ಪುಣೆ(ಮಹಾರಾಷ್ಟ್ರ): 16 ತಿಂಗಳ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿ, ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಯನ್ನು ಸೊಲ್ಲಾಪುರ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಹೆಣ್ಣು ಮಗುವಿನ 26 ವರ್ಷದ ತಂದೆ ಜನವರಿ 3ರಂದು ಸಿಕಂದರಾಬಾದ್ನ ಮನೆಯಲ್ಲಿ ಮಗುವಿಗೆ ಲೈಂಗಿಕ ಕಿರುಕುಳ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದು, ಇದಕ್ಕೆ ತಾಯಿ ಕೂಡ ಸಹಾಯ ಮಾಡಿದ್ದಾಳೆ. ಇದಾದ ಬಳಿಕ ದಂಪತಿ ತೆಲಂಗಾಣದ ಸಿಕಂದರಾಬಾದ್ನಿಂದ ರಾಜ್ಕೋಟ್ಗೆ ತೆರಳುವ ರೈಲಿನಲ್ಲಿ ಮೃತದೇಹದೊಂದಿಗೆ ತಮ್ಮ ಊರಿಗೆ ತೆರಳುತ್ತಿದ್ದರು.
ಇದನ್ನೂ ಓದಿ:ಮತ್ತೆ ಹೆಣ್ಣು ಹುಟ್ಟುವ ಭಯದಲ್ಲಿ ಹೆರಿಗೆ ಹಿಂದಿನ ದಿನವೇ ಗರ್ಭಿಣಿ ಆತ್ಮಹತ್ಯೆ: ಹೊಟ್ಟೆಯಲ್ಲಿದ್ದದ್ದು ಗಂಡು ಮಗು
ಪ್ರಯಾಣದ ಸಮಯದಲ್ಲಿ ಮಗುವಿನ ಚಲನವಲನದ ಬಗ್ಗೆ ರೈಲಿನಲ್ಲಿದ್ದ ಇತರೆ ಪ್ರಯಾಣಿಕರಿಗೆ ಅನುಮಾನ ಬಂದಿದ್ದು, ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಸೊಲ್ಲಾಪುರ ನಿಲ್ದಾಣದ ರೈಲ್ವೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು, ಆರೋಪಿಗಳನ್ನು ರೈಲಿನಿಂದ ಕೆಳಗಿಳಿಸಿ ಮಗುವನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ರೈಲ್ವೆ ಪೊಲೀಸ್ ಅಧಿಕಾರಿ ಗಣೇಶ್ ಶಿಂಧೆ ತಿಳಿಸಿದ್ದಾರೆ.
ಪರೀಕ್ಷೆಗೊಳಪಡಿಸಿದ ನಂತರ ಮಗು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದ್ದು, ಲೈಂಗಿಕ ದೌರ್ಜನ್ಯ ವೆಸಗಿರುವುದು ದೃಢಗೊಂಡಿದೆ. ಇದೀಗ ದಂಪತಿ ವಿರುದ್ಧ ವಿವಿಧ ಐಪಿಸಿ ಕಲಂ ಹಾಗು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೋಕ್ಸೊ) ಸೇರಿದಂತೆ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.