ಸುಲ್ತಾನ್ಪುರ (ಉತ್ತರ ಪ್ರದೇಶ):ಮಾನಸಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಕೊಡಲಿಯಿಂದ ದಂಪತಿ ಹತ್ಯೆ ಮಾಡಿರುವ ಘಟನೆ ಸುಲ್ತಾನ್ಪುರ ಜಿಲ್ಲೆಯ ಗೋಸೈಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಫತೇಪುರ್ ಚಪರ್ಹ್ವಾ ಗ್ರಾಮದಲ್ಲಿ ಭಾನುವಾರ ನಡೆದಿದೆ. ಹತ್ಯೆಗೊಳಗಾದ ವ್ಯಕ್ತಿ ಗಂಗಾ ಪ್ರಸಾದ್ ಚೌಬೆ ವಾರಾಣಸಿಯ ಚೋಲಾಪುರದ ಬಂಟರಿ ಪ್ರದೇಶದ ನಿವಾಸಿ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದು ಬಂದಿದೆ. ಇನ್ನು ಆರೋಪಿ ದಂಪತಿಯಾದ ಪ್ರದೀಪ್ ನಿಶಾದ್ ಮತ್ತು ಪದ್ಮಾವತಿಯಾಗಿದ್ದಾರೆ. ದಂಪತಿಯನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ
ಘಟನೆ ವಿವರ: ಮೃತ ಗಂಗಾ ಪ್ರಸಾದ್ ಔಷಧ ಕಂಪನಿಯೊಂದರಲ್ಲಿ ಎಂಆರ್ ಆಗಿ ಕೆಲಸ ಮಾಡುತ್ತಿದ್ದ. ಈ ಆರೋಪಿ ಪದ್ಮಾವತಿ ಮುಂಬೈನಲ್ಲಿ ಇದ್ದಾಗ ಆತನೊಂದಿಗೆ ಸಂಪರ್ಕ ಹೊಂದಿದ್ದಳು. ಇವರಿಬ್ಬರ ನಡುವೆ ಸಂಬಂಧವಿತ್ತು. ಆ ಸಮಯದಲ್ಲಿ ಆತ ಅವರಿಬ್ಬರ ವಿಡಿಯೋವನ್ನು ಮಾಡಿದ್ದನು. ಆದರೆ, ಪದ್ಮಾವತಿಗೆ ಪ್ರದೀಪ್ ಜೊತೆ ವಿವಾಹವಾಗುತ್ತದೆ. ಮದುವೆಯ ನಂತರ ಆಕೆ ಗಂಗಾ ಪ್ರಸಾದ್ನೊಂದಿಗಿನ ಸಂಬಂಧವನ್ನು ಮುರಿದುಕೊಂಡಿದ್ದಳು.
ಆದರೆ, ಗಂಗಾ ಪ್ರಸಾದ್ ಅವರ ವಿಡಿಯೋ ಇಟ್ಟುಕೊಂಡು ಪದ್ಮಾವತಿಗೆ ಸಂಬಂಧ ಬೆಳೆಸುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದನು. ಇದರಿಂದ ನೊಂದ ಪದ್ಮಾವತಿ ತನ್ನ ಪತಿಗೂ ತಿಳಿಸಿರುತ್ತಾರೆ. ಇದಾದ ಬಳಿಕ ಪತಿ ಪತ್ನಿ ಇಬ್ಬರೂ ಮುಂಬೈನಿಂದ ಸುಲ್ತಾನ್ಪುರಕ್ಕೆ ಬಂದಿದ್ದರು. ಈ ಮೃತ ಗಂಗಾ ಪ್ರಸಾದ್ ಚೌಬೆ ಕೂಡ ಮುಂಬೈನಿಂದ ಲಕ್ನೋಗೆ ವರ್ಗಾವಣೆಗೊಂಡಿದ್ದರು. ಇಷ್ಟಕ್ಕೆ ಸುಮ್ಮನಿರದ ಪ್ರಸಾದ್ ಪದ್ಮಾವತಿ ಇದ್ದ ಗ್ರಾಮಕ್ಕೂ ತೆರಳಿದಲ್ಲದೇ, ಅವರ ಮನೆಯ ಬಳಿಗೂ ಶನಿವಾರ ಬಂದಿದ್ದಾನೆ.