ವಾಸುತ್ತಿದ್ದ 26 ವರ್ಷದ ಆರೋಪಿಯು ಅದೇ ಪ್ರದೇಶದಲ್ಲಿ ವಾಸಿಸುತ್ತಿದ್ದ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದನು ಮತ್ತು ಅವಳನ್ನು ಮದುವೆಯಾಗಬೇಕೆಂದು ನಿರ್ಧರಿಸಿದ್ದನು. ಆದರೆ, ಆಗಸ್ಟ್ 14, 2015ರಂದು, ಆ ವ್ಯಕ್ತಿ, ಅವನ ತಾಯಿ ಮತ್ತು ಇನ್ನಿಬ್ಬರು ಸಂತ್ರಸ್ತೆಯನ್ನು ರಾಯಗಡ ಜಿಲ್ಲೆಯ ಪನ್ವೆಲ್ ಪ್ರದೇಶಕ್ಕೆ ಕರೆದೊಯ್ದು ಸಂತ್ರಸ್ತೆಯನ್ನು ಮದುವೆಯಾಗುವಂತೆ ಒತ್ತಾಯಿಸಿದರು, ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದರು. ಸಂತ್ರಸ್ತೆ ಮರುದಿನ ಮನೆಗೆ ಹಿಂದಿರುಗಿ ಘಟನೆಯ ಬಗ್ಗೆ ತನ್ನ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ. ನಂತರ, ದೂರಿನ ಆಧಾರದ ಮೇಲೆ, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಯಿತು.

ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ಪ್ರಾಸಿಕ್ಯೂಷನ್ ಸಂತ್ರಸ್ತೆಯ ಜನನ ಪ್ರಮಾಣಪತ್ರ ಅಥವಾ ಪ್ರಾಥಮಿಕ ಶಾಲೆಯಿಂದ ನೀಡಿದ ಪ್ರಮಾಣಪತ್ರವನ್ನು ಹಾಜರುಪಡಿಸಿಲ್ಲ, ಇದು ಪೋಕ್ಸೊ ಕಾಯ್ದೆಯಡಿ ಅಪರಾಧವೆಂದು ಪರಿಗಣಿಸಲು ಕಡ್ಡಾಯವಾಗಿದೆ. ಇಲ್ಲಿ, ಪ್ರಾಸಿಕ್ಯೂಷನ್ ಮಧ್ಯಮ/ಮಾಧ್ಯಮಿಕ ಶಾಲೆಯಿಂದ ನೀಡಲಾದ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದೆ, ಘಟನೆಯ ಸಮಯದಲ್ಲಿ ಸಂತ್ರಸ್ತೆ ವಯಸ್ಸನ್ನು ಸಾಬೀತುಪಡಿಸಲು ಇದು ಸ್ಪಷ್ಟವಾಗಿ ಸ್ವೀಕಾರಾರ್ಹವಲ್ಲ ಎಂದು ನ್ಯಾಯಾಲಯ ಹೇಳಿದೆ.

ಘಟನೆಯ ಸಮಯದಲ್ಲಿ ಆಕೆಯ ವಯಸ್ಸನ್ನು ನಿರ್ಧರಿಸಲು ಸಂತ್ರಸ್ತೆಯ ಮೂಳೆ ಆಸಿಫಿಕೇಶನ್ ಪರೀಕ್ಷೆಗೆ ಉಲ್ಲೇಖಿಸಲಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ವೈದ್ಯಕೀಯ ಸಾಕ್ಷ್ಯದ ಪ್ರಕಾರ, ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಸಂತ್ರಸ್ತೆ ತನ್ನ ವಯಸ್ಸನ್ನು 18 ವರ್ಷ ಎಂದು ಹೇಳಿದ್ದಾರೆ. ಹೀಗಾಗಿ ಮೇಲೆ ತಿಳಿಸಿದ ಚರ್ಚೆಯ ಆಧಾರದ ಮೇಲೆ, "ಘಟನೆಯ ಸಮಯದಲ್ಲಿ, ಸಂತ್ರಸ್ತೆಯು ಪೋಕ್ಸೋ ಕಾಯಿದೆಯ ಸೆಕ್ಷನ್ 2 (ಡಿ)ರ ಅರ್ಥದಲ್ಲಿ 'ಬಾಲಕಿ' ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನಾನು ತೀರ್ಮಾನಕ್ಕೆ ಬಂದಿದ್ದೇನೆ.," ಎಂದು ನ್ಯಾಯಾಧೀಶರು ಹೇಳಿದರು.

ವೈದ್ಯಕೀಯ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು ಸಂತ್ರಸ್ತೆ ಮತ್ತು ಆರೋಪಿಗಳ ನಡುವೆ ಲೈಂಗಿಕ ಸಂಭೋಗದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ನಿಖರವಾದ ಮತ್ತು ವಿಶ್ವಾಸಾರ್ಹ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ, ಆರೋಪಿಯು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನಾನು ತೀರ್ಮಾನಕ್ಕೆ ಬಂದಿದ್ದೇನೆ,”

ಪ್ರಾಸಿಕ್ಯೂಷನ್ ಸಾಕ್ಷಿಗಳ ಸಾಕ್ಷ್ಯವು ಸ್ಥಿರವಾಗಿಲ್ಲ ಎಂದು ಗಮನಿಸಿ ಮೇಲಿನ ಚರ್ಚೆಯ ಆಧಾರದ ಮೇಲೆ, ಐಪಿಸಿ ಸೆಕ್ಷನ್ 366 (ಅಪಹರಣ ಅಥವಾ ಮದುವೆಗೆ ಮಹಿಳೆಯನ್ನು ಒತ್ತಾಯಿಸುವುದು) ಅಡಿ ಶಿಕ್ಷಾರ್ಹ ಅಪರಾಧಗಳಿಗಾಗಿ ಆರೋಪಿಗಳ ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಆರೋಪಿಗಳನ್ನು ಖುಲಾಸೆಗೊಳಿಸಿದರು.

ಇದನ್ನೂ ಓದಿ:ಸಾಕ್ಷ್ಯಾಧಾರ ಕೊರತೆಯಿಂದ ಅತ್ಯಾಚಾರ ಕೇಸ್​ ರದ್ದು.. ತನಿಖೆಯಲ್ಲಿನ ದೋಷ ಆರೋಪಿಗೆ ಲಾಭ: ಹೈಕೋರ್ಟ್

ABOUT THE AUTHOR

...view details