ಕಂಕರ್ :ಯುವಕನೋರ್ವ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಮಾಡಿದ್ದ. ಬಳಿಕ ವಿವಾಹವಾಗಲು ನಿರಾಕರಿಸಿದ ಕಾರಣ ಜೈಲು ಸೇರಿದ್ದ. ಆದರೆ, ಇದೀಗ ಜೈಲಿನ ಆವರಣದಲ್ಲೇ ತನ್ನ ಪ್ರೇಯಸಿಯನ್ನು ವರಿಸಿದ್ದಾನೆ.
22 ವರ್ಷದ ಯುವತಿಯನ್ನು ಮದುವೆಯಾಗಲು ನಿರಾಕರಿಸಿ ಕಂಕರ್‌ನ ಜಿಲ್ಲಾ ಜೈಲಿನಲ್ಲಿ ಬಂಧನಕ್ಕೊಳಗಾಗಿದ್ದ 24 ವರ್ಷದ ದೀಪಕ್ ಎಂಬ ಯುವಕ, ಕೊನೆಗೆ ಜೈಲಿನ ಆವರಣದಲ್ಲಿಯೇ ಪ್ರಿಯತಮೆಯನ್ನು ಮದುವೆಯಾಗಿದ್ದಾನೆ.
ಮದುವೆಯಾಗುವುದಾಗಿ ಭರವಸೆ ನೀಡಿದ್ದ ದೀಪಕ್ ಬಳಿಕ ವಿವಾಹಕ್ಕೆ ನಿರಾಕರಿಸಿದ್ದ. ಈ ಹಿನ್ನೆಲೆ ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನ್ಯಾಯಾಲಯದಲ್ಲಿ ವಿಚಾರಣೆಯ ನಂತರ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನವೆಂಬರ್ 2, 2020ರಿಂದ ಜೈಲಿನಲ್ಲಿರಿಸಲಾಗಿತ್ತು.
ಜೈಲು ಆವರಣದಲ್ಲೇ ನಡೆಯಿತು ಪ್ರೇಮಿಗಳ ವಿವಾಹ ಇದನ್ನೂ ಓದಿ:ನಟ ಪವನ್ ಸಿಂಗ್ ಕುರಿತು ಆಕ್ಷೇಪಾರ್ಹ ವಿಡಿಯೋ ಪೋಸ್ಟ್ ಮಾಡಿದ ಕಿಡಿಗೇಡಿಗಳು : ಎಫ್‌ಐಆರ್ ದಾಖಲು
ಬಳಿಕ ದೀಪಕ್ ಯುವತಿಯನ್ನು ಮದುವೆಯಾಗಲು ಒಪ್ಪಿದ್ದರಿಂದ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಲಯ ಜೈಲು ಅಧೀಕ್ಷಕರಿಗೆ ಮದುವೆ ವ್ಯವಸ್ಥೆ ಮಾಡುವಂತೆ ನಿರ್ದೇಶನ ನೀಡಿತ್ತು. ಜೈಲು ಅಧೀಕ್ಷಕ ಖೋಮೇಶ್ ಮಾಂಡವಿ ಜೈಲು ಆವರಣದಲ್ಲಿ ವಿವಾಹ ಸಮಾರಂಭ ಏರ್ಪಡಿಸಿದರು. ಜೈಲಿನ ಅಧಿಕಾರಿಗಳ ಸಮ್ಮುಖದಲ್ಲಿ ಅರ್ಚಕರನ್ನು ಕರೆಸಿ ಇಬ್ಬರ ವಿವಾಹವನ್ನು ನೆರವೇರಿಸಲಾಯಿತು.