ಕರ್ನಾಟಕ

karnataka

ETV Bharat / bharat

ಕೃಷಿ ಕಾಯ್ದೆ ತಿದ್ದುಪಡಿ: ರೈತರ ಬೆಂಬಲಕ್ಕಾಗಿ ಪ್ರತಿಭಟನೆ ಸ್ಥಳದಲ್ಲೇ ಮದುವೆಯಾದ ಜೋಡಿ! - ರೇವಾ ಸುದ್ದಿ,

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಹೋರಾಟದ ಹಿನ್ನೆಲೆ ರೈತರ ಬೆಂಬಲಕ್ಕಾಗಿ ಇಲ್ಲೊಂದು ಜೋಡಿ ಪ್ರತಿಭಟನಾ ಸ್ಥಳದಲ್ಲೇ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

Couple ties knot at farmers protest site, Couple ties knot at farmers protest site in Rewa, Couple marriage at farmers protest site in Rewa, Rewa news, Rewa farmer protest news, ರೈತರ ಪ್ರತಿಭಟನೆಯ ಸ್ಥಳದಲ್ಲಿ ಮದುವೆಯಾದ ಜೋಡಿ, ರೇವಾದಲ್ಲಿ ರೈತರ ಪ್ರತಿಭಟನೆಯ ಸ್ಥಳದಲ್ಲಿ ಮದುವೆಯಾದ ಜೋಡಿ, ರೇವಾ ಸುದ್ದಿ, ರೇವಾ ರೈತರ ಪ್ರತಿಭಟನೆ ಸುದ್ದಿ,
ರೈತರ ಬೆಂಬಲಕ್ಕಾಗಿ ಪ್ರತಿಭಟನೆ ಸ್ಥಳದಲ್ಲೇ ಮದುವೆಯಾದ ಜೋಡಿ

By

Published : Mar 19, 2021, 10:27 AM IST

ರೇವಾ( ಮಧ್ಯಪ್ರದೇಶ):ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಸಾಗುತ್ತಲೇ ಇದೆ. ರೈತರ ಬೆಂಬಲಕ್ಕೆ ಸಾಕಷ್ಟು ಜನ ನಿಂತಿದ್ದಾರೆ. ಇಲ್ಲೊಂದು ಜೋಡಿ ರೈತರ ಪ್ರತಿಭಟನೆ ನಡೆಯುವ ಸ್ಥಳದಲ್ಲೇ ಮದುವೆ ಮಾಡಿಕೊಂಡು ಗಮನ ಸೆಳೆದಿದೆ.

ರೈತರ ಬೆಂಬಲಕ್ಕಾಗಿ ಪ್ರತಿಭಟನೆ ಸ್ಥಳದಲ್ಲೇ ಮದುವೆಯಾದ ಜೋಡಿ

ಮಾರ್ಚ್​ 18 ರಂದು ರೈತ ನಾಯಕ ರಾಮ್​ಜಿತ್​ ಸಿಂಗ್​ ತನ್ನ ಮಗ ಸಚಿನ್​ ಸಿಂಗ್​ ಮದುವೆಯನ್ನು ಆಸ್ಮಾ ಸಿಂಗ್ ಜೊತೆ ಪ್ರತಿಭಟನಾ ಸ್ಥಳದಲ್ಲೇ ನಡೆಸಿದರು. ಇನ್ನು ಮದುವೆ ವೇಳೆ ಅಗ್ನಿಕುಂಡ ಸ್ಥಳದಲ್ಲಿ ಸಂವಿಧಾನ ರಚಿತ ಡಾ.ಬಿ.ಆರ್​ ಅಂಬೇಡ್ಕರ್​ ಮತ್ತು ಸಾವಿತ್ರಿ ಬಾ ಪುಲೆ ಫೋಟೋಗಳನ್ನಿಟ್ಟು ಅದರ ಸುತ್ತ ಏಳು ಹೆಜ್ಜೆ ಹಾಕು ಮೂಲಕ ಸಚಿನ್​ ಸಿಂಗ್​ ಮತ್ತು ಆಸ್ಮಾ ಸಿಂಗ್​ ಸಾಂಸರಿಕ ಜೀವನಕ್ಕೆ ಕಾಲಿಟ್ಟರು.

ಜನವರಿ 3 ರಿಂದ ರೈತರ ಪ್ರತಿಭಟನೆ ನಡೆಯುತ್ತಿದೆ. ರೈತರ ಹಿತ ಕಾಯದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಅನ್ನಾದಾತರು ಪ್ರತಿಭಟನೆ ಮೂಲಕ ಒತ್ತಾಯಿಸುತ್ತಿದ್ದಾರೆ. ಆದ್ರೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ರೈತರು ಪ್ರತಿಯೊಂದು ಕಾರ್ಯವನ್ನು ಈ ಸ್ಥಳದಲ್ಲಿ ಆಯೋಜಿಸುತ್ತಾರೆ. ಜನ್ಮದಿನಗಳನ್ನು ಸಹ ಇಲ್ಲಿ ಆಚರಿಸಲಾಗುತ್ತದೆ. ಈ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ಬಿಡುವುದಿಲ್ಲ ಎಂದು ವರ ಸಚಿನ್ ಸಿಂಗ್ ಹೇಳಿದರು.

ಕೃಷಿ ಕಾನೂನುಗಳನ್ನು ರದ್ದುಗೊಳಿಸುವವರೆಗೂ ನಾವು ಈ ಸ್ಥಳವನ್ನು ತೊರೆಯುವುದಿಲ್ಲ. ಈ ಮದುವೆ ಮೂಲಕ ಸರ್ಕಾರಕ್ಕೆ ಬಲವಾದ ಸಂದೇಶವನ್ನು ನೀಡಲು ಬಯಸಿದ್ದೇವೆ ಎಂದು ಮಧ್ಯಪ್ರದೇಶದ ಕಿಸಾನ್ ಸಭೆಯೊಂದಿಗೆ ಸಂಬಂಧ ಹೊಂದಿರುವ ಸಚಿನ್ ತಂದೆ ರಾಮ್‌ಜಿತ್ ಸಿಂಗ್ ಹೇಳಿದ್ದಾರೆ.

For All Latest Updates

ABOUT THE AUTHOR

...view details